ಅನಿಲ್ ಜಾನ್ ಜೊತೆ ಹಸೆಮಣೆಯೇರಿದ ಮೀರಾ ಜಾಸ್ಮಿನ್
ಕೊಚ್ಚಿ: ದಕ್ಷಿಣ ಭಾರತದ ಪ್ರಖ್ಯಾತ ನಟಿ ಮೀರಾ ಜಾಸ್ಮಿನ್ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಅನಿಲ್ ಜಾನ್ ಜೊತೆ ಆಕೆಯ ವಿವಾಹವು ಬುಧವಾರ ಕೊಚ್ಚಿಯ ಚಚರ್್ ಒಂದರಲ್ಲಿ ನಡೆದಿದೆ.
2001ರಲ್ಲಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಮೀರಾ 2004ರಲ್ಲಿ ‘ ‘ಪಾದಮ್ ಒನ್ನ್-ಒರು ವಿಳಪಂ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾಳೆ. ಕನ್ನಡದಲ್ಲೂ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಪುನೀತ್ ರಾಜ್ಕುಮಾರ್ ಜೊತೆ ನಟಿಸಿದ ‘ಅರಸು’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗುವ ಮೂಲಕ ಮೀರಾಗೆ ಸ್ಯಾಂಡಲ್ವುಡ್ನಲ್ಲೂ ಅವಕಾಶಗಳನ್ನು ಒದಗಿಸಿಕೊಟ್ಟಿತು. ವಿವಾಹದ ನಂತರ ಕುಟುಂಬವೇ ಮೊದಲ ಆದ್ಯತೆ ಎಂದಿರುವ ಮೀರಾ ಒಳ್ಳೆ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ನಟಿಸುವುದಾಗಿ ಹೇಳಿದ್ದಾಳೆ. ವರನ ಮನೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರ ಜಗತ್ತಿನ ಹಾಗೂ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.

