ಇರುವೆ ಬಗ್ಗೆ ನಿಮಗೆಷ್ಟು ಗೊತ್ತು?
ನಮ್ಮ ಮನೆಯ ಅಂಗಳದಲ್ಲಿ ಬ್ಯುಸಿಯಾಗಿರುವ ಇರುವೆಗಳನ್ನು ಒಂದಷ್ಟು ಹೊತ್ತು ಗಮನಿಸಿ ನೋಡಿ… ಇರುವೆಗಳ ಬ್ಯುಸಿ ಲೈಫ್ ನಮಗೆ ಅಚ್ಚರಿ ತರಿಸುತ್ತದೆ.
ತಿಂಡಿನ ತುಣುಕೊಂದು ನಮ್ಮ ಮನೆಯ ಅಂಗಳದಲ್ಲಿ ಬಿದ್ದಿರುತ್ತದೆ. ಅಷ್ಟರಲ್ಲಿ ಅಲ್ಲಿಗೆ ಒಂದು ಇರುವೆಯ ಆಗಮನವಾಗುತ್ತದೆ. ಆ ತಿಂಡಿಗೆ ನಾಲ್ಕೈದು ಸುತ್ತು ಹಾಕಿ ಅವಲೋಕನ ನಡೆಸಿದ ಇರುವೆ ಅದನ್ನು ಹೇಗೆ ಗೂಡಿಗೆ ಕೊಂಡೊಯ್ಯುವುದು ಎಂಬ ಬಗ್ಗೆ ಅದರ ಪುಟ್ಟ ಮೆದುಳಿನಲ್ಲಿ ಯೋಜನೆ ಸಿದ್ಧವಾಗುತ್ತದೆ. ತಿಂಡಿ ಜಾಗ ಇದ್ದ ಜಾಗವನ್ನು ಗರುತು ಹಾಕಿ ತೆರಳುವ ಇರುವೆ ಇದರ ಬಗ್ಗೆ ತನ್ನ ಸಂಗಡಿಗರಿಗೆ ಸುದ್ದಿ ಮುಟ್ಟಿಸುತ್ತದೆ.
ತನ್ನ ಸಂಗಡಿಗರಲ್ಲಿ ಆ ತಿಂಡಿಯ ಗಾತ್ರ, ರುಚಿ, ಅದನ್ನು ತರುವುದು ಹೇಗೆ ಎಂಬ ಬಗ್ಗೆ ತನ್ನ ಸಂಗಡಿರಲ್ಲಿ ಹೇಳುತ್ತಿರುವಂತೆ ಭಾಸವಾಗುತ್ತದೆ. ಆಮೇಲೆ ತಿಂಡಿಯ ಕಡೆಗೆ ಇರುವೆಗಳ ದಂಡು ತಿಂಡಿಯ ಕಡೆಗೆ ಆಗಮಿಸುತ್ತದೆ. ತಿಂಡಿಯನ್ನು ಕಂಡುಹಿಡಿದ ಇರುವೆ ಮೊದಲ ಸಾಲಿನಲ್ಲಿ ಇರುವುದನ್ನು ಗಮನಿಸಬಹುದು.
ತಿಂಡಿಯನ್ನು ಕಂಡುಹಿಡಿದ ಇರುವೆ ಮೊದಲೇ ದಾರಿಯನ್ನು ಕಂಡುಹಿಡಿದಿರುವುದರಿಂದ ಅದೇ ದಾರಿಯಲ್ಲಿ ಸಾಗುವುದನ್ನು ಕಾಣಬಹುದು. ಇರುವೆಗಳು ತಿಂಡಿಯ ಬಗ್ಗೆ ದೊಡ್ಡದಾಗಿ ಚಚರ್ೆ ನಡೆಸುತ್ತಾ ಅದರ ವಿಶೇಷತೆಗಳನ್ನು ವಿವರಿಸುತ್ತಿರುವಂತೆ ನಮಗೆ ಭಾಸವಾಗುತ್ತದೆ. ತಿಂಡಿ ಸಿಕ್ಕಿದ ಮೇಲೆ ಆ ತಿಂಡಿಯನ್ನು ನಾಲ್ಕೈದು ಇರುವೆಗಳು ಒಂದಕ್ಕೊಂದು ಒಂದು ಎಳೆದಡುತ್ತಾ ಗಲಾಟೆ ನಡೆಸುತ್ತಾ, `ಡಬಕ್ ಡಬಾ ಐಸಾ….’ ಎಂದು ಹೇಳುತ್ತಾ ತನ್ನ ಗೂಡಿನೆಡೆಗೆ ಸಾಗಿಸುತ್ತದೆ. ಕೆಲವು ಪೋಕರಿ ಇರುವೆಗಳು ತಿಂಡಿಯನ್ನು ಕಚ್ಚಿ ತುಂಡು ಮಾಡಿ ಪ್ರತ್ಯೇಕವಾಗಿ ಸಾಗಿಸುವುದನ್ನು ಗಮನಿಸಬಹುದು.

