ಕೈಕಂಬ: ಸಹಕಾರಿ ಸಂಘಗಳು(ಬ್ಯಾಂಕುಗಳು) ಜನರ ಬಳಿಗೆ ಹೋಗಿ ಕೆಲಸ ಮಾಡಿದಾಗ ಮಾತ್ರ ಕಷ್ಟದಲ್ಲಿರುವವರ ಬಗ್ಗೆ ತಿಳಿದುಕೊಂಡು ಸಹಕರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘಗಳು ಜನರಿಗೆ ಇನ್ನಷ್ಟು ಹತ್ತಿರವಾಗಬೇಕು. ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಶಾಖೆ ತೆರೆದು ರೈತರು, ಕೃಷಿಕರು ಹಾಗೂ ಗ್ರಾಮೀಣರ ಸೇವೆ ಮಾಡುವಂತಹ ಸಾಮಥ್ರ್ಯ ಸಂಘಕ್ಕೆ ಬರಲಿ ಎಂದು ಕರ್ನಾಟಕ ರಾಜ್ಯ ಸಹಕಾರಿ ಸಹಕಾರಿ ಮಾರಾಟ ಮಹಾ ಮಂಡಳದ(ಬೆಂಗಳೂರು) ಅಧ್ಯಕ್ಷ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು.

2vpvsss gurupura

ಅವರು ಅ.2ರಂದು ಬುಧವಾರ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ವಜ್ರ ಮಹೋತ್ಸವ ಸಂಕೀರ್ಣ `ಸಾಧನಾ ಸಹಕಾರಿ ಸೌಧ’ ವಾಮಂಜೂರು ಶಾಖಾ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.2vpvsssgurupura1

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡುತ್ತ, ಸಹಕಾರಿ ಸಂಘವೆಂದರೆ ಆಯಾ ಪ್ರದೇಶಗಳಿಗೆ ಸೀಮಿತವಾದ ಬ್ಯಾಂಕ್. ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಮಳೆಕೊಯ್ಲು, ಇಂಗುಗುಂಡಿ, ಪ್ಲಾಸ್ಟಿಕ್ ನಿಷೇಧ ವಿಷಯದಲ್ಲಿ ಜನಜಾಗೃತಿ ಮೂಡಿಸಬೇಕು ಎಂದರು.2+-01

ವಿಧಾನ ಪರಿಷತ್ತು ಸದಸ್ಯ(ಎಂಎಲ್‍ಸಿ) ಐವನ್ ಡಿ’ಸೋಜ ಮಾತನಾಡುತ್ತ, ಸಹಕಾರಿ ಸಂಘಗಳು ಜನರ ಒಡನಾಡಿಯ ಒಂದು ಮನೆ ಇದ್ದಂತೆ. ಕಷ್ಟದಲ್ಲಿರುವ ರೈತರು, ಕೃಷಿಕರು ಸಹಕಾರಿ ಸಂಘಗಳತ್ತ(ಬ್ಯಾಂಕ್) ಮೊದಲು ಮುಖ ಮಾಡುವುದು. ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಹಕಾರಿ ಕಾನೂನು ರಚನೆಯಾಗಬೇಕು ಎಂದರು.2+1 copy

ಸಮಾರಂಭದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಸಹಕಾರಿ ಧ್ವಜರೋಹಣವನ್ನು ಮಾಡಿ ಶುಭ ಹಾರೈಸಿದರು. ಮಾಜಿ ಸಚಿವ ರಮಾನಾಥ ರೈ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆಮಾಡಿದರು . ಶಾಸಕ ಉಮಾನಾಥ ಕೋಟ್ಯಾನ್ ಸಂಘದ ಗೋದಾಮು, ಐವನ್ ಡಿ’ಸೋಜ ಭದ್ರತಾ ಕೊಠಡಿ ಹಾಗೂ ಗಣಕೀಕರಣ ಉದ್ಘಾಟಿಸಿದರೆ, ಮಾಜಿ ಶಾಸಕ ಮೊೈದಿನ್ ಬಾವ ಮಾರಾಟ ಮಳಿಗೆ ಉದ್ಘಾಟಿಸಿದರು.2-000212

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಮಾತನಾಡುತ್ತ, ಹಲವು ತೊಡಕುಗಳು ಎದುರಾಗಿದ್ದರೂ ಎಲ್ಲವೂ ಸುಖಾಂತ್ಯದೊಂದಿಗೆ ಇಲ್ಲೊಂದು ಉತ್ತಮ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಇದರಲ್ಲಿ ಹಲವರ ಶ್ರಮವಿದೆ. ಇದೀಗ ಪೂರ್ಣ ಪ್ರಮಾಣದಲ್ಲಿ ರೈತರ ಸಹಕಾರಿ ಸಂಘವಾಗಿ ಬೆಳೆದಿದೆ. ಇದರ ಕೆಲವು ಶಾಖೆಗಳು ತೆರೆದುಕೊಳ್ಳಲಿದೆ. ನನ್ನ ಅವಧಿಯಲ್ಲಿ ಎಲ್ಲ ವರ್ಗದವರಿಗೂ ಶಕ್ತಿ ಮೀರಿ ಸಹಕರಿಸಿದ್ದೇನೆ. ಈ ಮೂಲಕ ನನ್ನ ಸಹಕಾರಿ ಜೀವನ ಸಾರ್ಥಕವಾಗಿದೆ ಎಂದರು.2-0000001

