ಬಜಪೆ:ಮಂಗಳೂರಿನ ದಂಬೇಲ್ ನಿವಾಸಿ ಶ್ರೀ ