ಬಂಟ್ವಾಳ: ವೈದ್ಯಕೀಯ ಪರೀಕ್ಷೆಗೆ  ಮಂಗಳೂರಿಗೆ ಅಗಮಿಸಿದ  ಗರ್ಭಿಣಿಯೋರ್ವರನ್ನು  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಸಹಾಯವಾಣಿಯ ಕಾರ್ಯಕರ್ತರ ತಂಡ ಬುಧವಾರ ಮನೆಗೆ ತಲುಪಿಸಿದೆ.IMG-20200326-WA0048

ಮದ್ಯಾಹ್ನ ಸುಮಾರು 2 ಗಂಟೆಗೆ  ಮಡಂತ್ಯಾರಿನ 8 ತಿಂಗಳ ಗರ್ಭಿಣಿಯೊಬ್ಬರು ಪರೀಕ್ಷೆಗಾಗಿ ಮಂಗಳೂರಿನ  ಲೇಡಿಗೋಶನ್ ಆಸ್ಪತ್ರೆಗೆ 108 ರಲ್ಲಿ ಬಂದಿದ್ದರು. ಪರೀಕ್ಷೆ ಮುಗಿದ ಮೇಲೆ ವಾಪಾಸು ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ ತಕ್ಷಣ ಅವರಿಗೆ ನೆನಪಾದದ್ದು ಬಂಟ್ವಾಳ ಶಾಸಕರ ಸಹಾಯವಾಣಿ …ಇಲ್ಲಿ ಕರೆ ಸ್ವೀಕರಿಸಿದ ಬಂಟ್ವಾಳ ಬಿಜೆಪಿ ಉಪಾದ್ಯಕ್ಷ ವಜ್ರನಾಥ ಕಲ್ಲಡ್ಕ ರವರು  ಅಂಬುಲೆನ್ಸ್ ನಲ್ಲಿ ಬಿ.ಸಿರೋಡುವರೆಗೆ ಬರಲು ತಿಳಿಸಿದ್ದರು.
ಮಂಗಳೂರಿನಿಂದ ವಿರಾಜಪೇಟೆಗೆ ಹೋಗುವಂತ ಅಂಬ್ಯುಲೆನ್ಸ್ ನಲ್ಲಿ ಗರ್ಭಿಣಿಯನ್ನು ಬಿ.ಸಿ.ರೋಡಿಗೆ ಕರೆತರಲಾಗಿತ್ತು. ಬಳಿಕ ಇಲ್ಲಿಂದ ಯುವಮೋರ್ಚಾ ಪ್ರಮುಖ ಸುದರ್ಶನ ಬಜಾವರು  ಅವರು ತಮ್ಮ ಕಾರಿನಲ್ಲಿ  ಇವರನ್ನು ಮಡಂತ್ಯಾರಿನ ಮನೆಗೆ ತಲುಪಿಸಿ ಬಂದರು. ಗರ್ಭಿಣಿ ಮತ್ತು ಮನೆಯವರು ಬಂಟ್ವಾಳ ಶಾಸಕರ ಸಹಾಯವಾಣಿ ಗೆ ಕೃತಜ್ಞತೆ  ಸಲ್ಲಿಸಿದೆ.

By suddi9

Leave a Reply

Your email address will not be published. Required fields are marked *