ಬಂಟ್ವಾಳ: ತಾಲ್ಲೂಕಿಗೆ ಸಮೀಪದ ಕಣಿಯೂರು ನಿವಾಸಿ, ಹಿರಿಯ ವ್ಯಾಪಾರಿ ಶೀನ ಶೆಟ್ಟಿ ಕಣಿಯೂರು (೬೯) ಇವರು ಸಿದ್ಧಕಟ್ಟೆ ಸ್ವಗೃಹದಲ್ಲಿ ಎ.23ರಂದು ಶನಿವಾರ ಮಧ್ಯಾಹ್ನ ನಿಧನರಾದರು.
ಕಳೆದ ೫೦ ವರ್ಷಗಳಿಂದ ಕಣಿಯೂರಿನಲ್ಲಿ ಹೋಟೆಲ್ ಮತ್ತು ದಿನಸಿ ವ್ಯಾಪಾರ ಜೊತೆಗೆ ಬೀಡಿ ಬ್ರಾಂಚ್ ನಡೆಸುತ್ತಿದ್ದ ಇವರು ವಿವಿಧ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಶ್ರೀ ಮಹಾವಿಷ್ಣು ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿ, ಕೊಡುಗೈದಾನಿಯಾಗಿದ್ದರು. ಮೃತರಿಗೆ ಪತ್ನಿ ಕಣಿಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅರುಣಾ ಶೆಟ್ಟಿ, ಪುತ್ರ ಮತ್ತು ಪುತ್ರಿ ಇದ್ದಾರೆ.
