ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವದ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಕೇಶ್ ಚೌಟ ಬಡಕಬೈಲ್ ಇವರನ್ನು ಬಿ ಜೆ ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸನ್ಮಾನಿಸಿದರು.
ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳದ ಶ್ರೀ ಶ್ರೀ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಲೋಕ ಸಭಾ ಸದಸ್ಯ ಹಾಗೂ ಬಿ ಜೆ ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ ರಮಾನಾಥ ರೈ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಶ್ರೀ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಧ್ಯಮಿಗಳಾದ ಬಡಕಬೈಲ್ ಜೀವನ್ ದಾಸ್ ರೈ,ಚಂದ್ರಹಾಸ ಶೆಟ್ಟಿ ನಾರಳ,ವೆಂಕಟೇಶ್ ನಾವಡ ಪೊಳಲಿ,ಚಂದ್ರಶೇಖರ ಶೆಟ್ಟಿ , ಸೋಮಶೇಖರ ಪೊಳಲಿ, ಉಮೇಶ್ ಸಾಲಿಯಾನ್ ಬೆಂಜನಪದವು, ಚರಣ್ ಕೃಷ್ಣನಗರ ಮತ್ತಿತರರು ಉಪಸ್ಥಿತರಿದ್ದರು.

