ಕೈಕಂಬ: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗ್ರಾಮದ ತಜಂಕ್ ಎಂಬಲ್ಲಿ ಬುಧವಾರ ಸಂಜೆ ವೇಳೆ ಬೀಸಿದ ಭಾರೀ ಗಾಳಿಗೆ ಬ್ರಹತ್ ಮರ ವಾರಿಜ ಪೂಜಾರಿ ಎಂಬವರ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಹೆಂಚುಗಳು ಪುಡಿಯಾಗಿ ಮನೆಗೆ ಭಾಗಷ: ಹಾನಿಯಾಗಿದೆ.

ಅಂದಾಜು ೧೦ ಸಾವಿರ ನಷ್ಟ ಉಂಟಾಗಿದ್ದು, ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಕಂದಾಯ ಇಲಾಖೆಯ ರಜನಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದರು.
