ಕೈಕಂಬ: ಗುರುಪುರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಫೆ.27ರಂದು ಭಾನುವಾರ ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಜಿ ಎಂ ಉದಯ ಭಟ್ ಅವರು ಮಗುವೊಂದಕ್ಕೆ ಪೋಲಿಯೋ ಲಸಿಕೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮುದಾಯ ಆರೋಗ್ಯಾಧಿಕಾರಿ ಬಸವರಾಜ್, ಅಂಗನವಾಡಿ ಕಾರ್ಯಕರ್ತೆಯರಾದ ಸುಜಾತಾ, ಮಲ್ಲಿಕಾ, ಆಶಾ ಕಾರ್ಯಕರ್ತೆ ಶೀಲಾಕ್ಷಿ, ಅಂಗನವಾಡಿ ಸಹಾಯಕಿ ರಾಜೇಶ್ವರಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
