andhraಸದನದಲ್ಲಿ ಮೆಣಸಿನ ಹುಡಿ, ಚಾಕು ಪ್ರದರ್ಶನ: ತೆಲಂಗಾಣ ವಿರೋಧಿಗಳಿಂದ ಕೋಲಾಹಲ
ದೆಹಲಿ: ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸುತ್ತಿರುವ ಶಾಸಕರು ಸದನದಲ್ಲಿ ಗೂಂಡಾಗಿರಿ ಪ್ರದಶರ್ಿಸಿದ ಘಟನೆ ಗುರುವಾರ ನಡೆದಿದೆ. ಸದನದ ಒಳಗೆ ಒಳ್ಳೆ ಮೆಣಸಿನ ಹುಡಿ ಮತ್ತು ಚಾಕು ತರುವ ಮೂಲಕ ಶಾಸಕರು ಗೂಂಡಾ ಪ್ರವೃತ್ತ ಮೆರೆದಿದ್ದಾರೆ.
ಕಾಂಗ್ರೆಸ್ನ ಉಚ್ಛಾಟಿತ ಸಾಂಸದ ಎಲ್. ರಾಜಗೋಪಾಲ ಅವರು ಒಳ್ಳೆ ಮೆಣಸಿನ ಹುಡಿಯನ್ನು ತಂದು ಸದನದಲ್ಲಿ ಚಿಮ್ಮಿಸಿದ ಘಟನೆ ನಡೆಯಿತು. ಈ ಮಧ್ಯೆ ಮತ್ತೊಬ್ಬ ಟಿಡಿಎಂನ ಸಾಂಸದ ವೇಣುಗೋಪಾಲ ರೆಡ್ಡಿ ಸದನದಲ್ಲಿ ಚಾಕು ಝಳಪಿಸಿದರು. ಕಲಾಪದ ನಡುವೆ ನಡೆದ ಗಲಭೆಯಿಂದ ಹಲವು ಸಾಂಸದರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಈ ಗಲಾಟೆಯಲ್ಲಿ ಉಪಸಭಾಪತಿಯ ಮೈಕ್ನ ಸಂಪರ್ಕವನ್ನು ಕೂಡಾ ಕಡಿದು ಹಾಕಲಾಯಿತು. ಒಬ್ಬರಿಗೊಬ್ಬರು ಥಳಿಸುವ ಜೊತೆಗೆ ಸದನದ ಗಾಜುಗಳನ್ನು ಒಡೆದು ಹಾಕಿದರು. ಲೋಕಸಭೆಯ ಇತಿಹಾಸದಲ್ಲೇ ಇದೊಂದು ಕೆಟ್ಟ ಘಟನೆಯಾಗಿದ್ದು, ಇಡೀ ದೇಶವೇ ಚಕಿತಗೊಂಡಿದೆ.

By suddi9

Leave a Reply

Your email address will not be published. Required fields are marked *