ಗುರುಪುರ : ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಜಿ ಟಿ ವಾಸುದೇವ ಭಟ್, ವಿನಾಯಕ ಕಾರಂತರ ನೇತೃತ್ವದಲ್ಲಿ ಗುರುಪುರ ಶ್ರೀ ಜಂಗಮ ಮಠದ ಶ್ರೀ ರುದ್ರಮುನಿ ಸ್ವಾಮಿ ಉಪಸ್ಥಿತಿಯಲ್ಲಿ ಮಾ. ೫ರಿಂದ ೭ರವರೆಗೆ ಕಲಶಾಭಿಷೇಕ ಹಾಗೂ ಶ್ರೀ ವೈದ್ಯನಾಥ, ಧೂಮಾವತಿ, ಬಂಟ ಪರಿವಾರ ದೈವಗಳಿಗೆ `ಧರ್ಮ ನೇಮೋತ್ಸವ’ ನಡೆಯಲಿದೆ.gur-mar-4-vaidyanatha
ಮಾ. ೫ರಂದು ಬೆಳಿಗ್ಗೆ ೧೦ಕ್ಕೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಧ್ಯಾಹ್ನ ಶ್ರೀ ಕ್ಷೇತ್ರ ಜಂಗಮ ಮಠದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಲಿದೆ. ಮಾ. ೬ರಂದು ಬೆಳಿಗ್ಗೆ ೫ಕ್ಕೆ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಿಂದ ಅಗ್ನಿದುರ್ಗಾ ದೇವಸ್ಥಾನಕ್ಕೆ ಭಂಡಾರ ಆಗಮಿಸಲಿದೆ. ಬೆಳಿಗ್ಗೆ ೧೧ಕ್ಕೆ ಶ್ರೀ ದೈವಗಳ ದರ್ಶನ ಸೇವೆ, ಪಲ್ಲಪೂಜೆ, ೧ ಗಂಟೆಯಿAದ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ೨ ಗಂಟೆಯಿAದ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿAದ `ಶ್ರೀ ಅಗ್ನಿದುರ್ಗಾ ಕ್ಷೇತ್ರ ಮಹಾತ್ಮೆ’ ಕ್ಷೇತ್ರಾಧರಿತ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ ೬:೩೦ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ರುದ್ರಮುನಿ ಸ್ವಾಮಿ, ಶ್ರೀ ರಾಜಶೇಖರಾನಂದ ಸ್ವಾಮಿ, ಶ್ರೀ ಚಂದ್ರಕಾAತ ಭಟ್, ಸದಾನಂದ ಮಲ್ಲಿ(ಅಧ್ಯಕ್ಷತೆ) ಹಾಗೂ ಅತಿಥಿಗಳಾಗಿ ಡಾ. ರವಿ ಶೆಟ್ಟಿ ಕತಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಮಾಜಿ ಸಚಿವ ನಾಗರಾಜ ಶೆಟ್ಟಿ ಮತ್ತಿತರ ಗಣ್ಯಾತಿಗಣ್ಯರು ಪಾಲ್ಗೊಳ್ಳುವರು. ರಾತ್ರಿ ೮ಕ್ಕೆ ಶ್ರೀ ಮೈಸಂದಾಯ ದೈವದ ನೇಮ. ರಾತ್ರಿ ೧೦ರಿಂದ ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವದ ನೇಮೋತ್ಸವ ನಡೆಯಲಿದೆ.
ಮಾ. ೭ರಂದು ಮಹಾಪೂಜೆ ಬಳಿಕ ಮಧ್ಯಾಹ್ನ ೧ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ ೭ರಿಂದ ಶ್ರೀ ಧೂಮಾವತಿ ಮತ್ತು ಬಂಟ ದೈವದ ನೇಮೋತ್ಸವ ಜರುಗಲಿದೆ. ದೈವದ ಅಭಯ ಪ್ರದಾನದ ಬಳಿಕ ಭಂಡಾರ ನಿರ್ಗಮನವಾಗಲಿದೆ. ರಾತ್ರಿ ೧೦:೩೦ರಿಂದ ಶ್ರೀ ಸತ್ಯದೇವತೆ, ೧೨ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ರಾತ್ರಿ ೨ರಿಂದ ಶ್ರೀ ವರ್ತೆ ಪಂಜುರ್ಲಿ ದೈವದ ಕೋಲ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *