ಕೈಕಂಬ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಯಾವುದೇ ಭೇದ ಭಾವ ಮಾಡದೆ ಸ್ಪಂದಿಸುತ್ತಿದ್ದೇನೆ, ಇದರಲ್ಲಿ ನಾನು ಯಾವುದೇ ರಾಜಕೀಯ ದುರುದ್ದೇಶ ಹೊಂದಿಲ್ಲ ರಿಕ್ಷಾ ಚಾಲಕರ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಎಡಪದವು ರಾಮ ಮಂದಿರದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಡಪದವು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಮೂಡುಪೆರಾರ, ಮುಚ್ಚೂರು ,ಬಡಗ ಎಡಪದವು, ತೆಂಕ ಎಡಪದವು,ಕುಪ್ಪೆಪದವು ಮುತ್ತೂರು ಪ್ರದೇಶಗಳ ಆಟೋರಿಕ್ಷಾ ಪಾರ್ಕ್ ಗಳಲ್ಲಿ ದುಡಿಯುವ ಎಲ್ಲಾ ರಿಕ್ಷಾ ಚಾಲಕ, ಮಾಲಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. 
ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ ಮುಚ್ಚೂರು, ಬಿಜೆಪಿ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಉಪಾಧ್ಯಕ್ಷರಾದ ಪ್ರಸಾದ್ ಎಡಪದವು, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಹಾಗೂ ಸಂದೀಪ್ ಪಚ್ಚನಾಡಿ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಆನಂದ ದೇವಾಡಿಗ, ಎಡಪದವು ಪಂ.ಉಪಾಧ್ಯಕ್ಷ ಗಂಗಾಧರ್, ವೀರಪ್ಪ ಗೌಡ, ಗಣೇಶ್ ಪಾಕಜೆ, ಅನಿಲ್ ಪೆರಾರ, ಅಮಿತಾ ಶೆಟ್ಟಿ ಪೆರಾರ ಮತ್ತಿತರರು ಉಪಸ್ಥಿತರಿದ್ದರು.
