Published On: Mon, Dec 6th, 2021

ಧರ್ಮಸ್ಥಳದಲ್ಲಿ ಶನಿವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ 

ಉಜಿರೆ: ಧರ್ಮಸ್ಥಳದಲ್ಲಿ ಶನಿವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ ನಡೆಯಿತು. ಪಂಚನಮಸ್ಕಾರ ಮಂತ್ರ ಪಠಣ, ಭಜನೆ, ಸ್ತೋತ್ರ ಹಾಗೂ ಪೂಜಾ ಮಂತ್ರ ಪಠಣದೊಂದಿಗೆ ಅಷ್ಟವಿಧಾರ್ಚನೆ ಪೂಜೆ ನಡೆಯಿತು.3P2A2356

ಸುಶ್ರಾವ್ಯಗಾಯನ ಪೂಜೆಗೆ ವಿಶೇಷ ಮೆರುಗನ್ನು ನೀಡಿತು. ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಶ್ರೀಮತಿ ಶ್ರದ್ಧಾಅಮಿತ್, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.3P2A2369

ಅನೇಕಾಂತವಾದದ ಬಗ್ಗೆ ವಿಶೇಷ ಉಪನ್ಯಾಸ ನೀಡಿದಗೇರುಕಟ್ಟೆ ಸರ್ಕಾರಿ ಪದವಿ ಪೂರ್ವಕಾಲೇಜಿನ ಶಿಕ್ಷಕ ಅಜಿತ್‌ ಕುಮಾರ್‌ ಕೊಕ್ರಾಡಿ ಮಾತನಾಡಿ, ಮನ, ವಚನ ಮತ್ತು ಕಾಯದಿಂದ ಆಚಾರದಲ್ಲಿ ಅಹಿಂಸೆ ಮತ್ತು ವಿಚಾರದಲ್ಲಿ ಅನೇಕಾಂತವಾದ ಪಾಲನೆ ಮಾಡಿದರೆ ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣವೂ ಆಗುತ್ತದೆ. ತನ್ಮೂಲಕ ವಿಶ್ವಶಾಂತಿ ಲಭಿಸುತ್ತದೆ ಎಂದು ಹೇಳಿದರು.

ಅಹಿಂಸೆ, ಅನೇಕಾಂತವಾದ ಮತ್ತು ಅಪರಿಗ್ರಹ ಜೈನ ಧರ್ಮದ ಶ್ರೇಷ್ಠ ತತ್ವಗಳಾಗಿದ್ದು ಇವುಗಳ ಅನುಷ್ಠಾನದಿಂದ ವಿಶ್ವಶಾಂತಿ ಉಂಟಾಗುತ್ತದೆ. ವ್ಯವಹಾರ ಧರ್ಮ ಮತ್ತು ನಿಶ್ಚಯ ಧರ್ಮದ ಸಮನ್ವಯದಿಂದ ಎಲ್ಲರೂ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಪಾಕತಜ್ಷರಾದ ಪೆರಾಡಿಯ ನಾಗರಾಜ ಶೆಟ್ಟಿ ಮತ್ತು ಕನ್ನಡಿಕಟ್ಟೆಯ ಶಶಿಕಾಂತ ಜೈನ್‌ ಅವರನ್ನು ಸನ್ಮಾನಿಸಲಾಯಿತು. ಮಹಾವೀರಜೈನ್ ಇಚ್ಲಂಪಾಡಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter