ಮುಂಬಯಿ: ರಾಷ್ಟ್ರೀಯ ಮಟ್ಟದ ಕ್ರೀಡಾಪಟು, ನೇಶನಲ್ ಮಾಸ್ಟರ್ಸ್ ಅಥ್ಲೆಟಿಕ್, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ವಿದ್ಯಾರ್ಥಿನಿ, ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾದರ್ಶಿ ಆಗಿರುವ ಸುರೇಖಾ ಹೇಮಂತ್ ದೇವಾಡಿಗ ಇವರ ಮಾತೃಶೀ ಸಿಂಧು ಸುಂದರ ದೇವಾಡಿಗ ನಿಧನ (೮೧.) ಎ.06ರಂದು ಬುಧವಾರ ಮುಂಜಾನೆ ಇವರು ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದೇರೆಬೈಲು ಕೊಂಚಾಡಿ ಮೂಲತಃ ಮುಚ್ಚೂರು ಸುಂದರ ದೇವಾಡಿಗ ಇವರ ಧರ್ಮಪತ್ನಿ ಆಗಿದ್ದ ಮೃತರು ಮೂಲತಃ ಉಚ್ಚಿಲ ನಿವಾಸಿ ಆಗಿದ್ದು ದೇರೆಬೈಲ್ನಲ್ಲಿ ವಾಸವಾಗಿದ್ದರು. ಮೃತರು ಒಂದು ಗಂಡು, ಮೂರು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
