ಮೂಡುಬಿದಿರೆ: ತಾಲೂಕಿನ ಶಿರ್ತಾಡಿಯಲ್ಲಿ ಗೂಡ್ಸ್ ಟೆಂಪೊ ಮತ್ತು ಟ್ಯಾಂಕರ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಉಜಿರೆಯ ಯುವಕನೋರ್ವ ಶನಿವಾರ ಮೃತಪಟ್ಟಿದ್ದಾನೆ.
ಉಜಿರೆಯ ನೇಕಾರ ಪೇಟೆಯ ನಿವಾಸಿ ಲಾಯಿಲ ಭವಿಶ್ ಶೆಟ್ಟಿ ದುರ್ಘಟನೆ ಯಲ್ಲಿ ಮೃತಪಟ್ಟ ಯುವಕ. ಮೂಡುಬಿದಿರೆ ಉದ್ಯೋಗದಲ್ಲಿರುವ ಈತ ಅಮೆಜಾನ್ ಕಂಪೆನಿಯ ಪಾರ್ಸೆಲ್ ಡೆಲಿವರಿ ಕೊಟ್ಟು ಹಿಂದುರುಗುತ್ತಿದ್ದ ವೇಳೆ ಶಿರ್ತಾಡಿಯಲ್ಲಿ ಗೂಡ್ಸ್ ಲಾರಿ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ. ರಸ್ತೆಗೆ ಎಸೆಯಲ್ಪಟ್ಟ ಭವಿತ್ ಶೆಟ್ಟಿ ಅವರಿಗೆ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು ಪಕ್ಕದ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
