ಆಂಧ್ರಪ್ರದೇಶ: ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಸೀಮಾಂಧ್ರವಾಗಿ ಎರಡು ಭಾಗ ಮಾಡಿರುವುದು ಹಾಡಹಗಲೇ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯೆಂದು ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಆರೋಪಿಸಿದ್ದಾರೆ.jagan
ರಾಜ್ಯವನ್ನು ಇಬ್ಬಾಗ ಮಾಡಲು ಸರಕಾರ ಹಲವು ಪ್ರಜಾಂತಾಂತ್ರಿಕವಲ್ಲದ ನಿಯಮಗಳನ್ನು ಅನುಸರಿಸಿದೆ ಎಂದು ಜಗನ್ ಆರೋಪಿಸಿದರು. ಈ ಬಗ್ಗೆ ನಡೆದ ಕಾರ್ಯಗಳನ್ನು ಗಮನಿಸಿದರೆ ಹಾಡಹಗಲೇ ಪ್ರಜಾಪ್ರಭುತ್ವದ ಕೊಲೆಯಾಗಿರುವುದು ಸ್ಪಷ್ಟವಾಗುತ್ತದೆ. ಇದು ನಮ್ಮ ದೇಶದ ಇತಿಹಾಸದಲ್ಲೇ ಕಪ್ಪು ದಿನವಾಗಿದೆ. ಇದನ್ನು ವಿರೋಧಿಸಿ ಬುಧವಾರ ರಾಜ್ಯವ್ಯಾಪಿ ಬಂದ್ ನಡೆಸುವುದಾಗಿ ಸೋಮವಾರ ಜಂತರ್ ಮಂತರ್ನಲ್ಲಿ ಧರಣಿ ಕುಳಿತಿದ್ದ ಜಗನ್ ತಿಳಿಸಿದರು. ಕೇವಲ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಬೇಕೆಂಬ ಯೋಚನೆಯಿಂದ ಟಿಎಸ್ಆರ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಲುವಾಗಿ ಆಂಧ್ರವನ್ನು ಎರಡು ಹೋಳು ಮಾಡಲಾಗಿದೆ ಎಂದು ಜಗನ್ ಆರೋಪಿಸಿದರು. ಸದನದಲ್ಲಿ ನಡೆದ ಪೆಪ್ಪರ್ ಸ್ಪ್ರೇ ಪ್ರಕರಣ ಸೀಮಾಂಧ್ರದ ಶಾಸಕರನ್ನು ಅಮಾನತುಗೊಳಿಸಲು ಕಾಂಗ್ರೆಸ್ ಹೂಡಿದ ತಂತ್ರವೆಂದು ಜಗನ್ ಆರೋಪಿಸಿದರು

By suddi9

Leave a Reply

Your email address will not be published. Required fields are marked *