ಪೊಳಲಿ: ಎಸ್.ಪಿ.ವೈ.ಎಸ್.ಎಸ್ ನೇತ್ರಾವತಿ ವಲಯ,ಮಂಗಳೂರು ಯೋಗ ಸಮಿತಿಯ ವತಿಯಿಂದ ಭಾನುವಾರ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ಸಾರ್ವಜನಿಕ ಶ್ರೀ ಮಹಾಲಕ್ಷ್ಮೀ ಅಷ್ಟಕಂ ಪಠಣೆ ಹಾಗೂ ಅರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 
ಶ್ರೀ ಕ್ಷೇತ್ರ ಪೋಳಲಿಯ ಮೊಕೇಸ್ತರರು ಹಾಗೂ ಪ್ರಧಾನ ಅರ್ಚಕರಾದ ಪವಿತ್ರ ಪಾಣಿ ಮಾಧವ ಭಟ್,ಅರ್ಚಕರಾದ ಪದ್ಮನಾಭ ಭಟ್ , ಅರ್ಚಕರಾದ ಪರ್ಧಕಂದ ಮಾಧವ ಭಟ್, ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಪ್ರಾಂತ ಸಂಘಟನಾ ಪ್ರಮುಖರಾದ ರವೀಶ್ ಕುಮಾರ್, ಜಿಲ್ಲಾ ಸಂಚಾಲಕರಾದ ಗೋಕುಲ್ ನಾಥ್ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.
ಬೆಳಗ್ಗೆ 4:30 ರಿಂದಲೇ ಯೋಗಪಟುಗಳು ಹಾಗೂ ಸಾರ್ವಜನಿಕರು ಶಿಸ್ತುಬದ್ದವಾಗಿ ದೇವಾಲಯದ ಅಂಗಣದಲ್ಲಿ ಸಾಲಾಗಿ ಕುಳಿತುಕೊಳ್ಳಲು ಆಗಮಿಸಿದ್ದರು.5:30ರ ಹೊತ್ತಿಗೆ ದೇವಾಲಯದ ಅವರಣ,ಪಕ್ಕದ ಅವರಣ ಕಟ್ಟಡದ ಮಹಡಿ ಹಾಗೂ ಒಳಗೆ ಜನರಿಂದ ಭರ್ತಿಯಾಗಿ ಪಕ್ಕದಲ್ಲಿ ಇದ್ದ ಸಭಾಂಗಣ,ದೇವಾಲಯದ ಎದುರಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಾಕಿದ ಚಪ್ಪರದ ಕೆಳಗೆ, ವೇದಿಕೆ ಮೇಲೆ ಜನರಿಂದ ತುಂಬಿದ ನಂತರ ದೇವಸ್ಥಾನದ ಸರ್ವಮಂಗಳ ಸಭಾಂಗಣ ಭರ್ತಿಯಾಯಿತು.ಅನಂತರ ಬಂದವರು ಕುಳಿತುಕೊಳ್ಳಲು ಜಾಗ ಇಲ್ಲದೆ ನಿಂತುಕೊಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಯೋಗಪಟುಗಳು ಹಾಗೂ ಸಾರ್ವಜನಿಕರು ಒಟ್ಟು 3800 ಸಂಖ್ಯೆಯಲ್ಲಿ ಸೇರಿದ್ದರು. 32 ಬಸ್ಸುಗಳು, 4 ಮಿನಿಬಸ್ಸುಗಳು,236 ಲಘು ವಾಹನಗಳು,150 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಜನರು ಆಗಮಿಸಿದ್ದರು.ಬಂದವರೆಲ್ಲ ಚಪ್ಪಲಿಯನ್ನು ಸಾಲಾಗಿ ಜೋಡಿಸಿ, ನೆಲದ ಮೇಲೆ ಶಿಸ್ತುಬದ್ದವಾಗಿ ಕುಳಿತುಕೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಉದ್ದೇಶವನ್ನು ಗ್ರಾಮಾಂತರ ಉಪವಲಯದ ಸಂಯೋಜಕರಾದ ಮಹೇಶ್ ನೀಡಿದರು. ನೇತ್ರಾವತಿ ವಲಯದ ಸಂಚಾಲಕರಾದ ಹರೀಶ್ ಕೋಟ್ಯಾನ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಪ್ರಾಂತ ಸೇವಾ ಪ್ರಮುಖರಾದ ಶಿವಾನಂದ ರೈ ಸೂಚನೆಗಳನ್ನು ನೀಡಿದರು. ಉಪವಲಯದ ಮಹಿಳಾ ಸಂಚಾಲಕರಾದ ಬಬಿತ ನಿರೂಪಣೆ ಮಾಡಿದರು. ಉಪವಲಯದ ಸಂಚಾಲಕರಾದ ಲೋಕೇಶ್ ವಂದನಾರ್ಪಣೆ ಮಾಡಿದರು.
ಪ್ರಮುಖರಾದ ಜಗದೀಶ್ ಶೆಟ್ಟಿ ಕಾವೂರು,ಧರಣೀಶ್ ಕೆಂಜಾರ್,ಅಶೋಕ್ ಜೈನ್,ಭರತ್ ಜೈನ್,ಶಿವಪ್ರಸಾದ್ ಪೊಳಲಿ,ಲೋಕನಾಥ್, ಕೇಶವ ಕಾವೇರಿ,ಉಮೇಶ್, ಜನಾರ್ಧನ,ಬಾಲಚಂದ್ರ,ದಾಮೋದರ್,ಚಂದ್ರಶೇಖರ, ದಿವಾಕರ್, ದೊಡ್ಡಯ್ಯ ವಾಸುದೇವ್, ಶಶಿ ರಾಜ್ ಮತ್ತಿತರು ಉಪಸ್ಥಿತರಿದ್ದರು.

