ಪುಂಜಾಲಕಟ್ಟೆ : ಸಾಮಾಜಿಕ ಸೇವೆಗೈಯ್ಯುತ್ತಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸೇವಾಕಾರ್ಯದ ಪ್ರಯುಕ್ತ ಕಾಲಿನ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಂಗಳೂರು ತಾಲೂಕು ಬಕಂಪಾಡಿ ಮೀನಕಳಿಯ ಉಷಾ ಮತ್ತು ತುಕಾರಾಮ ಸಾಲ್ಯಾನ್ ದಂಪತಿಯ ೧೨ ವರ್ಷದ ಪುತ್ರಿ ಜಾಗೃತಿಯ ಚಿಕಿತ್ಸೆಗೆ ಅಜ್ಜಿಬೆಟ್ಟು ,ಪದವು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವಿಭಿನ್ನ ವೇಷ ಧರಿಸಿ ಸಂಗ್ರಹಿಸಿದ ೨೮,೫೩೨ ರೂ. ಧನ ಸಹಾಯದ ಚೆಕ್‌ಅನ್ನು ಪದವು ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿಯೋಗೀಶ್ ಕಳಸಡ್ಕ, ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.
