ಕೈಕಂಬ:ಶ್ರೀ ವಿನಾಯಕ ಭಜನಾ ಮಂಡಳಿ ಅಮ್ಮುಂಜೆ ಇದರ ವಾರ್ಷಿಕ ಮಹಾಸಭೆಯು ಡಿ. 26ರಂದು ಭಾನುವಾರ ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ದೇವಸ್ಥಾನದ ಆವರಣದಲ್ಲಿ ನಡೆಯಿತು.
2021 ರವರೇಗೇ ಭಜನಾ ಮಂಡಳಿಯು ಕೈಗೊಂಡ ಕಾರ್ಯಕ್ರಮದ ಖರ್ಚು-ವೆಚ್ಚಗಳ ವರದಿಯನ್ನು ಮಂಡಿಸಿ 2022ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಿತೇಶ್ ಭಂಡಾರಿ, ಗೌರವಾಧ್ಯಕ್ಷರಾಗಿ ಸೋಮಶೇಕರ ಶೆಟ್ಟಿ, ಅಮುಂಜೆ ಗುತ್ತು. ಡಿ.ಎ. ನಾಗೇಶ್ ರಾವ್, ಸಂಚಾಲಕರಾಗಿ ಡಿ.ಎ. ಹರೀಶ್ ರಾವ್. ಉಪಾಧ್ಯಕ್ಷರಾಗಿ ಶ್ರೀ ಕಾರ್ತಿಕ್ ಬಲ್ಲಾಳ್, ಪ್ರಶಾಂತ್ ಕುಲಾಲ್, ಪ್ರಸಾದ್ ಶಾಲಾ ಬಳಿ, ಉದಯ ಕೆ. ಶಿವಪ್ಪ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಕೊಳಮೆಕೋಡಿ,ಜತೆ ಕಾರ್ಯದರ್ಶೀಗಳಾಗಿ ಗಿರೀಶ್, ನಂದನ್, ಸತ್ಯಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಗಾಣೆಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ ಬಡಕಬೈಲ್, ಸುರೇಶ್ ಬಟ್ಲಬೆಟ್ಟು, ಅಶೋಕ ಬಟ್ಲಬೆಟ್ಟು, ಮೋಹನ ಮೇಸ್ತ್ರಿ, ಗೌರವ ಸಹೆಗಾರರಾಗಿ ರಾಧಾಕೃಷ್ಣ ತಂತ್ರಿ. ಸಂಕಪ್ಪ ಶೇಖ, ಜನಾರ್ದನ ಬಿ. ಬಾಲಕೃಷ್ಣ ಮಾಸ್ಟರ್,ವಾಸುದೇವ ಬೆಲ್ಚಡ, ಮೋಹನ್ ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿಯಲ್ಲಿ ಹರಿಶ್ಚಂದ್ರ ಎ.ಎಚ್., ಜಗದೀಶ, ಉಮೇಶ, ಮನೋಹರ, ನಿಶಾಂತ್ ಶಾಲಾಬಳಿ, ಗಣೇಶ ಕಲಾಯಿ, ಸತೀಶ ಶಾಲಾಬಳಿ, ಮುರಳೀಕೃಷ್ಣ, ಜನಾರ್ದನ ಬಾರಿಂಜೆ, ಆಕಾಶ್, ಮನೋಹರರನ್ನು ಆಯ್ಕೆ ಮಾಡಲಾಯಿತು.
ನಿತ್ಯ ಭಜನಾ ಸಮಿತಿಯಲ್ಲಿ ಸಂಚಾಲಕರಾಗಿ ಅಶೋಕ ಬಡಕಬೈಲ್, ಕಾರ್ಯದರ್ಶಿಯಾಗಿ ಅಶೋಕ ಬಟ್ಲಬೆಟ್ಟು, ಜೊತೆ ಕಾರ್ಯದರ್ಶಿಗಳಾಗಿ ಸತೀಶ ಬಟ್ಲಬೆಟ್ಟು, ವಾಸುದೇವ ಬೆಲ್ಚಡರವರನ್ನು ಆಯ್ಕೆ ಮಾಡಲಾಯಿತು.
