modi

ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ಮೇಲೆ ಅವಲಂಬಿತವಾಗಿದ್ದು, ಅದರೊಳಗೆ ಪ್ರಜಾಪ್ರಭುತ್ವಕ್ಕೆ ಸ್ಥಳವಿಲ್ಲ, ಪ್ರಜಾಪ್ರಭುತ್ವಕ್ಕೆ ಕುಟುಂಬವಾದ, ಜಾತಿವಾದ, ಸಂಪ್ರದಾಯವಾದ ಹಾಗೂ ಅವಕಾಶವಾದ ತುಂಬಾ ಮಾರಕ, ಆದರೆ ಕಾಂಗ್ರೆಸ್ ಮಾತ್ರ ಇವುಗಳನ್ನು ಅನುಸರಿಸುತ್ತಾ ದುರಹಂಕಾರದಿಂದ ಮೆರೆಯುತ್ತಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಅವರು ದಾವಣಗೆರೆಯ ನಗರದ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ `ಭಾರತ ಗೆಲ್ಲಿಸಿ’ ಎಂಬ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಪ್ರೀತಿಗೆ ಅಭಾರಿ: ಮೋದಿ ಪ್ರೀತಿಯನ್ನು ಮರೆಯುವ ವ್ಯಕ್ತಿಯಲ್ಲ, ಪ್ರೀತಿಗೆ ಸೋಲುವ ನಾನು ನಿಮ್ಮ ಪ್ರೀತಿಗೆ ನನ್ನ ಋಣವನ್ನು ಖಂಡಿತಾ ತೀರಿಸುತ್ತೇನೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯಥರ್ಿ ಗೆಲುವು ಸಾಧಿಸಲು ನಿಮ್ಮ ಬೆಂಬಲ ಕೋರುತ್ತಿದ್ದೇನೆ ಎಂದು ಮೋದಿ ರ್ಯಾಲಿಯಲ್ಲಿ ಸೇರಿದ್ದ ಲಕ್ಷಾಂತರ ಮಂದಿಯ ಸಭೆಯಲ್ಲಿ ಮನವಿ ಮಾಡಿದ್ದಾರೆ. ಯಡಿಯೂರಪ್ಪ ಗ್ರೇಟ್: ರಾಜ್ಯದಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಗ್ರೇಟ್ ಎಂದು ಶ್ಲಾಘಿಸಿದ ಮೋದಿ ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾಗಿರುವುದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದರು. ಹಣ ಮರದಲ್ಲಿ ಬೆಳೆಯುವುದಿಲ್ಲ ಎಂದು ಪ್ರಧಾನಿ ಮೋಹನ್ಜೀ ಹೇಳುತ್ತಾರೆ. ಆದರೆ ರೈತರು ಕಷ್ಟ ಪಟ್ಟು ದುಡಿದರೆ ಮಾತ್ರ ಹಣ ಬರುತ್ತದೆ ಎಂದು ಬಿಜೆಪಿಗೆ ತಿಳಿದಿದೆ. ಅದಕ್ಕಾಗಿಯೇ ಬಿಜೆಪಿ ಕೃಷಿಕರಗೆ ಸೌಲಭ್ಯ ನೀಡುತ್ತದೆ ಎಂದು ಹೇಳಿದ ಮೋದಿ ತಮ್ಮ ಭಾಷಣದಲ್ಲೂ ಯಡಿಯೂರಪ್ಪನವರ ಹೆಸರನ್ನು ಐದಾರು ಭಾರಿ ಪ್ರಸ್ತಾಪಿಸಿದರು. ಈ ವೇಳೆ ಯಡಿಯೂರಪ್ಪ ಮುಖದಲ್ಲಿ ಮಂದಹಾಸ ಮೂಡಿದ್ದರಿಂದ ಜನಸ್ತೋಮ ಘೋಷಣೆ ಕೂಗುವ ಮೂಲಕ ಮೋದಿಗೆ ಧ್ವನಿಗೂಡಿಸಿದರು. ಸೋನಿಯಾಗೆ ಆಂಧ್ರಕ್ಕೆ ಹೋಗಲು ಪುರುಸೊತ್ತಿಲ್ಲವೇ? ಕಾಂಗ್ರೆಸ್ ಅಧ್ಯಕ್ಷೆ ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದಾರಾದರೂ, ಆಂಧ್ರಪ್ರದೇಶಕ್ಕೆ ಹೋಗಲು ಯಾಕೆ ಸಮಯ ಸಿಗುತ್ತಿಲ್ಲ? ಪ್ರತ್ಯೇಕ ತೆಲಂಗಾಣ ವಿಭಜನೆಯ ಮೂಲಕ ಸೋನಿಯಾ ಆಂಧ್ರದ ಜನರಿಗೆ ನಿರಂತರ ಕಷ್ಟ ಕೊಡುತ್ತಿದ್ದಾರೆ. ಆದರೆ ಅವರಿಗೆ ಅಲ್ಲಿನ ಜನತೆಯ ಕಷ್ಟಗಳನ್ನು ಕೇಳಲು ಮಾತ್ರ ಪುರುಸೊತ್ತಿಲ್ಲ, ಜನರ ಕಷ್ಟವನ್ನು ಕೇಳಲು ಅವರಿಗೆ ಪುರುಸೊತ್ತಿಲ್ಲವೇ? ಎಂದು ಪ್ರಶ್ನಿಸಿದರು ಮೋದಿ. ಒಡೆದು ಆಳುತ್ತಿದೆ ಕಾಂಗ್ರೆಸ್: ಕಾಂಗ್ರೆಸ್ ಪಾಳೆಗಾರಿಕೆ ನಡೆಸುವ ಮೂಲಕ ದೇಶವನ್ನು ಒಡೆದು ಆಳುತ್ತಿದೆ, ಆದುದರಿಂದ ಕಾಂಗ್ರೆಸ್ಗೆ ಜನತೆ ಇತಿಹಾಸದಲ್ಲಿ ಎಂದೂ ಮರೆಯದಂಥ ಶಿಕ್ಷೆ ನೀಡಬೇಕು. `ಕಾಂಗ್ರೆಸ್ ಮುಕ್ತ ಭಾರತ’ ಭಾರತ ನಿಮರ್ಾಣ ಮಾಡುವ ಮೂಲಕ ಕಾಂಗ್ರೆಸ್ಗೆ ಶಿಕ್ಷೆ ನೀಡಬೇಕು ಎಂದು ಮೋದಿ ಕರೆ ನೀಡಿದರು. ಕಾಂಗ್ರೆಸ್ ಚಿಂತನೆ ರಹಿತ ಪಕ್ಷ: ಕಾಂಗ್ರೆಸ್ ಒಂದು ಚಿಂತನೆ ರಹಿತ ಪಕ್ಷ, ಕಾಂಗ್ರೆಸ್ ಚಿಂತನೆ ಗಾಂಧಿಯೊಂದಿಗೇ ಮುಗಿದು ಹೋಗಿದೆ. ಕಾಂಗ್ರೆಸ್ ತನ್ನ ಚಿಂತನೆಯಲ್ಲಿ ಬಡತನ ಒಂದು ಮನಸ್ಥಿತಿ ಎಂದು ಹೇಳುತ್ತದೆ, ಆದರೆ ಬಡತನ ನಿಮರ್ೂಲನೆ ಮಾಡುವುದು ದೇವರ ಸೇವೆ ಇದ್ದಂತೆ. ಇದು ಬಿಜೆಪಿಯ ಚಿಂತನೆ ಆಗಿದ್ದು ಇದರಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿಯ ವ್ಯತ್ಯಾಸವನ್ನು ಜನರು ಗುರುತಿಸಬಹುದು ಎಂದು ಹೇಳಿದರು. ದೇಶವೆಂದರೆ ತಾಯಿ: ಬಿಜೆಪಿಗೆ ದೇಶವೆಂದರೆ ತಾಯಿ, ಆದರೆ ಕಾಂಗ್ರೆಸ್ ಭ್ರಷ್ಟಾಚಾರದಿಂದ ಗಳಿಸಿದ ಹಣವನ್ನು ಹೇಗೆ ಕಾಪಾಡುವುದು ಎಂದು ಮಾತ್ರ ಚಿಂತಿಸುತ್ತದೆ ಎಂದರು. ದೆಹಲಿ ಅತ್ಯಚಾರದ ರಾಜಧಾನಿ: ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ. ರಾಷ್ಟ್ರರಾಜಧಾನಿಯಾಗಿ ಮಾದರಿಯಾಗಬೇಕಾಗಿದ್ದ ದೆಹಲಿ ಅತ್ಯಾಚಾರದ ರಾಜಧಾನಿಯಾಗುತ್ತಿದೆ. ಕಾಂಗ್ರೆಸ್ಗೆ ಮಹಿಳೆ ಮತ್ತು ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಮೋದಿ ವ್ಯಂಗ್ಯವಾಡಿದರು. ದಾವಣಗೆರೆ ಬಗ್ಗೆ ಮೋದಿ ಭಾಷಣದ ಹೈಲೈಟ್ಸ್: ನಾನು ದಾವಣಗೆರೆಗೆ ಬಂದಿದ್ದೆ. ನಿಮ್ಮೊಂದಿಗೆ ಮಾತಾಡಿಯೂ ಇದ್ದೆ, ಆದರೆ ದಾವಣಗೆರೆಯಲ್ಲಿ ಇಂಥಾ ಜನಸಾಗರ ನೋಡಿದ್ದು ನಾನು ಇತಿಹಾಸದಲ್ಲಿ ಇದೇ ಮೊದಲು. ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಹತ್ತಿಬೆಳೆಯುತ್ತಿದ್ದ ಕಾಟನ್ ಸಿಟಿ ಆಗಿತ್ತು. ಹತ್ತಿ ಬೆಳೆಯುವ ರೈತರಿಗೆ ಸರಕಾರ ಸರಿಯಾದ ಸೌಲಭ್ಯ ನೀಡದೇ ಇರುವುದರಿಂದ ರೈತರು ಇಂದು ಹತ್ತಿ ಬೆಳೆಯುವುದನ್ನು ನಿಲ್ಲಿಸಿದ್ದಾರೆ ಎಂದರು ಮೋದಿ. ಮೋದಿ ಬರಮಾಡಿದ ಬಿಜೆಪಿ ರಾಜ್ಯ ನಾಯಕರ ದಂಡು: ಇಂದು ವಿಧಾನಸಭೆ ಬಿಜೆಪಿ ಕಾಗೇರಿ ಹಾಗೂ ಸುರೇಶ್ ಕುಮಾರ್ ಅವರನ್ನು ಬಿಟ್ಟರೆ ಉಳಿದಂತೆ ಶಾಸಕರಿಲ್ಲದೆ ಬಿಕೋ ಎನ್ನುತ್ತಿತ್ತು. ಮೋದಿಯವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಅನಂತ್ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತಿತರರು ಆತ್ಮೀಯತೆಯಿಂದ ಬರಮಾಡಿಕೊಂಡರು. ಸುಮಾರು 1.30ಕ್ಕೆ ಭಾಷಣ ಆರಂಭಿಸಿದ ಮೋದಿ ತನ್ನ ಪ್ರತಿ ಮಾತುಗಳಲ್ಲೂ ಕಾಂಗ್ರೆಸನ್ನು ಕಟುಶಬ್ದಗಳಿಂದ ಟೀಕಿಸಿದ್ದು ವಿಶೇಷವಾಗಿತ್ತು

By suddi9

Leave a Reply

Your email address will not be published. Required fields are marked *