ಪೊಳಲಿ: ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳ ಭಕ್ತರಿಲ್ಲದೆ ಭಣಗುಡುತ್ತಿದೆ, ಮಾಮೂಲಿಯಾಗಿದ್ದಿದ್ದರೆ ಇದು ಭಕ್ತರಿಂದ ದೇವಸ್ಥಾನ ಗಿಜಿಗುಡುತ್ತಿದ್ದ ಸಮಯ. ಕೋವಿಡ್ -19 ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ದೇವಸ್ಥಾನ ಕ್ಕೆ ಭಕ್ತರ ಭೇಟಿಗೆ ನಿರ್ಬಂಧ ವಿಧಿಸಿದ ಪರಿಣಾಮ, ದೇವಿಯ ಮೇಲೆ ಅಪಾರ ಭಕ್ತಿ ಇರುವ ಭಕ್ತರು ದೇವರ ದರ್ಶನ ಸಿಗದೇ ನಿರಾಶೆ ಅನುಭವಿಸುವಂತಾಗಿದೆ.9vppolali jathre

ಈ ಬಾರಿ  ಕಳೆದ ವರ್ಷ ದೇವಸ್ಥಾನ ಸಂಪೂರ್ಣ ಜೀರ್ಣೋಧಾರಗೊಂಡು ಬ್ರಹ್ಮಕಲಶೋತ್ಸವ ನಡೆದು ವಾರ್ಷಿಕ ಜಾತ್ರೆ ನಡೆದಿತ್ತು .ಈ ಬಾರಿ ಮಾರ್ಚ್ 14 ರಂದು ದ್ವಜರೋಹಣಗೊಂಡು 29 ದಿನದ ಜಾತ್ರೆ ನಿಗದಿಯಾದ ಮರುಗಳಿಗೆಯಲ್ಲಿಯೆ ಜಿಲ್ಲಾಡಲಿತವು ಬಂಟ್ವಳ ಶಾಸಕ ರಾಜೇಶ್ ನಾಯ್ಕ್ ಅವರೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ,ಅರ್ಚಕರುವಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಈ ವರ್ಷದ ವಾರ್ಷಿಕಜಾತ್ರೆಯನ್ನು ಸರಳ ರೀತಿಯಲ್ಲಿ ಅಚರಿಸುವಂತೆ ನಿರ್ದಾರವನ್ನು ಮಾಡಿತು ಭಕ್ತರಿಗೆ ಕೊರೊನಾದಿಂದ ಜಾತ್ರೆಯ ಸಂಭ್ರಮವು ಇಲ್ಲವಾಗಿಸಿದ್ದು ಭಕ್ತರ ಬೇಸರಕ್ಕೆ ಕಾರಣವಾಗಿತ್ತು.

By suddi9

Leave a Reply

Your email address will not be published. Required fields are marked *