‘ಸದ್ಮಾ’ ನಿದರ್ೇಶಕ ಬಾಲು ಮಹೇಂದರ್ ವಿಧಿವಶ
ಚೆನ್ನೈ; ಭಾರತೀಯ ಚಿತ್ರ ಜಗತ್ತಿನ ಹೆಸರಾಂತ ಚಿತ್ರ ನಿದರ್ೇಶಕ ಮತ್ತು ಛಾಯಾಗ್ರಹಣಕಾರ ಬಾಲು ಮಹೇಂದರ್ ಅವರು ಇಂದು(ಗುರುವಾರ) ಚೆನ್ನೈನ ವಿಜಯಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 74 ವರ್ಷದ ಮಹೇಂದರ್ಗೆ ಹೃದಯಾಘಾತ ಸಂಭವಿಸಿದ ಕಾರಣ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ.
ಮಲಯಾಳಂನ ‘ನೆಲ್ಲು” ಚಿತ್ರದ ಮೂಲಕ ಛಾಯಾಗ್ರಹಣಕ್ಕೆ ಕಾಲಿಟ್ಟ ಬಾಲು ನಂತರ ಹಿಂತಿರುಗಿ ನೋಡಲೇ ಇಲ್ಲ. ಕನ್ನಡದ ಯಶಸ್ವಿ ಚಿತ್ರ ‘ಕೋಕಿಲಾ’ಗೂ ಕೂಡಾ ಬಾಲು ಛಾಯಾಗ್ರಹಣ ಮಾಡಿದ್ದರು. ನಂತರ ಚಿತ್ರ ನಿದರ್ೇಶನದತ್ತ ವಾಲಿದ ಅವರು ತಮಿಳಿನಲ್ಲಿ ‘ಮೂನ್ರಾಂಪಿರೈ’, ‘ಸಂಧ್ಯಾ ರಾಗಂ’, ‘ವೀಡ್’ನಂಥ ಸೂಪರ್ ಹಿಟ್ ಚಿತ್ರಗಳನ್ನು ನಿದರ್ೇಶಿಸಿದ್ದಾರೆ. ಹಿಂದಿಯಲ್ಲೂ ಅದೃಷ್ಟ ಪರೀಕ್ಷೆಗೆ ಹೊರಟಿದ್ದ ಬಾಲು, ಕಮಲ್ ಹಾಸನ್ ಅಭಿನಯದ ‘ಸದ್ಮಾ’ ಚಿತ್ರವನ್ನು ನಿದರ್ೇಶಿಸಿದ್ದರು ಇದರ ಜೊತೆಗೆ ‘ಔರ್ ಏಕ್ ಪ್ರೇಮ್ ಕಹಾನಿ’ಯೆಂಬ ಸಿನಿಮಾವನ್ನೂ ನಿದರ್ೇಶಿಸಿದ್ದರು. ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ

