ಕೈಬೀಸಿ ಕರೆಯುವ ಕೈತೋಟ, ತಾರಸಿತೋಟ ಮನೆ

YER_1612

YER_1584

YER_1598

YER_1605

YER_1603

ಸುದ್ದಿ9 ಮಂಗಳೂರ

ನಗರ ಪ್ರದೇಶಗಳಲ್ಲಿ ಕೃಷಿ ನನಸಾಗದ ಕನಸು. ರಾಸಾಯನಿಕ ಗೊಬ್ಬರಗಳನ್ನು ಹಾಕಿದ ತರಕಾರಿಗಳನ್ನು ನಾವು ತಿನ್ನಬೇಕಲ್ವಾ ಎನ್ನುವ ಹಿಡಿಶಾಪ ಇನ್ನು ಬಿಡಿ. ಮನೆಯ ಟೆರೇಸಿನಲ್ಲಿ ಸ್ಪಲ್ಪ ಜಾಗ ಇದ್ದರೂ ಸಾಕು. ನಮ್ಮ ಮಣ್ಣಿಗೆ, ವಾತಾವರಣಕ್ಕೆ ಒಪ್ಪುವ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಸ್ವಂತ ಕೃಷಿಯ ಸುಖವನ್ನು ಕಾಣಬಹುದು. ಹೇಗೆ ಮಾಡಬೇಕು ಯಾವ ಬೆಳೆ ಬೆಳೆಯಬೇಕು ಎನ್ನುವ ಪ್ರಶ್ನೆಗಳಿದ್ದರೆ ಒಂದು ಬಾರಿ ಕದ್ರಿ ಫಲಪುಪ್ಪ ಪ್ರದರ್ಶನಕ್ಕೆ ಭೇಟಿ ಕೊಡಿ
ಫೆ.15ರಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಸಿರಿ ತೋಟಗಾರಿಕೆ ಸಂಘ ಆಶ್ರಯದಲ್ಲಿ ಫಲಪುಪ್ಪ ಪ್ರದರ್ಶನ ಮತ್ತು ನಗರ ಪ್ರದೇಶದಲ್ಲಿ ಕೈತೋಟ ಮತ್ತು ತಾರಸಿ ತೋಟ ಪ್ರಾತ್ಯಕ್ಷಿಕತೆ ನಡೆಯಲಿದೆ.
ಪುಪ್ಪಗಳು ಪ್ರತಿ ವರ್ಷದಂತೆ ಅಂದದ ನಗು ಬೀರಿ ನಮ್ಮನ್ನು ಸ್ವಾಗತಿಸುತ್ತದೆ. ಆದರೆ ನಮ್ಮ ಮನೆ, ನಮ್ಮ ತೋಟ, ನಮ್ಮ ಆಹಾರ ಎನ್ನುವ ಘೋಷವಾಕ್ಯದಡಿ ನಿಮರ್ಾಗೊಂಡಿರುವ ನಗರ ಪ್ರದೇಶದಲ್ಲಿ ಕೈತೋಟ ಮತ್ತು ತಾರಸಿ ತೋಟ ಪ್ರಾತ್ಯಕ್ಷಕತೆ ಹಲವು ಕಾರಣಗಳಿಂದ ವಿಭಿನ್ನ ಎನಿಸಿದೆ.
ಮೂಲತಃ ಚಾಮರ್ಾಡಿಯವರಾದ ನಾರಾಯಣ ಗೌಡ ಕಳೆದ ನಾಲ್ಕು ವರ್ಷದಿಂದ ಕದ್ರಿ ಫಲಪುಪ್ಪ ಪ್ರದರ್ಶನದಲ್ಲಿ ಭಾಗವಹಿಸಿ ತರಕಾರಿ ಬೆಳೆಯುತ್ತಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಕದ್ರಿಗೆ ಬಂದು ತರಕಾರಿ ಬೆಳೆಯಲು ಆರಭಂಬಿಸುತ್ತಾರೆ. ಕೆಲವೊಂದು ತರಕಾರಿಗೆ 80 ದಿನ ಬೇಕು ಮತ್ತೆ ಕೆಲವು ತರಕಾರಿ ಬೆಳೆಯಲು 60 ದಿನ ಸಾಕು ಎಂದು ಅವರು ವಿವರಿಸುತ್ತಾರೆ.
ಬಸಳೆ(ಕೆಂಪು, ಹಸಿರು), ಬೆಂಡೆ, ಬದನೆ(ಉದ್ದ, ಉರುಟು), ಅರಿವೆಸೊಪ್ಪು(ಕೆಂಪು, ಹಸಿರು), ಕ್ಯಾಬೆಜ್, ಕಾಲಿಪ್ಲವರ್, ಪಡುವಲಕಾಯಿ, ಪಟ್ಲಕಾಯಿ, ಹೀರೆ ಕಾಯಿ, ಆಗಲಕಾಯಿ, ಸೌತೆ ಕಾಯಿ (ಉದ್ದ, ಉರುಟು), ತೊಂಡೆ ಕಾಯಿ, ಬೂದು ಕುಂಬಳ, ಸಿಹಿ ಕುಂಬಳ, ಮೂಲಂಗಿ, ಹೀಗೆ ಹಲವಾರು ಬಗೆಯ ತರಕಾರಿಗಳು ತೋಟದೊಳಗೆ ಕಾಣಸಿಗುತ್ತದೆ.

