ಇಂದಿನಿಂದ “ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ”evs
ಸುದ್ದಿ9ಬಜ್ಪೆ ಮಿಜಾರು ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಮತ್ತು ನಮ್ಮ ಟಿವಿ ಸಹಯೋಗದಲ್ಲಿ ಜನಪ್ರತಿನಿಧಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ “ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ” ಕಾರ್ಯಕ್ರಮ ಪೆ.15ರಿಂದ ಆರಂಭಗೊಳ್ಳಲಿದೆ.ಟ್ರಸ್ಟ್ನ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 13 ವಿಧಾನ ಸಭೆ ಕ್ಷೇತ್ರಗಳ ಶಾಸಕರ ಜತೆ ಸಂವಾದ ನಡೆಸಲಾಗುವುದು ಎಂದರು. ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಆವರಣದಲ್ಲಿ ಫೆ.15ರಂದು ಸಂಜೆ4 ಗಂಟೆಯಿಂದ 6ಗಂಟೆ ವರೆಗೆ ಶಾಸಕ ಮೊಹಿಯುದ್ದೀನ್ ಬಾವ ಹಾಗೂ ರಾತ್ರಿ 7ಗಂಟೆಯಿಂದ 9ಗಂಟೆವರೆಗೆ ಸಚಿವ ಅಭಯಚಂದ್ರ ಜೈನ್ ಅವರೊಂದಿಗೆ ಸಂವಾದ ನಡೆಯಲಿದೆ. ಆಯಾ ವಿಧಾನ ಸಭೆ ಕ್ಷೇತ್ರದಲ್ಲೇ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಸಂವಾದ ಕಾರ್ಯಕ್ರಮ ನಮ್ಮ ಟಿವಿಯಲ್ಲಿ ಪ್ರಸಾರಗೊಳ್ಳಲಿದೆ ಎಂದರು. ಆಯಾ ಕ್ಷೇತ್ರದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಶಾಸಕರ ಕರ್ತವ್ಯಗಳಿಗೆ ಸಂಬಂದಿಸಿದ ಪ್ರಶ್ನೆಯನ್ನು ಲಿಖಿತವಾಗಿ ನೀಡಬಹುದು ಎಂದು ಅವರು ತಿಳಿಸಿದರು. ನಮ್ಮ ಟಿವಿ ನಿದರ್ೇಶಕ ಡಾ.ಶಿವಶರಣ್ ಶೆಟ್ಟಿ, ಭಾಸ್ಕರ ಅರಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *