ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕೃಷಿಕರಿಗಾಗಿ ಜಲಕ್ರಾಂತಿ ಮತ್ತು ಸಂಪರ್ಕ ಕೊಂಡಿಯಾಗಿ ಒಟ್ಟು ೧೬ ಕಡೆ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಕ್ಕೆ ಒಟ್ಟು ರೂ ೩೮.೮೮ ಕೋಟಿ ಅನುದಾನ ಮಂಜೂರಾಗಿದೆ.
ಬಡಗಬೆಳ್ಳೂರಿನ ಕಿರಾಳೆ ಎಂಬಲ್ಲಿ ರೂ ೧.೩೫ ಕೋಟಿ, ಕುರಿಯಾಳ ಪಾಪದಡ್ಕದಲ್ಲಿ ರೂ ೧.೩೦ ಕೋಟಿ, ರಾಯಿ ಮಿಯಾಳು ರಂಬಲ್ಲಿ ರೂ ೨.೩೦ ಕೋಟಿ, ಮೂಡನಡುಗೋಡು ಗ್ರಾಮದ ನರ್ದರಕಟ್ಟೆಯಲ್ಲಿ ರೂ ೨ ಕೋಟಿ, ಅಜ್ಜಿಬೆಟ್ಟು ಕಳಸಡ್ಕದಲ್ಲಿ ರೂ ೫.೪೦ ಕೋಟಿ, ಮಣಿನಾಲ್ಕೂರು ಬಾರೆತ್ತಿಮಾರು ಎಂಬಲ್ಲಿ ರೂ ೨.೬೪ ಕೋಟಿ, ಉಳಿ ಗ್ರಾಮದ ಮಣ್ಕೆದಡಿ ಎಂಬಲ್ಲಿ ರೂ ೩.ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣಗೊಳ್ಳಲಿದ್ದು, ಮಾ. ೨ ರಂದು ಶಿಲಾನ್ಯಾಸ ನೆರವೇರಲಿದೆ.
ಮಾಣಿ ಗ್ರಾಮದ ಅರ್ಬಿಯಲ್ಲಿ ರೂ ೩. ೨೦ ಕೋಟಿ, ಭರಣಿಕರೆಯಲ್ಲಿ ರೂ ೧.೩೫ ಕೋಟಿ, ಅಮ್ಟೂರು ಗ್ರಾಮದ ಪೂವಳದಲ್ಲಿ ರೂ ೧.೮೦ ಕೋಟಿ, ಸಜಿಪಮೂಡ ಗ್ರಾಮದ ಕಲ್ಲಕುಮೇರ್ ಎಂಬಲ್ಲಿ ರೂ ೨ ಕೋಟಿ, ಸಾಲೆತ್ತೂರು ಚೆಂಬರಕಲ್ಲು(ಮಲಾರು) ಎಂಬಲ್ಲಿ ರೂ ೪.೩೪ ಕೋಟಿ, ಕೊಳ್ಳಾಡು ಕಟ್ಟತ್ತಿಲ ಮಠ ಎಂಬಲ್ಲಿ ರೂ ೩ ಕೋಟಿ, ವಿಟ್ಲಪಡ್ನೂರು ಮೂರ್ಕಜೆಯಲ್ಲಿ ರೂ ೨.೭೫ ಕೋಟಿ, ಕನ್ಯಾನ ಬದಿಕೋಡಿ ಯಲ್ಲಿ ರೂ ೧.೪೫ ಕೋಟಿ, ಕರೋಪಾಡಿ ದೇವಸ್ಯ ಎಂಬಲ್ಲಿ ರೂ ೧ ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣಗೊಳ್ಳಲಿದ್ದು, ಮಾ.೩ ರಂದು ಶಾಸಕ ರಾಜೇಶ್ ನಾಯ್ಕ್ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