ಚಟ್ಟಿ ಯಲ್ಲಿ ತರಕಾರಿ:
ಬೆಂಡೆ, ಬದನೆ, ಕ್ಯಾರೆಟ್, ಮೂಲಂಗಿ, ಬಸಳೆ, ಬೀಟ್ರೋಟ್ ಮೊದಲಾದ ತರಕಾರಿಗಳನ್ನು ಚಟ್ಟಿಯಲ್ಲಿ ಬೆಳೆಸಲಾಗಿದೆ. ನಮ್ಮೂರಿನ ಮಣ್ಣನಲ್ಲಿ ಕ್ಯಾರೆಟ್, ಬೀಟ್ರೋಟ್, ಮೂಲಂಗಿ ಬೆಳೆಯಲು ಸಾಧ್ಯನಾ ಎಂದು ಕೇಳಿದರೆ ನಾರಾಯಣ ಗೌಡರ ಬಳಿ ಸುಲಭ ಉಪಾಯವಿದೆ. ಚಟ್ಟಿಗೆ ಮಣ್ಣು ಹಾಕುವಾಗ ಮರಳು ಮಿಶ್ರಣ ಮಾಡಿ ಹಾಕಬೇಕು. ಗೊಬ್ಬರದ ಹುಡಿಯನ್ನು ಹಾಕುವಾಗ ಕೋಲಿನಿಂದ ಚಟ್ಟಿಯೊಳಗಿನ ಮಣ್ಣನ್ನು ಸಡಿಲಗೊಳಿಸಬೇಕು. ದಿನಕ್ಕೆ ಒಂದು ಬಾರಿ ನೀರು ಕೊಡಬೇಕು. 2ತಿಂಗಳೊಳಗೆ ಇಳುವರಿ ಪಡೆಲು ಸಾಧ್ಯ ಎಂದು ಅವರು ವಿವರಿಸುತ್ತಾರೆ.

ಸಾಲು ಸಾಲು ಚಪ್ಪರ:
ನಾಲ್ಕು ಮಣ್ಣಿನ ಚಟ್ಟಿಯನ್ನು ಇಟ್ಟು ಅದಕ್ಕೆ ಕೋಲು ಹಾಕಿ ಚಪ್ಪರ ಮಾಡಲಾಗಿದೆ. ಸೋರೆ ಕಾಯಿ, ಹೀರೆ ಕಾಯಿ, ಸೌತೆ, ಚೀನಿ ಕುಂಬಳ, ಬಸಳೆ, ತೊಂಡೆ ಕಾಯಿ, ಅಲಸಂಡೆ ಹೀಗೆ ಸಾಲು ಸಾಲು ಚಪ್ಪರ ಕಾಣಸಿಗುತ್ತದೆ. ಈ ಬೆಳೆಗಳಿಗೂ ಕೆಂಪು ಮಣ್ಣು ಮತ್ತು ಗೊಬ್ಬರದ ಹುಡಿ ಹಾಕಿ ಬೆಲೆಯಲಾಗಿದೆ. ಬೆಳಗ್ಗಿನ ಹೊತ್ತು ನೀರು ಚಿಮುಕಿಸಿದರೆ ಉತ್ತಮ. 80 ದಿನದೊಳಗೆ ಇಳುವರಿ ಪಡೆಯಬಹುದು. ಒಟ್ಟು ನಾಲ್ಕು ಬಾರಿ ಗೊಬ್ಬರ ಹಾಕಬೇಕು.

ಒಂದೇ ಚಟ್ಟಿಯಲ್ಲಿ ಬಸಳೆ:
ತಾರಸಿ ತೋಟದೊಳಗೆ ನಮ್ಮ ಚಿತ್ತವನ್ನು ಆಕಷರ್ಿಸುವುದು ಒಂದೇ ಚಟ್ಟಿಯಲ್ಲಿ ಸಣ್ಣ ಚಪ್ಪರಹಾಕಿ ಬೆಳೆದ ಬಸಳೆ. ಸಣ್ಣ ನಾಲ್ಕು ಕೋಲುಗಳನ್ನು ಹಾಕಿ ಚಪ್ಪರ ನಿಮರ್ಿಸಲಾಗಿದೆ. ಕೆಂಪು ಬಸಳೆ ಮತ್ತು ಹಸಿರು ಬಸಳೆಯನ್ನು ಬೆಳೆಯಲಾಗಿದೆ.

By suddi9

Leave a Reply

Your email address will not be published. Required fields are marked *