ಕೈಕಂಬ : ಮಂಗಳೂರು ತಾಲೂಕಿನ ಗುರುಪುರದ ಗೋಳಿದಡಿಗುತ್ತಿನ ಚಾವಡಿಯ  ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ದೇವರ ವಿಗ್ರಹ ರಚನೆಗಾಗಿ ಸೋಮವಾರ ಬೃಹತ್ ಏಕಶಿಲಾ ದಿಬ್ಬ ತರಲಾಯಿತು.gur-may-11-kallu-1

ನದಿ ತೀರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರನ ಭವ್ಯಮೂರ್ತಿ 18 ಅಡಿ ಇದ್ದರೆ, ವಿಗ್ರಹದ ಪದ್ಮಪೀಠ ಎರಡು ಅಡಿ ಎತ್ತರವಿರುತ್ತದೆ. ಒಟ್ಟು 20 ಅಡಿ ಎತ್ತರದ ಈ ವಿಗ್ರಹ, ಭೂಮಿಯಿಂದ 20 ಅಡಿ ಎತ್ತರದ ಶಿಲಾಮಯ ಆಲಯದಲ್ಲಿ ನೆಲೆಗೊಳ್ಳಲಿದೆ. ಅಂದರೆ ಬಯಲು ಆಲಯದ ವಿಗ್ರಹ ಭೂಮಿಯಿಂದ ಒಟ್ಟು 40 ಅಡಿ ಎತ್ತರದಲ್ಲಿರುತ್ತದೆ.gur-may-11-kallu-2

ಇಲ್ಲಿಗೆ ಆಗಮಿಸುವ ಭಕ್ತರು ದೇವಾಲಯದ ಮೇಲೇರಿ, ಆರು ಹಸ್ತಗಳಿರುವ ಶಿವನ ಸ್ಪರ್ಶಿಸಿ ಪೂಜಿಸುವ ವಿಶಿಷ್ಟ ವ್ಯವಸ್ಥೆ ಇರುತ್ತದೆ. ಇಂತಹ ವ್ಯವಸ್ಥೆ ಬೇರೆಲ್ಲೂ ಇಲ್ಲ. ವೇಣೂರಿನ ಕೃಷಿಕ ಕುಟುಂಬದ ವೀರಪ್ಪ ಪೂಜಾರಿ ಮತ್ತು ಸಹೋದರರು ತಮ್ಮ ವರ್ಗ ಜಾಗದಲ್ಲಿರುವ ಈ ಶಿಲಾ ದಿಬ್ಬವನ್ನು ಉಚಿತವಾಗಿ ನೀಡಿದ್ದಾರೆ. ಬೆಳ್ತಂಗಡಿ ಲಾೈಲದ ಮಂಜುಶ್ರೀ ಶಿಲ್ಪಕಲಾ ಶಾಲೆಯ ವೆಂಕಟೇಶ ಆಚಾರ್ಯ ಮತ್ತು ಶಿಲ್ಪಕಲಾ ಅನುಭವಿ ತಂಡದವರು ಮುಂದಿನ ಒಂದೂವರೆ ವರ್ಷದಲ್ಲಿ ಭವ್ಯ ವಿಗ್ರಹ ನಿರ್ಮಿಸಲಿದ್ದಾರೆ.gur-may-11-kallu-3

ಶ್ರೀ ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಗೋಳಿದಡಿಗುತ್ತು ಗುರುಪುರ ಇದರ ಉಸ್ತುವಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದ ಮಾರ್ಗದರ್ಶಕರಾಗಿದ್ದಾರೆ. 2022ರಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದರು.

By suddi9

Leave a Reply

Your email address will not be published. Required fields are marked *