ಉಜಿರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಆಶ್ರಯದಲ್ಲಿ ಇದೇ ೧೮ ರಂದು ಶನಿವಾರ ಬೆಂಗಳೂರಿನಲ್ಲಿ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಗೌರವಚಾವಡಿ ಪ್ರಶಸ್ತಿ ಪ್ರದಾನ ಮತ್ತುದತ್ತಿ ಪುರಸ್ಕಾರ ಸಮಾರಂಭದ ಆಮoತ್ರಣ ಪತ್ರವನ್ನು ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ ಸಾರ್ ಮತ್ತು ಸದಸ್ಯರಾದ ನರೇಂದ್ರ ಕೆರೆಕಾಡು, ನಾಗೇಶ್‌ಕುಲಾಲ್ ಹಾಗೂ ಸಿದ್ದಕಟ್ಟೆಯ ಮಲ್ಲಿಕಾಅಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಇದೇ ೧೮ ರಂದು ಶನಿವಾರ ಬೆಳಿಗ್ಯೆ ಹತ್ತುಗಂಟೆಗೆ ಸಚಿವ ಸುನಿಲ್ ಕುಮಾರ್‌ಅಧ್ಯಕ್ಷತೆಯಲ್ಲಿಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಮಾರಂಭವನ್ನುಉದ್ಘಾಟಿಸುವರು.
