ಬಂಟ್ವಾಳ: ತಾಲ್ಲೂಕಿನ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಈಚೆಗೆ ನಡೆದ ವಾರ್ಷಿಕ ಜಾತ್ರೆ ಪ್ರಯುಕ್ತ ಶ್ರೀ ಮಹಮ್ಮಾಯಿ ದೇವರ ಬಿಂಬ ಮೆರವಣಿಗೆ ನಡೆಯಿತು.27btl-Sangabettu

ಇಲ್ಲಿನ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಮುಂಬರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಳದ ಜೀರ್ಣೋದ್ಧಾರ ಕಾಮಗಾರಿಗೆ ಅನುದಾನ ನೀಡುವಂತೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರಿಗೆ ಮನವಿ ಸಲ್ಲಿಸಿದ್ದಾರೆ.

ಈಚೆಗೆ ನಡೆದ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಶಾಸಕರನ್ನು ದೇವಳದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ದೇವಳದ ಚಂದ್ರಹಾಸ ಗುರಿಕಾರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ ಶೆಟ್ಟಿಗಾರ್, ಕಾರ್ಯಾಧ್ಯಕ್ಷ ದೇವಪ್ಪ ಶೆಟ್ಟಿಗಾರ್, ಪ್ರಮುಖರಾದ ರತ್ನಕುಮಾರ್ ಚೌಟ, ಪ್ರಭಾಕರ ಪ್ರಭು, ಭವಾನಿ ಶಂಕರ್, ಮಾಧವ ಶೆಟ್ಟಿಗಾರ್, ಭೋಜ ಶೆಟ್ಟಿಗಾರ್, ದೀಪಕ್, ನೋಣಯ ಶೆಟ್ಟಿಗಾರ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *