ನಾರದರು, ರಾಮನಿಂದ ರಾವಣನ ವಧೆಯಾಗಬೇಕೆಂದು ರಾಮನಿಗೆ ಈ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಮಾಡಿದ ಮೇಲೆಯೇ ರಾಮನು ರಾವಣನನ್ನು ಸಂಹರಿಸಿದನು. ದೇವಿಯು ಮಹಿಷಾಸುರನೆಂಬ ರಾಕ್ಷಸ ನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಸಂಹರಿಸಿದಳು. ಅಂದಿನಿಂದ ಅವಳಿಗೆ ಮಹಿಷಾಸುರಮದರ್ಿನಿ ಎಂಬ ಹೆಸರು ಬಂದಿತು. ಅಸುರ ಶಬ್ದದ ಉತ್ಪತ್ತಿಯು ಹೀಗಿದೆ-`ಅಸುಷು ರಮಂತೆ ಇತೀ ಅಸುರಃ|’ ಅಂದರೆ `ಶಾರೀರಿಕ ಭೋಗದಲ್ಲಿ ರಮಿಸುವವನೇ ಅಸುರನು;’ ಮಹಿಷಾಸುರನ ವಾಸವು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿದ್ದು ಅವನು ಮನುಷ್ಯನ ಆಂತರಿಕ ದೈವೀ ಪ್ರವೃತ್ತಿಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸಿದ್ದಾನೆ. ಈ ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತನಾಗಲು ಶಕ್ತಿಯ ಉಪಾಸನೆಯು ಆವಶ್ಯಕವಾಗಿದೆ. ಆದುದರಿಂದ ನವರಾತ್ರಿಯ ಒಂಬತ್ತು ದಿನಗಳಲ್ಲಿ ಶಕ್ತಿಯ ಉಪಾಸನೆಯನ್ನು ಮಾಡಬೇಕು ಮತ್ತು ದಶಮಿಯ ದಿನ ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

nav.
ಪೂಜಾವಿಧಿಯನ್ನು ಮಾಡುವ ಪದ್ಧತಿ
ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುದ್ಧ ಪಾಡ್ಯಕ್ಕೆ ಈ ವ್ರತವು ಪ್ರಾರಂಭವಾಗುತ್ತದೆ. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನಾರೂಢಳಾದ ಅಷ್ಟಭುಜದೇವಿಯನ್ನು ಹಾಗೂ ನವಾರ್ಣವ ಯಂತ್ರ (ದೇವಿಯ ಒಂಬತ್ತು ರೂಪಗಳ ಮಾರಕ ಲಹರಿಗಳ ಸಂಯೋಗ ದಿಂದ ಘನೀಕರಣವಾದ ಯಂತ್ರ)ವನ್ನು ಸ್ಥ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಕಲಶಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿವತ್ತಾಗಿ ಪೂಜೆಯನ್ನು ಮಾಡುತ್ತಾರೆ. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಕಲಶಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳಿನ ಗಾತ್ರದಷ್ಟು ಚೌಕಾಕಾರವನ್ನು ಮಾಡಿ ಅದರಲ್ಲಿ ಐದು ಅಥವಾ ಏಳು ವಿಧದ ಧಾನ್ಯಗಳನ್ನು ಹಾಕಬೇಕು. (ಜೋಳ, ಗೋಧಿ, ಎಳ್ಳು, ಹೆಸರು, ಅಗಸೆ, ನವಣೆ, ಕಡಲೆ ಇವು ಸಪ್ತಧಾನ್ಯಗಳಾಗಿವೆ.) ಹಾಗೆಯೇ ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂ, ಗರಿಕೆ, ಅಕ್ಷತೆ, ಅಡಿಕೆ, ಪಂಚರತ್ನಗಳು ಅಥವಾ ನಾಣ್ಯ ಮುಂತಾದ ವಸ್ತು ಗಳನ್ನು ಹಾಕಬೇಕು ಮತ್ತು ಒಂದು ಮಾಲೆಯನ್ನು ಕಲಶದ ಒಳಗೆ ಬರು ವಂತೆ ಕಟ್ಟಬೇಕು. ಈ ವ್ರತವು ಆಶ್ವಯುಜ ಶುದ್ಧ ನವಮಿಯವರೆಗೆ ನಡೆಯು ತ್ತದೆ. ಒಂಬತ್ತು ದಿನ ಪ್ರತಿದಿನವೂ ಕುಮಾರಿಯ ಪೂಜೆ ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆಯೆಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯ ವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಒಟ್ಟು ಶಕ್ತಿಯ ಪ್ರಮಾಣವು ಹೆಚ್ಚಿರುತ್ತದೆ. ಅಖಂಡ ದೀಪಪ್ರಜ್ವಲನ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀಪಾಠ), ಲಲಿತಾಪೂಜೆ, ಸರಸ್ವತಿ ಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಸಾಮಥ್ರ್ಯಕ್ಕನುಸಾರ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

ಕಲಶಸ್ಥಾಪನೆಯ ಮಹತ್ವ
ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ಪೃಥ್ವಿತತ್ತ್ವರೂಪಿ ಮಣ್ಣಿನಲ್ಲಿ ಸಪ್ತಧಾನ್ಯಗಳ ರೂಪದಲ್ಲಿ ಆಪ ಮತ್ತು ತೇಜದ ಅಂಶವನ್ನು ಬಿತ್ತಿ ಅವುಗಳಿಂದ ಪ್ರಕ್ಷೇಪಿತವಾಗುವ ಲಹರಿಗಳ ಹಾಗೂ ಬಂದಿಸ್ತ ಕಲಶದಲ್ಲಿ ಉತ್ಪನ್ನ ವಾದಂತಹ ಬಿಸಿ ಶಕ್ತಿಯ ಸಹಾಯದಿಂದ ನಾದವನ್ನು ನಿಮರ್ಾಣ ಮಾಡು ವಂತಹ ಲಹರಿಗಳ ಕಡೆಗೆ ಬ್ರಹ್ಮಾಂಡದಲ್ಲಿನ ತೇಜತತ್ತ್ವಾತ್ಮಕ ಆದಿಶಕ್ತಿರೂಪಿ ಲಹರಿಗಳು ಕಡಿಮೆ ಕಾಲಾವಧಿಯಲ್ಲಿ ಆಕಷರ್ಿತವಾಗುತ್ತವೆ. ಮಣ್ಣಿನ ಕಲಶ ದಲ್ಲಿ ಪೃಥ್ವಿಯ ಜಡತ್ವದಿಂದಾಗಿ ಆಕಷರ್ಿತವಾದಂತಹ ಲಹರಿಗಳಿಗೆ ಜಡ ತ್ವವು ಪ್ರಾಪ್ತವಾಗಿ ಅವು ಅದೇ ಸ್ಥಳದಲ್ಲಿ ದೀರ್ಘಕಾಲದವರೆಗೆ ಸ್ಥಿರವಾಗುತ್ತವೆ ಮತ್ತು ತಾಮ್ರದ ಕಲಶದಿಂದ ಈ ಲಹರಿಗಳು ವಾಯುಮಂಡಲದಲ್ಲಿ ವೇಗ ವಾಗಿ ಪ್ರಕ್ಷೇಪಿತವಾಗುತ್ತವೆ. ಇದರಿಂದ ಸಂಪೂರ್ಣ ವಾಸ್ತುವಿಗೆ ಸೀಮಿತ ಕಾಲಾವಧಿಯವರೆಗೆ ಲಾಭವಾಗುತ್ತದೆ. ಕಲಶಸ್ಥಾಪನೆಯಿಂದ ಶಕ್ತಿತತ್ತ್ವದ ತೇಜರೂಪಿ ರಜೋಲಹರಿಗಳು ಬ್ರಹ್ಮಾಂಡದಲ್ಲಿ ಕಾರ್ಯನಿರತ ವಾಗುವುದರಿಂದ ಪೂಜೆ ಮಾಡುವವರ ಸೂಕ್ಷ್ಮದೇಹದ ಶುದ್ಧಿಯಾಗುತ್ತದೆ.

 

nav

 

 
ಅಖಂಡ ದೀಪಪ್ರಜ್ವಲನೆಯ ಮಹತ್ವ
ದೀಪವು ತೇಜದ ಪ್ರತೀಕವಾಗಿದೆ ಮತ್ತು ನವರಾತ್ರಿಯಲ್ಲಿ ವಾಯು ಮಂಡಲವು ಶಕ್ತಿತತ್ತ್ವದ ತೇಜದಿಂದ ತುಂಬಿರುವುದರಿಂದ ಸತತವಾಗಿ ಉರಿಯುತ್ತಿರುವ ದೀಪದ ಜ್ಯೋತಿಯ ಕಡೆಗೆ ತೇಜತತ್ತ್ವದ ಲಹರಿಗಳು ಆಕಷರ್ಿತವಾಗುತ್ತವೆ. ಅಖಂಡ ದೀಪ ಪ್ರಜ್ವಲನೆಯಿಂದ ಈ ಲಹರಿಗಳು ವಾಸ್ತುವಿನಲ್ಲಿ ಸತತವಾಗಿ ಸಂಕ್ರಮಿತವಾಗುತ್ತಿರುತ್ತವೆ; ಆದುದರಿಂದ ನವರಾತ್ರಿ ಯಲ್ಲಿ ಅಖಂಡ ದೀಪಪ್ರಜ್ವಲನೆಗೆ ಬಹಳಷ್ಟು ಮಹತ್ವವಿದೆ. ನವರಾತ್ರಿಯಲ್ಲಿ ಕಾರ್ಯನಿರತವಾಗಿರುವ ತೇಜಾಧಿಷ್ಠಿತ ಲಹರಿಗಳ ವೇಗದಲ್ಲಿ ಅಖಂಡತ್ವ ಹಾಗೂ ಸಾತತ್ಯವು ಇರುವುದರಿಂದ ಈ ಲಹರಿಗಳು ಅಖಂಡವಾಗಿ ಪ್ರಜ್ವಲಿಸುತ್ತಿರುವ ಮತ್ತು ಅಷ್ಟೇ ಶಕ್ತಿಯಿಂದ ಗ್ರಹಣ ಮಾಡಬಲ್ಲ ದೀಪದ ಮಾಧ್ಯಮವನ್ನು ಉಪಯೋಗಿಸಿಕೊಂಡು ವಾಸ್ತುವಿನಲ್ಲಿ ತೇಜದ ಸಂವರ್ಧನೆ ಯನ್ನು ಮಾಡುತ್ತವೆ.

