ಎಷ್ಟು ಕೋಟಿ ರೂ ಡೀಲು?
ವಿಶೇಷ ವರದಿ:
ಉಡುಪಿ: ಇತ್ತಎಲ್ಲಿ ನೋಡಿದರೂ ಲವ್ ಜಿಹಾದ್ ಎಂಬ ಶಬ್ದ ಕೇಳಿಬರುತ್ತಿದೆ. ಅಮಾಯಕ ಹಿಂದೂ ಹುಡುಗಿಯರನ್ನು ಪ್ರೇಮದ ಖೆಡ್ಡಾಕ್ಕೆ ಸಿಲುಕಿಸಿ ಉಪಾಯವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಕಳೆದ ಮೂರು ತಿಂಗಳ ನಡುವೆ ಉಡುಪಿಯಲ್ಲಿ ನಡೆದ ವಿದ್ಯಾಮಾನವನ್ನು ಗಮನಿಸಿದರೆ ಉಡುಪಿಯಲ್ಲಿ ಲವ್ ಜಿಹಾದ್ ನಡೆದಿದೆಯೋ ಎಂಬ ಗುಮಾನಿ ಬರುವುದು ಸುಳ್ಳಲ್ಲ. ಇದರ ಹಿಂದೆ ಯಾರಿದ್ದಾರೆ, ಎಷ್ಟು ಕೋಟಿಯ ಡೀಲು? ಇದರ ಹಿಂದೆ ಯಾವುದಾದರೂ ಅಜೆಂಡ ಇದೆಯೋ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತಿರುವುದು ಸುಳ್ಳಲ್ಲ.
ಘಟನೆ 1: ಇದು ಸುಮಾರು ಎರಡು ತಿಂಗಳ ಹಿಂದಿನ ಘಟನೆ. ಮಲ್ಪೆ ಮೂಲದ ಮಣಿಪಾಲ ಎಂಐಟಿ ಅರೆಕಾಲಿಕ ಉಪನ್ಯಾಸಕಿ ಒಬ್ಬಳು ಲೈನ್ ಸೇಲ್ ಮಾಡುವ ಅನ್ಯಮತೀಯ ಯುವಕನ ಜೊತೆ ಪರಾರಿಯಾದಾಗ ಜಿಲ್ಲೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಕೆಲವೇ ದಿನಗಳಲ್ಲಿ ಆಕೆ ಮಲ್ಪೆ ಪೊಲೀಸ್ ಠಾಣೆಗೆ ಬಂದು ನಾನು ಅವನ ಜೊತೆಯೇ ಬಾಳುತ್ತೇನೆ ಎಂದು ಹೋದಾಗ ಜಿಲ್ಲೆಯ ಹಿಂದೂ ಸಂಘಟನೆಗಳು `ಲವ್ ಜಿಹಾದ್’ ಎಂದು ಬೊಬ್ಬೆ ಹೊಡೆದಿದ್ದವು. ಆನಂತರ ಜಿಲ್ಲೆಯ ಹಿಂದೂ ಸಂಘಟನೆಗಳು ಅಲ್ಲಲ್ಲಿ ಕಟ್ಟೆಚ್ಚರದಿಂದ ಕಾಯತೊಡಗಿದರೂ ಸೆಪ್ಟಂಬರ್ ತಿಂಗಳ ಮೊದಲ ವಾರದಿಂದ ಮೂರನೇ ವಾರದ ಅವಧಿಯಲ್ಲಿ ಮತ್ತೆ ಮೂವರು ಯುವತಿಯರು ಇಂಥದ್ದೇ ಪ್ರೇಮಪಾಶದಲ್ಲಿ ಬಂಧಿಯಾಗುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಘಟನೆ 2: ಸೆ.ಮೊದಲ ವಾರದಲ್ಲಿ ಉಡುಪಿ ನಿವಾಸಿ ರಶಿಮಿ ಹಾಗೂ ಮಲ್ಪೆ ನಿವಾಸಿ ಮಸೂದ್ ಎಂಬ ಜೋಡಿ ಉಡುಪಿಯ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಅಜರ್ಿ ಸಲ್ಲಿಸಿತ್ತು. ಪ್ರೀತಿ-ಪ್ರೇಮ ಎಂದು ಊರಿಡೀ ಸುತ್ತಿದ್ದ ಜೋಡಿ ಮದುವೆಯಾಗಲು ಮುಂದಾಗಿತ್ತು. ವಿವಾಹ ನೋಂದಣಾಧಿಕಾರಿ ಕಚೇರಿ ಹೊರಗಡೆ ಇಬ್ಬರ ಫೊಟೋ ಜೊತೆಯಲ್ಲಿ ಕಾಣಿಸಿಕೊಂಡಿದ್ದೇ ತಡ, ಉಡುಪಿ ಜಿಲ್ಲೆಯಲ್ಲಿ ಸದ್ದಡಗಿದ್ದ `ಲವ್ ಜಿಹಾದ್’ ಕೂಗು ಮತ್ತೆ ಪ್ರಾರಂಭವಾಯಿತು.
ಘಟನೆ 3: ಈ ಘಟನೆ ನಡೆದು ವಾರದೊಳಗೆ ಉಡುಪಿ ತಾಲೂಕಿನ ಶಿವಳ್ಳಿ ನಿವಾಸಿ ವಾಸಿಂ ರಾಜಾ ಹಾಗೂ ಅದೇ ಗ್ರಾಮದ ನಿವಾಸಿ ಶ್ವೇತಾ ಎಂಬ ಜೋಡಿ ಸೆಪ್ಟಂಬರ್ 22ರಂದು ಉಡುಪಿಯ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಗೆ ಅಜರ್ಿ ಸಲ್ಲಿಸಿತ್ತು. ವಾಸಿಂ ರಾಜಾ ಮತ್ತು ಶ್ವೇತಾ ಭಾವಚಿತ್ರ ಜೊತೆಯಲ್ಲೇ ಕಾಣಿಸಿಕೊಂಡಾಗ ಉಡುಪಿ ಜಿಲ್ಲೆಯ ಹಿಂದೂ ಸಂಘಟನೆ ಹೋರಾಟಕ್ಕೆ ನಿರ್ಧರಿಸಿತು. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಉಡುಪಿಯ ಮತ್ತೊಬ್ಬಳು ಯುವತಿ ಹಾಗೂ ಅನ್ಯಮತೀಯ ಯುವಕ ಉಡುಪಿಯ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಕಾಣಿಸಿಕೊಂಡರು.
ಉಡುಪಿಯ ಪ್ರತಿಷ್ಠಿತ ಕಾಲೇಜೊಂದರ 50 ಹುಡುಗಿಯರು ಮತಾಂತರ ಆಗಲಿದ್ದಾರೆ ಹಾಗೂ 28ಕ್ಕೂ ಅಧಿಕ ಹುಡುಗಿಯರು ಲವ್ ಜಿಹಾದ್ಗೆ ಬಲಿಬಿದ್ದು ನರಳಾಡುತ್ತಿದ್ದಾರೆ ಎಂಬ ಅಘಾತಕರ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ತಲೆಮರೆಸಿಕೊಂಡಿರುವ ವಾಸಿಂ ರಾಜಾ:
ಈ ಮೂರೂ ಮಂದಿ ಹಿಂದೂ ತರುಣಿಯರು ಅಂತರ್ ಧಮರ್ೀಯ ಮದುವೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಹಿಂದೂ ಸಂಘಟನೆಗಳು ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಕರೆತರಲು ಪ್ರಯತ್ನಪಟ್ಟಿತು. ಅಂತಿಮವಾಗಿ ಶ್ವೇತಾಳ ಮನವೊಲಿಸಿ ಆಕೆಯನ್ನು ಮರಳಿ ಮನೆ ಸೇರಿಸುವಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟನೆ ಯಶಸ್ವಿಯಾಯಿತು. ಶ್ವೇತಾಳೇ ಖುದ್ದಾಗಿ ಉಡುಪಿ ನಗರ ಠಾಣೆಯಲ್ಲಿ ವಾಸಿಂ ರಾಜಾ ವಿರುದ್ಧ ಬಲವಂತದ ಮದುವೆಗೆ ಸಿದ್ಧತೆ ಹಾಗೂ ಬಲತ್ಕಾರದ ದೂರು ನೀಡಿದ್ದಾಳೆ. ಪೊಲೀಸರು ವಾಸಿಂ ರಾಜಾ ಹುಡುಕಾಟಕ್ಕೆ ತೊಡಗಿರುವಂತೆಯೇ ಆತ ಊರು ತೊರೆದು ಪರಾರಿಯಾಗಿದ್ದಾನೆ. ಇನ್ನು ಶ್ರುತಿ ಮನೆಯವರನ್ನೂ ಸಂಪಕರ್ಿಸಿರುವ ಸಂಘಟನೆಯ ನಾಯಕರು ಆಕೆಯ ಮನವೊಲಿಸುವಲ್ಲಿಯೂ ಸಫಲರಾಗಿದ್ದಾರೆ.
