ಬೆಂಗಳೂರು: ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ‘ಗೂಗ್ಲಿ’ ಬಾಲಿವುಡ್ನತ್ತ ಪಾದ ಬೆಳೆಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಬಾಲಿವುಡ್ನ ಪ್ರಮುಖ ಮೂರು ನಿಮರ್ಾಣ ಸಂಸ್ಥೆಗಳು ಗೂಗ್ಲಿ ಚಿತ್ರದ ರಿಮೇಕ್ ಹಕ್ಕನ್ನು ಪಡೆಯಲು ಮುಂದೆ ಬಂದಿದ್ದು ಇದರಿಂದ ನಿಮರ್ಾಪಕ ಜಯಣ್ಣರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಯಶ್ ಮತ್ತು ಕೃತಿ ಕರ್ಬಂದಾ ಜೋಡಿಯ ಗೂಗ್ಲಿ ಸಿನಿಮಾ ಹಾಸ್ಯ ಮತ್ತು ಪ್ರೇಮಕಥೆಯುಳ್ಳ ಚಿತ್ರವಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಚಿತ್ರದ ರಿಮೇಕ್ ಹಕ್ಕನ್ನು ಪಡೆಯಲು ಬಾಲಿವುಡ್ ನಿಮರ್ಾಣ ಸಂಸ್ಥೆಗಳು ಮುಂದೆ ಬಂದಿದ್ದವು, ಆದರೆ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದ ನಂತರ ಈ ಬೇಡಿಕೆ ಮತ್ತಷ್ಟು ಹೆಚ್ಚಾಯಿತು ಎಂದು ಜಯಣ್ಣ ಹೇಳುತ್ತಾರೆ. ಕನ್ನಡದಲ್ಲಿ ಗೂಗ್ಲಿಯನ್ನು ನಿದರ್ೇಶಿಸಿರುವ ಪವನ್ ಒಡೆಯಾರ್ ಹಿಂದಿಯಲ್ಲೂ ನಿದರ್ೇಶನದ ಚುಕ್ಕಾಣಿ ಹಿಡಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯ ಅವರು ಪುನೀತ್ ರಾಜ್ಕುಮಾರ್ ಅಭಿನಯದ ‘ರಣವಿಕ್ರಮ’ ಚಿತ್ರದಲ್ಲಿ ವ್ಯಸ್ತವಾಗಿರುವುದರಿಂದ ಅದರ ಮೇಲೆಯೇ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಬಾಲಿವುಡ್ನಲ್ಲೂ ಜಯಣ್ಣ ಜೊತೆಗಾರಿಕೆಯಲ್ಲಿ ಈ ಚಿತ್ರವನ್ನು ನಿಮರ್ಿಸುವ ಯೋಚನೆಯೂ ಇದೆ. ಆದರೆ ಬಾಲಿವುಡ್ ಬಗ್ಗೆ ಅಷ್ಟೊಂದು ಪರಿಚಯವಿಲ್ಲದ ಜಯಣ್ಣ ಆ ಬಗ್ಗೆ ಅಷ್ಟೊಂದು ಗಂಭೀರವಾಗಿಲ್ಲ. ಸದ್ಯ ಬಾಲಿವುಡ್ನ ಎಂಡೆಮೋಲ್, ಈರೋಸ್ ಮತ್ತು ಜೆಎ ಎಂಟರ್ಟೈನ್ಮೆಂಟ್ ಚಿತ್ರ ನಿಮರ್ಾಣ ಸಂಸ್ಥೆಗಳು ಗೂಗ್ಲಿ ರಿಮೇಕ್ ರೈಟ್ಸ್ಗಾಗಿ ಸ್ಪಧರ್ೆಯಲ್ಲಿವೆ.