DSC02523

DSC02524

DSC02525

 

DSC02526

ಇರುವೆಗೂ ನಮ್ಮಂತೆಯೇ ಪ್ರತ್ಯೇಕ ರೂಮುಗಳಿವೆ:
ಇರುವೆಗಳ ಗೂಡನ್ನು ಗಮನಿಸಿದರೆ ಗೊತ್ತಾಗುತ್ತದೆ, ಅವುಗಳಿಗೂ ನಮ್ಮಂತೆಯೇ ಪ್ರತ್ಯೇಕ ಪ್ರತ್ಯೇಕ ರೂಮುಗಳಿವೆ ಎಂಬುದು. ಕೆಂಪಿರುವೆಗಳು ಮಣ್ಣಿನಿಂದ ಮಾಡಿರುವ ಟೆರೇಸ್ ಮನೆಯನ್ನು ನೋಡಿದರೆ ನಮಗೆ ಅರ್ಥವಾಗುತ್ತದೆ. ಮಣ್ಣಿನಲ್ಲೇ ಗೂಡುಗಳನ್ನು ಕಟ್ಟಿಕೊಳ್ಳುವ ಇರುವೆಗಳು ಪ್ರತಿಯೊಂದು ವ್ಯವಸ್ಥೆಯನ್ನೂ ಮಾಡಿಕೊಂಡಿರುತ್ತದೆ. ತಿಂಡಿಯನ್ನು ಸಂಗ್ರಹಿಸಲು ಉಗ್ರಾಣ, ಕೊಳೆತ ವಸ್ತುಗಳನ್ನು ಹಾಕಲು ಅದಕ್ಕೂ ಒಂದು ರೂಮು, ತನ್ನ ಮಹಾರಾಣಿ ಕೂರಲು ದೊಡ್ಡದಾದ ರೂಮು ಇರುತ್ತದೆ. ಮಹಾರಾಣಿ ಇಟ್ಟ ಮೊಟ್ಟೆಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಸಾಗುವ ನೌಕರ ಇರುವೆಗಳು ಅದನ್ನು ಪ್ರತ್ಯೇಕ ರೂಮಿಗೆ ಸಾಗಿಸುತ್ತದೆ. ಅವುಗಳಿಂದ ಮರಿ ಇರುವೆಗಳು ಬರುವ ತನಕ ಅದನ್ನು ಕಾಯುವುದು ನೌಕರ ಇರುವೆಗಳ ಕೆಲಸ.

