ಕೈಕಂಬ: ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ. ೨೪ರಂದು ಶುಕ್ರವಾರ ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ನಡೆಯಿತು.gur-dec-24-gurpur vya. bank-1

ಅಧ್ಯಕ್ಷರು ಸ್ವಾಗತಿಸಿದರು. ವರದಿ ವರ್ಷದಲ್ಲಿ ನಿಧನರಾದ ಸಂಘದ ನಿರ್ದೇಶಕ ಜಿ ಕೆ ಕಿಟ್ಟಣ್ಣ ರೈ ಮತ್ತು ಗುರುವಪ್ಪ ಪೂಜಾರಿಯವರಿಗೆ ಒಂದು ನಿಮಿಷದ ಮೌನ ಆಚರಿಸಲಾಯಿತು.gur-dec-24-gurpur vya. bank-2

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಬ್ಯಾಂಕ್ ಸಿಬ್ಬಂದಿ ಶ್ರೀದೇವಿ ಹಿಂದಿನ ವರ್ಷದ ನಿರ್ಣಯ, ೨೦೧೯-೨೦ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿ, ೨೦೨೦-೨೧ರ ಸಾಲಿನ ಆಡಳಿತ ವರದಿ, ಲೆಕ್ಕಪತ್ರಗಳ ಅಂಗೀಕಾರ, ೨೦-೨೧ನೇ ಸಾಲಿಗೆ ಸಿದ್ಧಪಡಿಸಲಾದ ಅಂದಾಜು ಆಯವ್ಯಯ ಬಜೆಟ್ ಮಂಜೂರಾತಿ ಮತ್ತು ಆಡಿಟ್ ನ್ಯೂನತೆ, ೨೦-೨೧ನೇ ಸಾಲಿನ ನಿವ್ವಳ ಲಾಭ ಹಂಚಿಕೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು.gur-dec-24-gurpur vya. bank-4

ಡಿವಿಡೆಂಡ್ ಏರಿಕೆ :
ಬ್ಯಾಂಕ್ ಲಾಭದಲ್ಲಿದೆ. ಹಿಂದಿನ ಮಹಾಸಭೆಯಲ್ಲಿ ನೀಡಿದ ವಾಗ್ದಾನದಂತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ ೨೦ ಡಿವಿಡೆಂಡ್ ನೀಡಬೇಕು ಎಂದು ಸದಸ್ಯರಾದ ಮುಹಮ್ಮದ್ ಉಂಞ, ಸನತ್ ಕುಮಾರ್ ರೈ, ಸುಬ್ಬಯ್ಯ ಶೆಟ್ಟಿ, ವರದರಾಜ್, ಬಾಬು ಸಾಲ್ಯಾನ್ ಮತ್ತಿತರರು ಒಕ್ಕೊರಲಿನಿಂದ ಒತ್ತಾಯಿಸಿದರು.

ಬ್ಯಾಂಕ್ ನೀಡಿರುವ ಬಹುತೇಕ ದೊಡ್ಡ ಮೊತ್ತದ ಸಾಲಗಳ ವಸೂಲಾತಿ ಆಗದಿರುವುದರಿಂದ ಇಷ್ಟೊಂದು ಡಿವಿಡೆಂಡ್ ನೀಡಲು ಸಾಧ್ಯವಿಲ್ಲ. ಬ್ಯಾಂಕ್‌ನ ಆರ್ಥಿಕ ಸ್ಥಿತಿ ಇನ್ನಷ್ಟು ಉತ್ತಮವಾದಲ್ಲಿ ಮುಂದಿನ ವರ್ಷ ಶೇ ೨೦ಕ್ಕೆ ಮೇಲ್ಪಟ್ಟು ಡೆವಿಡೆಂಡ್ ಪರಿಗಣಿಸಲಾಗುವುದು. ಈ ಬಾರಿ ಶೇ ೧೬ರಿಂದ ಶೇ ೧೮ಕ್ಕೆ(ಶೇ ೨ರಷ್ಟು ಹೆಚ್ಚಳ) ಡಿವಿಡೆಂಡ್ ಹೆಚ್ಚಿಸಲಾಗುವುದು ಎಂದು ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಹೇಳಿದರು.

ಸಂಘದ ನಾಲ್ವರಿಂದ 1.12 ಕೋ. ರೂ ವಸೂಲಿ :
ಹಿಂದಿನ ಸಾಲಿನಲ್ಲಿ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬAಧಿಸಿ ಬ್ಯಾಂಕ್‌ನ ನಾಲ್ವರು ಸಿಬ್ಬಂದಿಯಿAದ ಈಗಾಗಲೇ ಬಡ್ಡಿ ಸಹಿತ ೧ ಕೋಟಿ ೧೨ ಲಕ್ಷ ರೂ ವಸೂಲಿ ಮಾಡಲಾಗಿದೆ ಮತ್ತು ನಾಲ್ವರಿಗೂ ಹಿಂಬಡ್ತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಾಲ ವಸೂಲಾತಿಗೆ ಆದ್ಯತೆ ನೀಡಿ, ಬ್ಯಾಂಕ್‌ನ ಆರ್ಥಿಕ ಮಟ್ಟ ಮತ್ತಷ್ಟು ಹೆಚ್ಚಿಸಿ ಸದಸ್ಯ ಬಂಧುಗಳಿಗೆ ಹೆಚ್ಚು ಅನುಕೂಲ ಮಾಡಿಕೊಡಲಾಗುವುದು ಎಂದು ಅಧ್ಯಕ್ಷ ತಿಳಿಸಿದರು.

ವೇದಿಕೆಯಲ್ಲಿ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಶೀನ ಕೋಟ್ಯಾನ್, ಆಡಳಿತ ಮಂಡಳಿಯ ಸದಸ್ಯರಾದ ಜಿ ಎಂ ಉದಯ ಭಟ್, ಸಚಿನ್ ಅಡಪ, ವಿನೋದ್ ಮಾಡ, ನಳಿನಾಕ್ಷಿ ಶೆಟ್ಟಿ, ಲತಾ ಶೆಟ್ಟಿ, ಕಿಶೋರ್ ಕುಮಾರ್, ಸೋಮಯ್ಯ, ರಾಜೇಶ್, ಶ್ರೀನಿವಾಸ ಸುವರ್ಣ ಹಾಗೂ ಬ್ಯಾಂಕ್ ಪ್ರತಿನಿಧಿ ಸಂಜಯ್ ಅತಿಕಾರಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *