ಕೈಕಂಬ : ರಾಷ್ಟ್ರೀಯ ಹೆದ್ದಾರಿಯ ಗುರುಪುರ ಅಲೈಗುಡ್ಡೆಯಲ್ಲಿ ಶನಿವಾರ ಮಧ್ಯಾಹ್ನ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಮೇಲೇರಿ ಅಂಗಡಿಗೆ ಅಪ್ಪಳಿಸಿ, ಪಲ್ಟಿ ಹೊಡೆದ ಘಟನೆ ಸಂಭವಿಸಿದೆ.
ವಾಮಂಜೂರು ಹೋಟೆಲ್ ಮಾಲಕ ವೀರಣ್ಣ ಎಂಬವರು ಗುರುಪುರ ಕೈಕಂಬದತ್ತ ಚಲಾಯಿಸುತ್ತಿದ್ದ ಕಾರು ಮಧ್ಯಾಹ್ನದ ವೇಳೆ ಅಲೈಗುಡ್ಡೆಯಲ್ಲಿ ಶಟರ್ ಹಾಕಿದ ಅಂಗಡಿಗೆ ಅಪ್ಪಳಿಸಿದ್ದು, ಅಂಗಡಿಯೊಳಗಿನ ಕಪಾಟು ನುಜ್ಜುಗುಜ್ಜಾಗಿದೆ. ಅಂಗಡಿಗೆ ಡಿಕ್ಕಿಯಾದ ಕಾರು ಬಳಿಕ ಪಲ್ಟಿ ಹೊಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.