nav2

ಪೂಜೆಯ ಸಮಾರಾಧನೆ

ನವರಾತ್ರಿಯ ಸಂಖ್ಯೆಗೆ ಒತ್ತು ಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ. ಆದರೆ ಶಾಸ್ತ್ರಕ್ಕನುಸಾರ ಒಂಬತ್ತನೆಯ ದಿನವೇ ವಿಸರ್ಜನೆಯಾಗಬೇಕು. ಆ ದಿನ ಸಮಾರಾಧನೆ (ಭೋಜನ ಪ್ರಸಾದ) ಆದ ನಂತರ ಸಮಯವಿದ್ದರೆ ಅದೇ ದಿನ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಇಲ್ಲದಿದ್ದಲ್ಲಿ ಮರುದಿನ ಎಲ್ಲ ದೇವರಿಗೂ ಪೂಜೆ-ಅಭಿಷೇಕಗಳನ್ನು ಮಾಡಬೇಕು. ದೇವಿಯ ಮೂತರ್ಿಯ ವಿಸರ್ಜನೆಯ ಸಮಯದಲ್ಲಿ ಸಪ್ತಧಾನ್ಯಗಳಿಂದ ಬೆಳೆದ ಸಸಿಗಳನ್ನು ದೇವರಿಗೆ ಅಪರ್ಿಸುತ್ತಾರೆ ಹಾಗೂ ಶಾಕಾಂಭರಿ ದೇವಿ ಎಂದು ತಿಳಿದು ಸ್ತ್ರೀಯರು ಅವುಗಳನ್ನು ತಲೆಯ ಮೇಲೆ ಇಟ್ಟುಕೊಂಡು ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ. ನವರಾತ್ರಿಯನ್ನು ಪ್ರಾರಂಭಿ ಸುವಾಗ ಅಥವಾ ಸಮಾಪ್ತಗೊಳಿಸುವಾಗ ದೇವರ ಉದ್ವಾರ್ಜನೆಯನ್ನು (ಸುಗಂಧಿತ ದ್ರವ್ಯಗಳಿಂದ ಸ್ವಚ್ಛಗೊಳಿಸುವುದು ಮತ್ತು ಲೇಪವನ್ನು ಹಚ್ಚು ವುದು) ಅವಶ್ಯವಾಗಿ ಮಾಡಬೇಕು. ಉದ್ವಾರ್ಜನೆ ಮಾಡಲು ನಿಂಬೆಹಣ್ಣು, ಭಸ್ಮ ಮುಂತಾದವುಗಳನ್ನು ಉಪಯೋಗಿಸಬೇಕು. ನಿತ್ಯದಂತೆ ರಂಗೋಲಿ ಅಥವಾ ಪಾತ್ರೆ ತಿಕ್ಕುವ ಚೂರ್ಣವನ್ನು ಉಪಯೋಗಿಸಬಾರದು. ಅನಂತರ ಸ್ಥಾಪಿಸಿದ ಕಲಶ ಮತ್ತು ದೇವಿಯನ್ನು ವಿಸಜರ್ಿಸಬೇಕು..
(ಆಧಾರ : ಸನಾತನ ಸಂಸ್ಥೆ ನಿಮರ್ಿತ ಗ್ರಂಥ `ಶಕ್ತಿ’ ಹಾಗೂ “ಹಬ್ಬ, ಧಾಮರ್ಿಕ ಉತ್ಸವ ಮತ್ತು ವ್ರತಗಳು”)
ಸಂಪರ್ಕ: ಶ್ರೀ.ಗುರುಪ್ರಸಾದ, 9342556611

By suddi9

Leave a Reply

Your email address will not be published. Required fields are marked *