ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾಲೋಚನಾ ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ ಕಿಣಿ ಇವರನ್ನು ಅಭಿನಂದಿಸಿದರು. ಬಿ.ಸಿ.ರೋಡು: ಕನ್ನಡ ಸಾಹಿತ್ಯ ಪರಿಷತ್, ಸಮಾಲೋಚನಾ ಸಭೆ, ತಿಂಗಳ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಯಿತು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಿ.ಸಿ.ರೋಡು ಕೈಕುಂಜೆ ಕನ್ನಡ ಭವನದಲ್ಲಿ ಬಾಷಾ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ನಾಟಕ ಮತ್ತಿತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಹೇಳಿದ್ದಾರೆ. ಬಿ.ಸಿ.ರೋಡು ಕೈಕುಂಜೆ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಚೆಗೆ ನಡೆದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ಪರಿಷತ್ತಿನ ಸದಸ್ಯರು ಮತ್ತು ಕನ್ನಡಾಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಉದ್ಯಮಿ ಬಂಟ್ವಾಳ ಸುರೇಶ ಕಿಣಿ ಇವರನ್ನು ಅಭಿನಂದಿಸಲಾಯಿತು. ಸಮ್ಮೇಳನ ಸಮಿತಿ ಗೌರವ ಸಲಹೆಗಾರ ಬಸ್ತಿ ವಾಮನ ಶೆಣೈ, ಎ.ಸಿ.ಭಂಡಾರಿ, ಐತಪ್ಪ ಆಳ್ವ, ಜಗನ್ನಾಥ ಚೌಟ ಬದಿಗುಡ್ಡೆ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಕುವೆಂಪು ಭಾಷಾ ಪ್ರಾಧಿಕಾರ ಅಧ್ಯಕ್ಷ ಡಾ.ಅಜೆಕ್ಕಳ ಗಿರೀಶ ಭಟ್, ಕಟ್ಟಡ ಸಮಿತಿ ಸಂಚಾಲಕ ಕೊಳಕೆ ಗಂಗಾಧರ ಭಟ್, ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ನಾಗವೇಣಿ ಮಂಚಿ, ಶಿವಶಂಕರ್, ಮಹಾಬಲೇಶ್ವರ ಹೆಬ್ಬಾರ್, ರಮಾನಂದ ಮತ್ತಿತರರು ಇದ್ದರು.

