ಮುಂಬಯಿ : ಇಂಟರ್‌ನೇಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಜಂಟಿಯಾಗಿ ಮಾಲ್ಡ್ದೀವ್‌ಸ್ ರಾಷ್ಟ್ರದ ದ್ವೀಪ ಪ್ರದೇಶ ಮಫುಸಿ ಇಲ್ಲಿನ ಕಾಣಿ ಗ್ರ‍್ಯಾಂಡ್ ಸೆಮಿನರ್ ಸಭಾಗೃಹದಲ್ಲಿ ೨೫ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಇಂದಿಲ್ಲಿ ಶನಿವಾರ ಸಂಜೆ ಆಯೋಜಿಸಿದ್ದು ಪ್ರೊ| ಮಲ್ಲೇಪುರಂ ಜಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನೆರವೇರಿದ ಸಮ್ಮೇಳನವನ್ನು ಮಾಜಿ ಎಂಎಲ್‌ಸಿ ಡಿ.ಎಸ್ ವೀರಯ್ಯ ಲಾಂಛನ ಬಿಡುಗಡೆ ಗೊಳಿಸಿ ಉದ್ಘಾಟಿಸಿದರು.
ಕಾಣಿ ಗ್ರ‍್ಯಾಂಡ್ ಸಂಸ್ಥೆಯ ನಿರ್ದೇಶಕ ಎಸ್.ತನೇರ್, ಡಾ| ಸತೀಶ್‌ಕುಮಾರ್ ಎಸ್.ಹೊಸಮಣಿ, ಡಿ.ಎಸ್ ವಿಶ್ವನಾಥ್, ಸಂಕ್ರೇ ಗೌಡ ಮೈಸೂರು, ದಿಲೀಪ್ ಎಸ್.ಗಡ್ಯಾಲ್, ನಾಟ್ಯಾಂಜಲಿ ಕಲಾಕೇಂದ್ರದ ನಿರ್ದೇಶಕಿ ಗುರು ಡಾ| ಸಹನಾ ಭಟ್ ಅತಿಥಿ ಅಭ್ಯಾಗತರುಗಳಾಗಿದ್ದರು.
ನಾಗರಾಜ್ ಎಸ್.ಉಪಾಧ್ಯಾಯ, ಮಹಾಂತೇಶ್ ಚಂದ್ರಕಾಂತ್ ಮಹಾಜನ್, ಡಾ| ಪ್ರಭು ಚವ್ಹಾಣ್ ಮೊಹಂತ್ರಿ, ಡಾ| ಅಶೋಕ್ ನರೋಡೆ, ಲೇಖಶ್ರೀ ಪಟ್ನಾಯಿಕ್ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ `ಕಾವ್ಯಧಾರೆ’, `ಪುಸ್ತಕ ಪ್ರೀತಿ’, `ಮಹಾಕಾವ್ಯಗಳಲ್ಲಿ ಬುದ್ಧ’ ಕೃತಿಗಳನ್ನು ಅತಿಥಿüವರ್ಯರು ಬಿಡುಗಡೆ ಗೊಳಿಸಿದರು.
ಡಾ| ಎಂ.ಪಿ ವರ್ಷ ಮೈಸೂರು ಅಧ್ಯಕ್ಷತೆಯಲ್ಲಿ `ಜಾಗತಿಕ ಸಾಮರಸ್ಯ’ ವಿಷಯದಲ್ಲಿ ವಿಚಾರಗೋಷ್ಠಿ ನಡೆಸಲ್ಪಟ್ಟಿತು. ಕವಿಗೋಷ್ಠಿಯಲ್ಲಿ ಭಗವಾನ್ ಬಿಂದಿಗನವಿಲೆ, ಡಾ| ಅರ್ಚನಾ ಅಥಣಿ, ಪ್ರಶಾಂತ್ ಮೈಸೂರು, ಶಿವರಾಜ್ ಪಿ.ಬಿ., ಮೊಹ್ಮದ್ ಆರೀಫ್ ಕಲಕಟ್ಟಾ, ಪ್ರಥಿವರಾಜ್ ಭಟ್ ಪಾಲ್ಗೊಂಡರು.
ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಮಹಾದೇವ ಸತ್ತಿಗೆರೆ ಹಾಸ್ಯ ಪ್ರಹಸನ, ಗುರು ಡಾ| ಸಹನಾ ಭಟ್ ನಿರ್ದೇಶನದಲ್ಲಿ ನಾಟ್ಯಾಂಜಲಿ ಕಲಾಕೇಂದ್ರದ ಕಲಾವಿದೆಯರು ಶಾಸ್ತ್ರೀಯ ನೃತ್ಯಾವಳಿ, ಗೋ.ನಾ ಸ್ವಾಮಿ, ಶಿವರಾಜ್ ಪಿ.ಬಿ. ಪುಷ್ಪ ಆರಾಧ್ಯ ಇವರು ಸಂಗೀತ ಕಚೇರಿ ಪ್ರಸ್ತುತ ಪಡಿಸಿದರು.
ಇಂಟರ್‌ನೇಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್‌ನ ಕಾರ್ಯಾಧ್ಯಕ್ಷ ಇಂ| ಕೆ.ಪಿ ಮಂಜುನಾಥ ಸಾಗರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ಪ್ರತಿಭಾ ಗೌಡ ಮತ್ತು ಗೋ.ನಾ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಗ್ಲೋಬಲ್ ಪೀಸ್ ಫೌಂಡೇಶನ್‌ನ ಗೌರವ ಕಾರ್ಯದರ್ಶಿ ಶಿವ ಗುಂಟಕ ಹೈದರಾಬಾದ್ ವಂದಿಸಿದರು.
