ಮುಂಬೈ: ಬಾಲಿವುಡ್ ನವಾಬ್ ಎಂದೇ ಖ್ಯಾತಿ ಪಡೆದಿರುವ ಸೈಫ್ ಅಲಿ ಖಾನ್ನ ಚಿತ್ರ ನಿಮರ್ಾಣ ಸಂಸ್ಥೆ ‘ಇಲುಮಿನಾಟಿ”ಯ ಕಚೇರಿಯಿಂದ 11 ಸ್ಪ್ಲಿಟ್ ಎಸಿಗಳನ್ನು ಅಲ್ಲಿನ ಇಬ್ಬರು ನೌಕರರು ಕದ್ದ ಘಟನೆ ನಡೆದಿದೆ.saif
ತಮ್ಮ ಕಚೇರಿಯಿಂದ 11 ಎಸಿಗಳು ಕಾಣೆಯಾಗಿವೆ ಎಂದು ಸಂಸ್ಥೆಯ ಮ್ಯಾನೇಜರ್ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಸಂಸ್ಥೆಯ ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇಬ್ಬರು ಉದ್ಯೋಗಿಗಳು ಸಮರ್ಪಕವಾದ ಉತ್ತರ ನೀಡಲು ವಿಫಲವಾದ ಕಾರಣ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡರು. ಆರೋಪಿಗಳನ್ನು ಸುಭಾಷ್ ಸಾಹು ಮತ್ತು ಶಮಿನ್ ಸೋಲಂಕಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಆಥರ್ಿಕ ಪರಿಸ್ಥಿತಿ ಬಿಗಡಾಯಿಸಿದ್ದ ಕಾರಣ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇವರಲ್ಲಿ ಒಬ್ಬನ ಮನೆಯಲ್ಲಿ ಸಹೋದರಿಯ ಮದುವೆ ನಡೆಯಲಿದ್ದು ಅದಕ್ಕೆ ದುಡ್ಡು ಹೊಂದಿಸುವ ಜವಾಬ್ದಾರಿ ಆತನ ಮೇಲಿತ್ತು ಎನ್ನಲಾಗಿದೆ

By suddi9

Leave a Reply

Your email address will not be published. Required fields are marked *