ಕೊಂಚ ಹಿಂದೆ ಹೋದರೆ…
ಅದು ಜನವರಿ 8 2014. ಮುಹಮ್ಮದ್ ಯಾಸಿರ್ ಎಂಬ ಯುವಕನಿಗೆ ಸೋನಲ್ ಎಂಬ ಹುಡುಗಿಯೊಂದಿಗೆ ಲವ್ ಹುಟ್ಟಿತ್ತು. ಒಂದು ದಿನ ಆತ ಆಕೆಯನ್ನು ಜ್ಯೂಸ್ ಅಂಗಡಿಗೆ ಕರೆದುಕೊಂಡು ಹೋಗಿ ಜ್ಯೂಸಿನಲ್ಲಿ ಅಮಲುಪದಾರ್ಥ ಸೇರಿಸಿ ಆಕೆಯನ್ನು ಕೆಡಿಸಿದ್ದಾನೆ. ಅದರ ಫೋಟೋ, ವಿಡಿಯೋ ತೆಗೆದು ಫೇಸ್ಬುಕ್ಗೆ ಹಾಕುವುದಾಗಿ ಬೆದರಿಸಿ ಮನೆಯವರಿಂದ 3 ಲಕ್ಷ ರೂ ಪೀಕಿಸಿದ್ದಾನೆ. ಕೊನೆಗೆ ಅದು ಸಾಲುವುದಿಲ್ಲವೆಂದು 10 ಲಕ್ಷ ಕೊಡಬೇಕೆಂದು ಒತ್ತಾಯಪಡಿಸಿದ್ದ. ಆದರೆ ಮನೆಯವರು ಕೊಡದಿರುವುದನ್ನು ಗಮನಿಸಿದ ಯಾಸಿರ್ ಅದನ್ನು ಫೇಸ್ಬುಕ್, ವಾಟ್ಸ್ಯಾಪ್ನಲ್ಲಿ ಅಪ್ಲೋಡ್ ಮಾಡಿಬಿಟ್ಟ. ಯಾಸಿರ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿಚಾರ ಬಜರಂಗದಳದ ಸದಸ್ಯರಿಗೆ ಮುಟ್ಟಿತು.. ಈ ಸುದ್ದಿ ತಿಳಿದ ಯಾಸಿರ್ ಸಂಬಂಧಿಕರ ಮನೆಯಲ್ಲಿ ಅವಿತುಕೊಂಡ. ಪ್ರಕರಣ ಠಾಣೆಯಮೆಟ್ಟಿಲೇರಿತ್ತು. ಪೊಲೀಸರು ಅವನನ್ನು ಹಿಡಿಯಲು ಆತ ಡಿಮ್ಯಾಂಡ್ ಮಾಡಿದ ಹತ್ತುಲಕ್ಷ ಕೊಡುವುದಾಗಿ ಹುಡುಗಿಯ ಪೋಷಕರಿಂದ ಹೇಳಿಸಿ ಒಂದು ಜಾಗಕ್ಕೆ ಬರಲು ಹೇಳಿದರು.
ಪೊಲೀಸರು ಆಗಮಿಸುತ್ತಿದ್ದಂತೆ ಹುಡುಗರೊಂದಿಗೆ ಸಜ್ಜಾಗಿ ನಿಂತಿದದ ಯಾಸಿರ್ ಪಡೆ ಪೊಲೀಸರ ಮೇಲೆಯೇ ದಾಳಿ ಮಾಡಿತು. ಪೊಲೀಸರಿಗೂ ಅನೇಕ ಗಾಯಗಳಾದವು. ಪರಿಸ್ಥಿತಿ ಕೈಮೀರಿದ್ದರೆ ಎನ್ ಕೌಂಟರ್ ಆಗುವಷ್ಟರ ಮಟ್ಟಿಗಿತ್ತು ಪರಿಸ್ಥಿತಿ.
