ಕೈಕಂಬ:ಮನೆಗೆ ಇನ್‌ವರ್ಟರ್ ಅಳವಡಿಸಲು ಹಣದ ವಿಷಯದಲ್ಲಿ ಬಜ್ಪೆಯ ಇಲೆಕ್ತ್ರೀಶಿಯನ್ ಒಬ್ಬರೊಂದಿಗೆ ಮುಂಬೈಯಿAದ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಶ್ರೀ ಕ್ಷೇತ್ರ ಕಟೀಲು ದೇವಳದ ಅಮ್ಮನವರಿಗೆ ಅವಾಚ್ಯ ಶಬ್ದಗಳಿಂದ ಬೈದ ಆರೋಪಿ ಬಜ್ಪೆ ಮೂಲದ ಆಲ್ಬರ್ಟ್ ಬುಧವಾರ ಶ್ರೀ ಕ್ಷೇತ್ರ ಕಟೀಲಿಗೆ ತೆರಳಿ, ದೇವರೆದುರು ಅಡ್ಡಬಿದ್ದು ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ ಅಪೂರ್ವ ಘಟನೆ ನಡೆದಿದೆ.IMG-20210714-WA0027

ಮುಂಬೈಯಿಂದ ಆಗಮಿಸಿದ ಸುಮಾರು ೮೦ ವರ್ಷ ಪ್ರಾಯದ ಆಲ್ಬರ್ಟ್ ಬುಧವಾರ ಶ್ರೀ ಕ್ಷೇತ್ರ ಕಟೀಲಿಗೆ ತೆರಳಿ ದೇವರೆದುರು ಕ್ಷಮೆ ಯಾಚಿಸಿದ್ದಾರೆ. ಬಳಿಕ ಬಜ್ಪೆ ಪೊಲೀಸ್ ಠಾಣೆಗೆ ಬಂದು, ಕುಡಿತದಿಂದ ಆಗಿರುವ ತನ್ನ ತಪ್ಪಿನ ಅರಿವಾಗಿದ್ದು, ಅದಕ್ಕಾಗಿ ಪಶ್ಚತ್ತಾಪ ಪಟ್ಟಿದ್ದೇನೆ. ದೇವರೆದುರು ಕ್ಷಮೆ ಯಾಚಿಸಿದ್ದೇನೆ. ಮಾನಸಿಕವಾಗಿ ನೊಂದುಕೊಂಡಿರುವ ತನ್ನನ್ನು ಬಂಧಿಸಿದರೆ ಬದುಕುಳಿಯುವುದಿಲ್ಲ ಎಂಬಿತ್ಯಾದಿಯಾಗಿ ಅಂಗಲಾಚಿ ಬೇಡಿಕೊಂಡಿದ್ದಾರೆ.

ಆಲ್ಬರ್ಟ್ ವಿರುದ್ಧ ಮೇ ೧೭ರಂದು ಹಿಂದು ಮುಖಂಡರು ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದರು. ಹಿಂದೂ ಮುಖಂಡರಾದ ಹರೀಶ್ ಮಟ್ಟಿ, ಕಾವೂರು ಕಾರ್ಪೊರೇಟರ್ ಗಾಯತ್ರಿ ರಾವ್, ನವೀನ್‌ಚಂದ್ರ ಪೂಜಾರಿ ಪದವಿನಂಗಡಿ, ಸುದರ್ಶನ(ಕಂದಾವರ ಗ್ರಾಪಂ ಸದಸ್ಯ), ಶರತ್ ಪದವಿನಂಗಡಿ, ಸಜೇಶ್ ಕಂದಾವರ, ಕಾರ್ತಿಕ್ ಶೆಟ್ಟಿ ಪದವಿನಂಗಡಿ, ಸಂದೇಶ ಶೆಟ್ಟಿ ಆಕಾಶಭವನ ಮತ್ತಿತರರು ಆಲ್ಬರ್ಟ್ ಕ್ಷಮೆ ಯಾಚನೆಗೆ ಸಾಕ್ಷಿಯಾಗಿದ್ದು, ಬಜ್ಪೆ ಠಾಣೆಗೆ ಆಲ್ಬರ್ಟ್ ಜೊತೆಯಲ್ಲಿ ಆಗಮಿಸಿದ್ದರು. ಬಜ್ಪೆ ಪೊಲೀಸ್ ಠಾಣೆಯಲ್ಲಿ ಕ್ಷಮೆ ಯಾಚಿಸಿದ ವಯೋವೃದ್ಧ ಆಲ್ಬರ್ಟ್ಗೆ ಒಂದು ಅವಕಾಶ ನೀಡಬಹುದು ಎಂದ ಹಿಂದೂ ಮುಖಂಡರು ರಾಜಿ ಸೂತ್ರದ ಮೂಲಕ ಪ್ರಕರಣಕ್ಕೆ ತಾರ್ತಿಕ ಅಂತ್ಯ ನೀಡಲು ಪ್ರಯತ್ನಿಸಿದರು. ಪೊಲೀಸ್ ಎಚ್ಚರಿಕೆಯೊಂದಿಗೆ ಆಲ್ಬರ್ಟ್ ಠಾಣೆಯಿಂದ ಹೊರಬಂದಿದ್ದಾರೆ.

“ಹಿಂದೂ ಮುಖಂಡರ ಕೋರಿಕೆಯಂತೆ ಆಲ್ಬರ್ಟ್ ಅವರನ್ನು ಮನೆಗೆ ಕಳುಹಿಸಲಾಗಿದ್ದರೂ, ಕಾನೂನಾತ್ಮಕ ತೊಡಕುಗಳ ಬಗ್ಗೆ ಪೊಲೀಸ್ ಆಯುಕ್ತರ ಜೊತೆಯಲ್ಲಿ ಮಾತುಕತೆ ನಡೆಸಲಿದ್ದೇನೆ” ಎಂದು ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕ ಸಂದೇಶ್ ತಿಳಿಸಿದರು.

“ಯಾವುದೇ ಕಾರಣಕ್ಕೂ ಹಿಂದೂ ದೇವರು, ದೈವಗಳ ನಿಂದನೆ ನಾವು ಸಹಿಸೆವು. ಆಲ್ಬರ್ಟ್ ವಿರುದ್ಧ ನಾವು ದೂರು ನೀಡಿದ್ದೆವು. ಆ ವ್ಯಕ್ತಿ ಕಟೀಲಿನಲ್ಲಿ ಕ್ಷಮೆ ಯಾಚಿಸಿ, ಬಂಧನ ತಪ್ಪಿಸುವಂತೆ ಅಂಗಲಾಚಿ ಬೇಡಿದ್ದರು. ತುಳುನಾಡಿನ ದೇವರ-ದೈವಗಳ ನಿಂದಿಸುವ ಇತರರಿಗೆ ಈ ಪ್ರಕರಣ ಪಾಠವಾಗಬೇಕು” ಎಂದು ಗುರುಪುರ ಕೈಕಂಬದ ಹಿಂದೂ ಮುಖಂಡ ಹರೀಶ್ ಮಟ್ಟಿ ಮಾಧ್ಯಮಕ್ಕೆ ತಿಳಿಸಿದರು. ಇವರ ಮಾತಿಗೆ ಕಾರ್ಪೊರೇಟರ್ ಗಾಯತ್ರಿ ಮತ್ತು ನವೀನ್‌ಚಂದ್ರ ಪೂಜಾರಿ ಧ್ವನಿ ಗೂಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *