ಮೂಡುಬಿದಿರೆ : ಕಲ್ಲಮುಂಡ್ಕೂರು ಪಿದ್ಮಲೆಯ ಗುಡ್ಡಗಾಡು ಪ್ರದೇಶದ ಸುಮಾರು ಸುಮಾರು ಐದು ಎಕರೆ ಜಾಗದಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.WhatsApp Image 2021-04-26 at 1.12.19 PMಅಗ್ನಿ ಶಾಮಕ ದಳದ ನೀರಿನ ಟ್ಯಾಂಕರ್ ಗಳ ಗಾಲಿಗಳು ಸವೆದು ಹೋಗಿ ಹರಿದುಕೊಂಡಿರುವ ಕಾರಣ ಬೆಂಕಿ‌ ಇರುವಲ್ಲಿಗೆ ವಾಹನ ಹೋಗಲಾಗುತ್ತಿಲ್ಲ ಎನ್ನಲಾಗಿದೆ. ಇದು ಮೀಸಲು ಅರಣ್ಯವಾಗಿರುವುದರಿಂದ ಕಲ್ಲಮುಂಡ್ಕೂರು ಮತ್ತು ತೆಂಕಮಿಜಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಯಲ್ಲಿ ಹರಡಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಮಾಹಿತಿ ಅರಣ್ಯ ಇಲಾಖೆಗೂ ಲಭಿಸಿದ್ದು ಡಿಆರ್ ಎಫ್ ಓ ಸಹಿತ ಸಿಬಂದಿ ಗಳು, ಅಗ್ನಿ ಶಾಮಕರು, ವಿಶೇಷವಾಗಿ ಊರವರು ಬೆಂಕಿ ನಂದಿಸಿದ್ದಾರೆ.

ಅಗ್ನಿಶಾಮಕ ದಳದ ಟ್ಯಾಂಕರ್ ನ ಟಯರ್ ಗಳು ನಡುವಲ್ಲೇ ಬಾಯಿ ಬಿಟ್ಟು ಕೊಂಡಿವೆ, 4,500 ಲೀ. ನೀರನ್ನು ಹೀರಿಕೊಂಡ ಈ ಟ್ಯಾಂಕರ್ ನ ಚಲಾವಣೆ ಬಹಳ ರಿಸ್ಕ್ ಎನ್ನಲಾಗುತ್ತಿದೆ. ಈ ಟ್ಯಾಂಕರ್ ಪುತ್ತೂರಿನದೆಂದೂ ಮೂಡುಬಿದಿರೆ ಗೆ ಬಂದಿದ್ದ ಹೊಸ ಟ್ಯಾಂಕರ್ ಪುತ್ತೂರಿಗೆ ಹೋಗಿದೆಯೆಂದೂ ಹೇಳಲಾಗುತ್ತಿದೆ.

By Suddi9

Leave a Reply

Your email address will not be published. Required fields are marked *