ಮೂಡುಬಿದಿರೆ: ಎರಡು ವಾರಗಳ ಹಿಂದೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ ಶಿರ್ತಾಡಿ ಯುವಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.27ರಂದು ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಶಿರ್ತಾಡಿ ಕಜೆ ನಿವಾಸಿ ವಿಕೇಶ್ (22) ಮೃತಪಟ್ಟ ಯುವಕ. ಎರಡು ವಾರಗಳ ಹಿಂದೆ ಪಡುಕೊಣಾಜೆ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ವಿಕೇಶ್ ಶಿರ್ತಾಡಿ ಹಾಗೂ ವಾಲ್ಪಾಡಿ ತಂಡಗಳ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರಾಗಿದ್ದರು. ಶಿರ್ತಾಡಿಯ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.