ವೇದಿಕೆಯಲ್ಲಿ ಬಿ ಕೆ ಸಲೀಂ(ಸಹಕಾರಿ ಸಂಘಗಳ ಉಪನಿಬಂಧಕರು, ದಕ ಜಿಲ್ಲೆ), ಎಸ್ ಜಿ ಮಂಜುನಾಥ ಸಿಂಗ್(ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು), ಮೋನಪ್ಪ ಶೆಟ್ಟಿ ಎಕ್ಕಾರು(ಅಧ್ಯಕ್ಷ, ಮಂಗಳೂರು ಟಿಎಪಿಸಿಎಂಎಸ್,ಲಿ), ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ(ಅಧ್ಯಕ್ಷ, ದಕ ಜಿ. ಸಹಕಾರಿ ಯೂನಿಯನ್), ಯು ಪಿ ಇಬ್ರಾಹಿಂ(ಜಿಪಂ ಸದಸ್ಯ), ಸೀಮಾ ಮೆಲ್ವಿನ್ ಡಿ’ಸೋಜ(ಜಿಪಂ ಸದಸ್ಯೆ), ಸಚಿನ್ ಅಡಪ(ತಾಪಂ ಸದಸ್ಯ, ಸಂಘದ ನಿರ್ದೇಶಕ), ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಶ್ರೀಧರ್(ತಾಪಂ ಸದಸ್ಯ),.ಹಾಗೂ ತಾಪಂ ಸದಸ್ಯ ಸುನಿಲ್ ಜಿ , ಅಪ್ಸತ್(ತಾಪಂ ಸದಸ್ಯೆ), ಕವಿತಾ ದಿನೇಶ್(ತಾಪಂ ಸದಸ್ಯೆ), ಮಾಜಿ ಮೇಯರ್ ಭಾಸ್ಕರ್, ಶೆಡ್ಡೆ ಮಂಜುಮಾಥ ಭಂಡಾರಿ, ವಿಶ್ವನಾಥ ಶೆಟ್ಟಿ(ತಾಪಂ ಸದಸ್ಯ) ಜಯಪ್ರಕಾಶ್(ಮಾಜಿ ಕಾರ್ಪೊರೇಟರ್), ಉಪಾಧ್ಯಕ್ಷ ಪಿ ಶೇಖಬ್ಬ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಸಹಕಾರಿ ಮಾರಾಟ ಮಹಾ ಮಂಡಳದ(ಬೆಂಗಳೂರು) ಅಧ್ಯಕ್ಷ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರನ್ನು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಅವರನ್ನು ಪದ್ಮನಾಭ ಶೆಟ್ಟಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಕೆಲವು ಪ್ರಗತಿಪರ ಕೃಷಿಕರಿಗೆ ` ಪ್ರಗತಿಪರ ಕೃಷಿಕರಾದ ರಮಾನಾಥ ಅತ್ತಾರ್ ಮೂಡುಶೆಡ್ಡೆ, ಪದ್ಮಾವತಿ ಆಳ್ವ ಮಲ್ಲೂರು ಬರ್ಕೆ,ಗುರುವಪ್ಪ ಪೂಜಾರಿ ಕೆದುಬರಿ ಗುರುಪುರ,ಆನಂದ ಪೂಜಾರಿ ತಿರವೈಲ್, ಪದ್ಮನಾಭ ಶೆಟ್ಟಿ ಪೆರ್ಮಂಕಿಗುತ್ತು, ಗಂಗಾಧರ ಸಪಲಿಗ ಗುರುಪುರ ,ಸ್ಟೀವನ್ ಡಿ:ಸಿಲ್ವಾ ಪಚ್ಚನಾಡಿ, ತ್ಯಾಂಪಣ್ಣ ರೈ ಉಳಾಯಿಬೆಟ್ಟು, ಇಬ್ರಾಹಿಂ ಅಡ್ಡೂರುರಾಜರಾಮ ಕೋಟ್ಯಾನ್ ಮಲ್ಲೂರು ಕಜೆ ಅವರನ್ನು ಎಂ ಎನ್ ರಾಜೇಂದ್ರ ಕುಮಾರ್ ಶಾಲು ಹೊದಿಸಿ ಕಳಸೆ’ ನೀಡಿ, ಶಾಲು ಹೊದಿಸಿ ಪಲಪುಷ್ಪ ನೀಡಿ ಸನ್ಮಾನಿಸಿದರು.

ಸಂಘದ ನಿರ್ದೇಶಕ ನಾಗೇಶ್ ಕೆ ಸ್ವಾಗತಿಸಿದರೆ, ಕಾರ್ಯನಿರ್ವಹಣಾಧಿಕಾರಿ ಬಿ ನಾಗರಾಜ ರಾವ್ ಸಂಘದ ಬಗ್ಗೆ ಮಾಹಿತಿ ನೀಡಿದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ಲೆಕ್ಕಿಗ ಕಮಲಾಕ್ಷ ಎಂ ಜಿ ವಂದಿಸಿದರು.

ಬಳಿಕ ಸಹಕಾರಿ ಕ್ಷೇತ್ರದಲ್ಲಿ ಕೃಷಿಕರ ಪಾತ್ರ ಮತ್ತು ಕೊಡುಗೆ ವಿಷಯದಲ್ಲಿ ಉಪನ್ಯಾಸ ಹಾಗೂ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಬಳಗದಿಂದ `ಅಷ್ಟಾವಧಾನ’ ಕಾರ್ಯಕ್ರಮ ಜರುಗಿತು.

By suddi9

Leave a Reply

Your email address will not be published. Required fields are marked *