ಬಂಟ್ವಾಳ: ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜೀವನಾವಶ್ಯಕ ವಸ್ತುಗಳಿಲ್ಲದ ಬಡ ಕುಟುಂಬಕ್ಕೆ ಸಾಮಾಜಿಕ ಕಳಕಳಿಯುಳ್ಳ ಯುವ ಉದ್ಯಮಿ ಉಮಾಶಂಕರ್ ಬೆಂಗಳೂರು ಅವರ ನೇತೃತ್ವದಲ್ಲಿ ದಿನಬಳಕೆಯ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಬಂಟ್ವಾಳ ಪರಿಸರದ ಗಾಳದ ಕೊಂಕಣಿ ಸಮುದಾಯದ ಬಂದುಗಳಿಗೆ ಸೇರಿದಂತೆ ಇತರ ಬಡಕುಟುಂಬದ ಬಂಧುಗಳಿಗೂ ಅಕ್ಕಿ,ಸಕ್ಕರೆ,ಚಾಹುಡಿ ಸಹಿತ ತಿಂಡಿತಿನಸುಗಳ ಕಿಟ್ ನ್ನು ಸುಮಾರು 25ಕ್ಕು ಹೆಚ್ಚು ಮಂದಿಗೆ ವಿತರಿಸಲಾಯಿತು.
ಈ ಸಂದರ್ಭ ಪತ್ರಕರ್ತ ವೆಂಕಟೇಶ್ ಬಂಟ್ವಾಳ,ಶ್ರೀನಾಥ್ ಶೆಣೈ,ಗಿರೀಶ್ ಪೈ,ಪ್ರೇಮನಾಥ್ ನಾಯ್ಕ,ಗೋಪಿನಾಥ್, ಜಯರಾಮ ನಾಯ್ಕ, ಶಿವಾನಂದ ಭಂಡಾರಿಬೆಟ್ಟು ಮೊದಲಾದವರಿದ್ದರು.
