Published On: Wed, Sep 29th, 2021

ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ನಿಂದ ಉಚಿತ ನೇತ್ರ ತಪಾಸಣೆ ಅಂಧರ ಕಣ್ಣಿಗೆ ಬೆಳಕು ನೀಡುವುದು ಪುಣ್ಯದ ಕಾರ್ಯ: ಶಾಸಕ ರಘುಪತಿ ಭಟ್

ಮುಂಬಯಿ : ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರು ತನ್ನ ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಮುಂಬಯಿ ನೇತೃತ್ವದಲ್ಲಿ ಇಂದಿಲ್ಲಿ ಮಂಗಳವಾರ ಉಡುಪಿ ಬಾರ್ಕೂರು ಇಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಯಿತು.Kadandale Trust Eye Camp 1 Kadandale Trust Eye Camp 3ದೇವಸ್ಥಾನದ ಕಡಂದಲೆ ಶ್ರೀಮತಿ ಶೋಭಾ ಸುರೇಶ್ ಭಂಡಾರಿ ಸಭಾ ವೇದಿಕೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದ ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಸಭಾಧ್ಯಕ್ಷತೆ ವಹಿಸಿದ್ದು ಉಡುಪಿ ಶಾಸಕ ಕೆ.ರಘುಪತಿ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು. Kadandale Trust Eye Camp 2ಶಾಸಕ ಭಟ್ ಮಾತನಾಡಿ ಸುರೇಶ್ ಭಂಡಾರಿ ಭಂಡಾರಿ ಸಮಾಜದ ಕಣ್ಣು. ಇಂದು ಅಂಧರ ಕಣ್ಣಿಗೆ ಚಿಕಿತ್ಸೆ ನೀಡಿ ಎಲ್ಲಾ ಸಮಾಜದ ಕಣ್ಣುಗಳನ್ನು ತೆರೆಯುವ ಕಾರ್ಯವನ್ನು ಮಾಡುತ್ತಿರುವುದು ಪುಣ್ಯ ಹಾಗೂ ಮಹತ್ವದ ಕಾರ್ಯವಾಗಿದೆ. ಭಂಡಾರಿ ಸಮಾಜ ಅಭಿವೃದ್ಧಿಯಲ್ಲಿ ಸುರೇಶ್ ಭಂಡಾರಿವರ ಕೊಡುಗೆ ಅಪಾರ. ಭಂಡಾರಿ ಸಮಾಜದ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಇತರ ಸಮಾಜಕ್ಕೆ ಮಾದರಿಯಾಗಿದೆ. ಸುರೇಶ್ ಭಂಡಾರಿಯವರAತ ಹೆಚ್ಚು ಹೆಚ್ಚು ಸಮಾಜ ಸೇವಕರು ಹುಟ್ಟಿ ಬರಲಿ ಎಂದು ಹೇಳಿದರು.Kadandale Trust Eye Camp 6ಮುಖ್ಯ ಅತಿಥಿಯಾಗಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ| ಕೃಷ್ಣಪ್ರಸಾದ್ ಭಾಗವಹಿಸಿ ಮಾತನಾಡಿ ಪ್ರಸಾದ್ ನೇತ್ರಾಲಯ ಸಂಸ್ಥೆ ಎರಡು ದಶಕಗಳಿಂದ ಸಾವಿರಾರು ಶಿಬಿರ ಮಾಡುತ್ತ ಬಂದಿದೆ ಆ ಪೈಕಿ ಈ ಶಿಬಿರ ಭಾರೀ ಪ್ರಮುಖ್ಯತೆ ಪಡೆದಿದೆ. ಉಚಿತ ತಪಾಸಣೆ ಹಾಗೂ ಕನ್ನಡಕ ಜೊತೆಗೆ ಚಿಕಿತ್ಸೆ ನೀಡುತ್ತಿದೆ. ಅಲ್ಲಲಿ ಶಿಬಿರ ಅಯೋಜನೆ ಮಾಡುವ ಮೂಲಕ ರೋಗಿಗೆ ಚಿಕಿತ್ಸೆ ಹಾಗೂ ಇತರರಿಗೆ ಕಣ್ಣಿನ ಬಗ್ಗೆ ಅರಿವು ಮೂಡುತ್ತದೆ ಎಂದು ಹೇಳಿದರು.Kadandale Trust Eye Camp 7ಬಿಜೆಪಿ ಹಿಂದುಳಿದ ವರ್ಗದ ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ  ಅತಿಥಿಯಾಗಿದ್ದು ಮಾತನಾಡಿ ಭಂಡಾರಿ ಸಮಾಜವನ್ನು ಮುಖ್ಯ ವಾಣೆಗೆ ತರುವಲ್ಲಿ ಸುರೇಶ್ ಭಂಡಾರಿ ಯಶಸ್ವಿಯಾಗಿದ್ದರೆ. ಕಣ್ಣು ದೇಹದ ಪ್ರಮುಖ ಅಂಗವಾಗಿದ್ದು ಸಮಾಜದ ಜನರ ಹಾಗೂ ಇತರ ನಿರ್ಗತಿಕರಿಗೆ ಉಚಿತ ಕಣ್ಣಿನ ಶಿಬಿರ ಆಯೋಜಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.Kadandale Trust Eye Camp 9ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಲ್ಯಾಡಿ ಸುರೇಶ್ ನಾಯಕ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಸುಪ್ರಸಾದ್ ಶೆಟ್ಟಿ, ಉದ್ಯಮಿ ಶಾಂತರಾಮ್ ಶೆಟ್ಟಿ ಬಾರ್ಕೂರು, ಉಡುಪಿ ನಗರ ಸಭೆ ಸದಸ್ಯೆ ಸವಿತಾ ಹರೀಶ್ ರಾಮ್ ಭಂಡಾರಿ, ಸವಿತಾ ಸಮಾಜ ಉಡುಪಿ ಜಿಲ್ಲಾಧ್ಯಕ್ಷ ನಿಂಜೂರು ವಿಶ್ವನಾಥ್ ಭಂಡಾರಿ, ನ್ಯಾಯವಾದಿ ಉಮೇಶ್ ಶೆಟ್ಟಿ, ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಶಂಭು ಶೆಟ್ಟಿ, ಕುಕ್ಕುಂಜೆ ವಾರ್ಡ್ ಸದಸ್ಯ ಬಾಲಾ ಕೃಷ್ಣ ಶೆಟ್ಟಿ  ಅತಿಥಿಗಳಾಗಿದ್ದರು.Kadandale Trust Eye Camp 11ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಬಾರ್ಕೂರು ಮತ್ತು  ಭಂಡಾರಿ ಮಹಾ ಮಂಡಲ (ರಿ.) ಇವುಗಳ ಸಹಯೋಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಾರ್ಕೂರು ಇವರುಗಳ ಸಹಭಾಗಿತ್ವದಲ್ಲಿ ಬೆಳಿಗ್ಗೆಯಿಂದ ಸಾಯಂಕಾಲ ವರೇಗೆ ನೇತ್ರ ತಪಾಸಣೆ ನಡೆದಿದ್ದು ಟ್ರಸ್ಟಿ ಸೌರಭ್ ಎಸ್.ಭಂಡಾರಿ ಸ್ವಾಗತಿಸಿದರು. ಕಡಂದಲೆ ಸುರೇಶ್ ಭಂಡಾರಿ ಪ್ರಾಸ್ತವನೆಗೈದರು. ಸೋಮಶೇಖರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಶೋಭ ಸುರೇಶ್ ಭಂಡಾರಿ ವಂದಿಸಿದರು.Kadandale Trust Eye Camp 14

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter