ಬಜಪೆ:ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಜಪೆಯ ಪಾಪಿಲಾನ್ ಬಾರ್ ಸಮೀಪ ಇಂದು ಮಧ್ಯಾಹ್ನ ನಡೆದಿದೆ.ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಶಶಿಕಲಾ ಆಚಾರ್ಯ (48)ಎಂದು ಗುರುತಿಸಲಾಗಿದೆ.ಬೈಕ್ ಸವಾರ ನಿಗೂ ಕೈ ಮತ್ತು ಕಾಲಿನ ಭಾಗಕ್ಕೆ ಗಾಯಗಳಾಗಿವೆ. ಟಿಪ್ಪರ್ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣ ವೆನ್ನಲಾಗಿದೆ.
ಶಾಂತಿಗುಡ್ಡೆ ಕಡೆಯಿಂದ ಬಜಪೆ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಬೈಕ್ ಗೆ ಹಿಂಬಂದಿಯಿಂದ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಹಿಂಬಂದಿ ಸವಾರೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ಇವರ ತಲೆಯ ಮೇಲೆಯೇ ಟಿಪ್ಪರ್ ನ ಚಕ್ರವು ಹರಿದು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
