ನ್ಯೂಯಾರ್ಕ್, ಸೆ.30- ಫೋರ್ಬ್ ಕಂಪೆನಿ ಬಿಡುಗಡೆ ಮಾಡಿರುವ ಅಮೆರಿಕದ 400 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ 5 ಮಂದಿ ಅಮೆರಿಕ ನಿವಾಸಿಗಳು ಸ್ಥಾನ ಪಡೆದಿದ್ದಾರೆ.ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‍ಗೇಟ್ಸ್ ಆಸ್ತಿ ಮೌಲ್ಯ ಬರೋಬ್ಬರಿ 81 ಶತಕೋಟಿ ಅಮೆರಿಕ ಡಾಲರ್‍ಗಳು..!

ಅಮೆರಿಕದ ಫೋರ್ಬ್ ಕಂಪೆನಿ ಸಿದ್ಧಪಡಿಸಿದ 2014ರ ಈ ಪಟ್ಟಿಯಲ್ಲಿ ಸಿಂಟೆಲ್ ಹೊರಗುತ್ತಿಗೆ ಕಂಪೆನಿ ಸಂಸ್ಥಾಪಕ ಭಾರತ್ ದೇಸಾಯ್, ಉದ್ಯಮಿ ಜಾನ್ ಕಪೂರ್, ಸಿಫೆÇೀನಿ ತಂತ್ರಜ್ಞಾನ ಸಂಸ್ಥೆ ಸಂಸ್ಥಾಪಕ ರೋಮೇಶ್ ವಾಧ್ವಾನಿ, ಸಿಲಿಕಾನ್ ವ್ಯಾಲಿ ಏಂಜೆಲ್ ಹೂಡಿಕೆದಾರರಾದ ಕವಿತರ್ಕ್ ರಾಮ್ ಶ್ರೀರಾಮ್ ಮತ್ತು ಬಂಡವಾಳಸ್ಥ ವಿನೋದ್ ಖೋಸ್ಲಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

350x350_IMAGE32456178

ಅಮೆರಿಕದಲ್ಲಿ ಈ ವರ್ಷ ಶ್ರೀಮಂತರ ಪಟ್ಟಿ ದಾಖಲೆ ಸ್ಥಾಪಿಸಿದೆ. 400 ಜನ ಶ್ರೀಮಂತರು ಪಟ್ಟಿಯಲ್ಲಿ ಸೇರಿದ್ದಾರೆ. ಕಳೆದ ಒಂದು ವರ್ಷದಿಂದೀಚೆಗೆ ಅಮೆರಿಕದಲ್ಲಿ ಹೆಚ್ಚಿನ ಸಂಸತ್ತು ಕ್ರೋಢೀಕರಣದ ಜತೆಗೆ, ಶ್ರೀಮಂತರ ಸಂಖ್ಯೆಯೂ ಹೆಚ್ಚಿದೆ. ವರ್ಷದ ಹಿಂದೆ 270 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದವರು ಈ ಬಾರಿ 2.29 ಲಕ್ಷ ಕೋಟಿ ಡಾಲರ್ ವಹಿವಾಟು ನಡೆಸಿದ್ದಾರೆ.ಬೆಳೆಯುತ್ತಿರುವ ಷೇರು ಮಾರುಕಟ್ಟೆಗಳಿಂದಾಗಿ ಅಮೆರಿಕದಲ್ಲಿ ಶ್ರೀಮಂತರು, ಮತ್ತಷ್ಟು ಶ್ರೀಮಂತರಾಗುತ್ತಿದ್ದು, ಮಾರುಕಟ್ಟೆಗೆ ಥ್ಯಾಂಕ್ಸ್ ಹೇಳಲೇಬೇಕು ಎಂದು ಫೆÇೀರ್ಬ್ ಹೇಳಿದೆ.

By suddi9

Leave a Reply

Your email address will not be published. Required fields are marked *