ಉಡುಪಿ ಜಿಲ್ಲೆಯಲ್ಲಿ ಬೆನ್ನುಬೆನ್ನಿಗೆ ನಡೆದಿರುವ ಈ ಮೂರು ಪ್ರಕರಣಗಳು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿವೆ. ಕೆಲವರು ಇದರ ವಿರುದ್ಧ ವಾಟ್ಸಪ್, ಫೇಸ್ ಬುಕ್ಗಳಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಕಳೆದ ವಾರ ಕಾಪು ಬೀಚ್ನಲ್ಲಿ ಪತ್ತೆಯಾದ ಶಿರ್ವ ಕಾಲೇಜಿನ ಅನ್ಯಮತೀಯ ವಿದ್ಯಾಥರ್ಿ ಜೋಡಿಯ ಮೈಮೇಲೆ ಬಾಸುಂಡೆ ಬರುವಂತೆ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆಯನ್ನೂ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆ ಶಾಂತಿಯುತವಾಗಿದೆ. ಇಲ್ಲಿ `ಲವ್’ ಎಂಬ ಎರಡಕ್ಷರಕ್ಕೆ ಯಾರದ್ದೋ ಮೇಲೆ ಹಲ್ಲೆ ಮಾಡುವುದು, ಗಲಭೆ ಸೃಷ್ಟಿಸುವುದು, ಹೊಡೆದಾಟ-ಬಡಿದಾಟ ಇವೆಲ್ಲ ತೀರಾ ಕಡಿಮೆ. ಎಲ್ಲಿ ಏನೇ ಆದರೂ ಉಡುಪಿ ಮಾತ್ರ ಶಾಂತವಾಗಿರುತ್ತದೆ. ಇದೇ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಅಮಾಯಕ ಹಿಂದೂ ಯುವತಿಯರನ್ನು ನಾನಾ ಆಮಿಷವನ್ನೊಡ್ಡಿ ಬೇರೆ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ವಾದಿಸುತ್ತಿದ್ದಾರೆ ಹಿಂದೂ ಸಂಘಟನೆಗಳ ನಾಯಕರು.
`ಲವ್ ಜಿಹಾದ್ ಸಂಚು ನಡೆಯುತ್ತಿದೆ’
-ಬೈಕಾಡಿ ಸುಪ್ರಸಾದ್ ಶೆಟ್ಟಿ, ವಿ.ಹಿಂ.ಪ. ಉಡುಪಿ ಜಿಲ್ಲಾಧ್ಯಕ್ಷ
`ಉಡುಪಿ ಜಿಲ್ಲೆಯಲ್ಲಿ ಅಮಾಯಕ, ಮುಗ್ಧ ಹಿಂದೂ ತರುಣಿಯರನ್ನು ಬಲವಂತವಾಗಿ ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಮತಾಂತರಿಸಿ ಮದುವೆಯಾಗುವ ನೆಪದಲ್ಲಿ ಶೋಷಣೆಗೊಳಪಡಿಸುವ ಸಂಚು ನಡೆಯುತ್ತಿದೆ. ಇಲ್ಲಿ ನಿಜವಾದ ಪ್ರೀತಿ ಇರುವುದಿಲ್ಲ. ಮತಾಂತರಿಸಿ ಮದುವೆಯಾಗಿ ಹಿಂದೂ ಹೆಣ್ಣುಮಕ್ಕಳ ಬಾಳನ್ನು ಹಾಳು ಮಾಡಿ ಪರಾರಿಯಾಗುವ ಸಂಚು ಇದರ ಹಿಂದಿದೆ. ಆದರೆ ಇದನ್ನು ಯಶಸ್ವಿಯಾಗಲು ಹಿಂದೂ ಸಂಘಟನೆಗಳು ಬಿಡುವುದಿಲ್ಲ. ಈಗಾಗಲೇ ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಉಡುಪಿ ಜಿಲ್ಲೆಯ ಹಿಂದೂ ಹೆಣ್ಣುಮಕ್ಕಳು, ವಿದ್ಯಾವಂತ ತರುಣಿಯರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಹೆತ್ತವರು, ಪೋಷಕರು, ಶಾಲೆ-ಕಾಲೇಜಿನ ಆಡಳಿತ ಮಂಡಳಿ ಕೂಡಾ ಇದರ ಬಗ್ಗೆ ಎಚ್ಚರದಿಂದಿರಬೇಕು. ಎಲ್ಲವನ್ನೂ ಕಳೆದುಕೊಂಡ ಮೇಲೆ ಬೀದಿಗೆ ಬೀಳುವ ಬದಲು ಈಗಿಂದೀಗಲೇ ಎಚ್ಚೆತ್ತು ಹಿಂದೂ ಸಂಘಟನೆಗಳ ಹೋರಾಟಕ್ಕೆ ಸಮಾಜ ಕೈಜೋಡಿಸಬೇಕಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ನಾಯಕರು, ಕಾರ್ಯಕರ್ತರು ಈಗಾಗಲೇ ಜಿಲ್ಲೆಯಲ್ಲಿ `ಲವ್ ಜಿಹಾದ್’ ತಡೆಯಲು ಹೋರಾಟ ರೂಪಿಸಿದ್ದಾರೆ.





