ಮುಂಬಯಿ : ಗುಜರಾತ್ ಬಿಲ್ಲವರ ಸಂಘವು ಕಳೆದ ಮಂಗಳವಾರ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದ ಶ್ರೀ ನಾರಾಯಣ ಗುರು ಮಂದಿರದಲ್ಲಿ ಜಿಬಿಎಸ್ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ಸಾರಥ್ಯದಲ್ಲಿ ಮಹಾಶಿವರಾತ್ರಿಯನ್ನು ವಿಧಿವತ್ತಾಗಿ ಆಚರಿಸಿತು.Gujarat Billawar Shivaraatri 2  Gujarat Billawar Shivaraatri 3

ಜಿಬಿಎಸ್ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು), ಉಪಸ್ಥಿತರಿದ್ದು ಕಾರ್ಯಕ್ರಮದ ಮಧ್ಯಾಂತರದಲ್ಲಿ ಸಂಸ್ಥೆಯ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸುಶಿಕ್ಷಿತರನ್ನಾಗಿಸುವ ಹಾಗೂ ಸದಸ್ಯ ಬಾಂಧವರ ಸ್ವಾಸ್ಥ್ಯತಾ ಕಾಳಜಿಗಾಗಿನ ಆರೋಗ್ಯ ಭಾಗ್ಯ ಹಾಗೂ ವಿಮಾ ಯೋಜನೆ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು. ಮಾಜಿ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅವರು ಜಿಬಿಎಸ್ ವತಿಯಿಂದ ಅಹ್ಮದಾಬಾದ್‌ನ ವೇದ ಹರೀಶ್ ಅವರ ಇಬ್ಬರು ಮಕ್ಕಳ ಶಿಕ್ಷಣದ ದತ್ತು ಸ್ವೀಕಾರ ಮಾಡುವುದಾಗಿ ತಿಳಿಸಿದರುGujarat Billawar Shivaraatri 5 Gujarat Billawar Shivaraatri 4

ಉಪಾಧ್ಯಕ್ಷ ವಿ.ಡಿ ಅಮೀನ್, ಗೌ| ಪ್ರ| ಕಾರ್ಯದರ್ಶಿ ವಾಸು ವಿ.ಸುವರ್ಣ, ಗೌ| ಪ್ರ| ಕೋಶಾಧಿಕಾರಿ ಸುದೇಶ್ ವೈ. ಕೋಟ್ಯಾನ್, ಜೊತೆ ಕಾರ್ಯದರ್ಶಿ ದಯಾನಂದ ಸಾಲಿಯಾನ್, ಲೋಕಯ್ಯ ಪೂಜಾರಿ, ವಸಂತ್ ಕುಂದರ್, ಜೊತೆ ಕೋಶಾಧಿಕಾರಿ ರವಿ ಸಾಲಿಯಾನ್, ಸಂಚಾಲಕರಾದ ರೋಹಿದಾಸ್ ಪೂಜಾರಿ, ಪ್ರಭಾಕರ್ ಪೂಜಾರಿ (ಸೂರತ್), ಲಕ್ಷ ್ಮಣ ಪೂಜಾರಿ, ಸಲಹಾ ಸಮಿತಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯೆಯರು, ವಾಪಿ-ವಲ್ಸಾಡ್, ಅಂಕ್ಲೇಶ್ವರ, ವಾಪಿ ಮತ್ತಿತರ ಶಾಖೆಗಳ ಧುರೀಣರು, ಭಕ್ತರನೇಕರು ಹಾಜರಿದ್ದು ಪೂಜಧಿಗನ್ನು ನೆರವೇರಿಸಿದರು.Gujarat Billawar Shivaraatri A Gujarat Billawar Shivaraatri A1

By suddi9

Leave a Reply

Your email address will not be published. Required fields are marked *