ಮುಂಬಯಿ: ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ಎನ್‌ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಇವರು ತನ್ನ ರಾಜಕೀಯ ಗುರು ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ) ವರಿಷ್ಠ ನಾಯಕ ಶರದ್ ಪವಾರ್ ಸುಪುತ್ರಿ, ಎನ್‌ಸಿಪಿ ಸಂಸದೀಯ ನಾಯಕಿ ಸಂಸತ್ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಇಂದಿಲ್ಲಿ ಗುರುವಾರ ಮುಂಬಯಿಯಲ್ಲಿನ ಕಚೇರಿಯಲ್ಲಿ ಭೇಟಿಗೈದು ಮೂಲ್ಕಿ ತಾಲೂಕು ಅಭಿವೃದ್ಧಿ ಸಮಿತಿ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿದರು.Laxman Poojary NCP Mulki

ಈ ಸಂದರ್ಭದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ ಸಮಿತಿ ಸದಸ್ಯ ನಿರಂಜನ್ ಲಕ್ಷ್ಮಣ್ ಪೂಜಾರಿ, ಹರೀಶ್ ಪುತ್ರನ್ ಉಪಸ್ಥಿತರಿದ್ದರು. ಈ ಮನವಿಯನ್ನು (ಜ್ಞಾಪಕ ಪತ್ರ) ಕೇಂದ್ರ ಸರ್ಕಾರದ ಹಿರಿಯ ಮಂತ್ರಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿಫಾರಸು ಮಾಡುವುದಾಗಿ ಅವರು ಭರವಸೆ ನೀಡಿದರು.Laxman Poojary NCP Mulki 1

ಮೂಲ್ಕಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ಮತ್ತು ಅವರ ತಂಡವು ಕಳೆದ ಸೋಮವಾರ (ಫೆ.೨೮) ಮಂಗಳೂರುನಲ್ಲಿ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿದ್ದರು.

By suddi9

Leave a Reply

Your email address will not be published. Required fields are marked *