ಪೊಳಲಿ : ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ. ಬೆಳಿಗ್ಗೆ ಗಂಟೆ 6.30ರಿಂದ ಪುಣ್ಯಾಹ, ಗಣಪತಿ ಹೋಮ, ಬೆಳಿಗ್ಗೆ ಗಂಟೆ 8.20 ನಿಮಿಷಕ್ಕೆ ನಡೆಯುವ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರುಗಳ ಪ್ರತಿಷ್ಠೆ ಅಷ್ಟಬಂಧ ಜೀವಕಲಶಾಭಿಷೇಕ, ನ್ಯಾಸ ಪೂಜೆ, ಶ್ರೀ ಪಿಲಿಚಾಮುಂಡಿ ದೈವ ಪ್ರತಿಷ್ಠೆ, ಗಂಟೆ 12.30ಕ್ಕೆ- ಮಹಾಪೂಜೆ, ಸಾಯಂಕಾಲ 5ರಿಂದ ಪುಣ್ಯಾಹ, ದುರ್ಗಾಪೂಜೆ 7.30 ರಿಂದ ಅಷ್ಟಾವಧಾನ ಸೇವೆ ನಡೆಯಲಿದೆ.
ಈ ಸಂಧರ್ಭದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಘುನಾಥ ಸೋಮಯಾಜಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ಭಟ್, ಭಾಸ್ಕರ ರಾವ್ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಜೀರ್ಣೋದ್ಧಾರ, ಕಾರ್ಯಾಧ್ಯಕ್ಷ ವಿಷ್ಣು ಮೂರ್ತಿ ಭಟ್, ಕರಿಯಂಗಳ ಗ್ರಾಮಪಂಚಾಯತ್ ಅಧ್ಯಕ್ಷ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ವೆಂಕಟೇಶ್ ನಾವಡ, ರಮೇಶ್ ರಾವ್, ನರಸಿಂಹ ಮಯ್ಯ ಬಿಸಿ ರೋಡ್, ಸುಬ್ರಾಯ ಕಾರಂತ ಪೊಳಲಿ ಜೀರ್ಣೋದ್ಧಾರ ಸಮಿತಿ, ಸದಸ್ಯರು ಜೀರ್ಣೋದ್ಧಾರ ಸಮಿತಿ, ಪದಾಧಿಕಾರಿಗಳು ಇದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು, ಪೇಜಾವರ ಮಠ ಉಡುಪಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪವಿತ್ರ ಪಾಣಿ ಪಿ. ಮಾಧವ ಭಟ್, ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಕೆ. ಎಸ್. ಕಾರಂತ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಮೂಡಬಿದ್ರೆ ಮುಲ್ಕಿ, ಕ್ಷೇತ್ರ ಶಾಸಕ ಉಮಾನಾಥ್, ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೋ ಎಂ. ಬಿ. ಪುರಾಣಿಕ, ಕಲ್ಕೂರ ಪ್ರತಿಷ್ಠಾನ ಕದ್ರಿ ಮಂಗಳೂರು ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ್ , ಶಾರದಾ ಸಮೂಹ ಸಂಸ್ಥೆಗಳು ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಡಗಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ರಘು ಎಲ್. ಶೆಟ್ಟಿ, ಶ್ರೀ ಕ್ಷೇತ್ರ ಪೊಳಲಿ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಕೂಟ ಮಹಾಜಗತ್ತು ಅಂಗ ಸಂಸ್ಥೆ ಪೊಳಲಿಯ ಅಧ್ಯಕ್ಷ ಅಣ್ಣಯ್ಯ ಮಯ್ಯ, ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಆಡಳಿತ ಮಂಡಳಿ ಸದಸ್ಯ ಸದಾಶಿವ ಐತಾಳ, ರಾಜ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಪೊಳಲಿ,
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಗಂಟೆ 2 ರಿಂದ 4 ರವರೆಗೆ ಯಕ್ಷಗಾನ ತಾಳಮದ್ದಳೆ “ಗರುಡ ಗರ್ವ ಭಂಗ” ಶ್ರೀ ರಾಜರಾಜೇಶ್ವರಿ ಯಕ್ಷಗಾನ ಮಂಡಳಿ ಪೊಳಲಿ ಇವರಿಂದ