ಇರುವೆಗಳ ಮಧ್ಯೆ ಘೋರ ಯುದ್ದ:
ತನ್ನ ದಾರಿಗೆ ಯಾವುದಾದರೂ ಬೇರೆ ಜಾತಿಯ ಇರುವೆಗಳು ಅಡ್ಡ ಬರುತ್ತದೆ ಎಂದು ಗೊತ್ತಾದರೆ ಇರುವೆಗಳು ಸಹಿಸುವುದಿಲ್ಲ, ಎರಡು ಗುಂಪಿನ ಇರುವೆಗಳ ಮಧ್ಯೆ ನಡೆಯುವ ಯುದ್ಧ ಭಯಂಕರವಾಗಿರುತ್ತದೆ, ಸೋತ ಇರುವೆಗಳು ಗೆದ್ದ ಇರುವೆಗಳ ಜೀವನಪೂತರ್ಿ ದಾಸರಾಗಿ ಕೆಲಸಮಾಡಬೇಕಾಗುತ್ತದೆ. ಅದಕ್ಕೆಂದೇ ಇರುವೆಗಳು ದಾಳಿ ನಡೆಸಂತೆ ಮೊದಲೇ ಜಾಗೃತೆ ನಡೆಸುತ್ತದೆ.
ನಮ್ಮ ಮನೆಯ ಮುಂದೆ ಇತ್ತೀಚೆಗೆ ಕೆಂಪಿರುವೆಗಳು ಕಪ್ಪಿರುವೆಯ ಗೂಡಿನ ಮೇಲೆ ದಾಳಿ ನಡೆಸಿತ್ತು. ಎರಡು ದಿನಗಳ ಘೋರ ಕದನವದು. ನಾನು ಎರಡು ದಿನವಾದ ಮೇಲೆ ಗಮನಿಸಿದಾಗ ಕಪ್ಪಿರುವೆಗಳು ನಸುಗೆಂಪುಬಣ್ಣಕ್ಕೆ ತಿರುಗಿ ತನ್ನ ಕಪ್ಪಿರುವೆಯ ಗುಣಗಳನ್ನು ಕಳೆದುಕೊಂಡು ಕೆಂಪಿರುವೆಯ ರೀತಿಯೇ ವತರ್ಿಸುತ್ತಿತ್ತು.
ಇದಕ್ಕೆ ಕಾರಣವಿದೆ. ಎರಡು ಗುಂಪಿ ಮಧ್ಯೆ ನಡುವೆ ನಡೆಯುವ ಇರುವೆಗಳ ಪೈಕಿ ಒಂದು ಇರುವೆಯ ಗುಂಪು ಸೋತು ಶರಣಾಗುತ್ತದೆ. ಗೆದ್ದ ಇರುವೆ ತನ್ನ ಬಾಯಿಯಿಂದ ಸೋತ ಇರುವೆಗೆ ತನ್ನ ರಾಸಾಯನಿಕವನ್ನು ಹಾಯಿಸಿ ಅದನ್ನು ತನ್ನ ಗುಲಾಮನನ್ನಾಗಿ ಮಾಡುತ್ತದೆ. ಆಮೇಲೆ ಸೋತ ಇರುವೆ ತನ್ನ ಗುಣಲಕ್ಷಣಗಳನ್ನು ಕಳೆದುಕೊಂಡು ಗೆದ್ದ ಇರುವೆಯ ಗುಣವನ್ನು ಪಡೆದುಕೊಳ್ಳುತ್ತದೆ.
ಇರುವೆಗಳು ಸಂಘಜೀವಿಗಳು. ಕೆಲವೊಂದು ಇರುವೆಗಳು ಯುದ್ಧದದ ಸಂದರ್ಭ ತಪ್ಪಿಸಿಕೊಳ್ಳುವುದು ನೋಡಬಹುದು. ಈ ವೇಳೆ ಆ ಇರುವೆಗಳು ಏಕಾಂಗಿಯಾಗಿ ಜೀವನ ನಡೆಸುವುದನ್ನು ನೋಡಬಹುದು. ಇರುವೆಗಳು ತನ್ನ ತಿಂಡಿ ಸಂಗ್ರಹಿಸುವುದು. ಶತ್ರುವಿನ ಮೇಲೆ ದಾಳಿ ನಡೆಸುವುದು ಎಲ್ಲವೂ ಸಾಹಸಮಯ. ಶತ್ರುವನ್ನು ಮಣಿಸಲು ಯಾವ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತದೆ. ಇರುವೆಗೆ ಇರುವೆಯೇ ಸಾಟಿ…

ಗಿರೀಶ್ ಮಳಲಿ

By suddi9

Leave a Reply

Your email address will not be published. Required fields are marked *