ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನಲ್ಲಿ ಮಹಾವೀರರ ಜಯಂತಿಯನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು. ಮಲ್ಲಿನಾಥ ಇಂದ್ರ ಅವರು ಕಾಲೇಜಿನ ಪ್ರವೇಶಭಾಗದಲ್ಲಿರುವ ಶ್ರೀ ಮಹಾವೀರ ಸ್ವಾಮಿಯ ಅಮೃತಶಿಲೆಯ ಮೂರ್ತಿ ಗೆ ಹಾಲು, ಶ್ರೀಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಪೂಜೆ ನಡೆಸಿಕೊಟ್ಟರು.WhatsApp Image 2021-04-26 at 1.11.48 PMಮಾಜಿ ಸಚಿವ, ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಮಾತನಾಡಿ, ಇಪ್ಪತ್ತನಾಲ್ಕನೇ ತೀಥರ್ಂಕರ ಭಗವಾನ್ ಮಹಾವೀರರು ರಾಜನಾಗಿದ್ದರೂ ಸುಖಭೋಗ ತ್ಯಜಿಸಿ ಅಹಿಂಸೆಯೇ ಪರಮ ಧರ್ಮ ಎಂದು ಲೋಕಕ್ಕೆ ಸಾರಿದವರು. ಅವರ ಬೋಧನೆಯ ಬೆಳಕಿನಲ್ಲಿ ಜಗತ್ತು ಶಾಂತಿಯನ್ನು ಕಾಣುವಂತಾಗಲಿ. ಜಗತ್ತನ್ನು ಕಂಗೆಡಿಸಿರುವ ರೋಗರುಜಿನ ಹತೋಟಿಗೆ ಬಂದು ಜಗತ್ತು ನೆಮ್ಮದಿಯನ್ನು ಅನುಭವಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ರಾಧಾಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಎಂ. ರಮೇಶ್ ಭಟ್, ಪೆÇ್ರ. ಹರೀಶ್, ಮೂಡುಬಿದಿರೆ ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆ.ಜೆ.ಪಿಂಟೋ, ಎಂಕೆ ಅನಂತ್ರಾಜ್ ಸಿಪಿಎಡ್ ಪ್ರಾಂಶುಪಾಲ ಧನಂಜಯ ಶೆಟ್ಟಿ, ಎ.ಜಿ.ಸೋನ್ಸ್ ಐಟಿಐ ಪ್ರಾಚಾರ್ಯ ಜಯರಾಮ ಶೆಟ್ಟಿಗಾರ್, ವಿವಿಧ ಸಂಸ್ಥೆಗಳ ಸಿಬಂದಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *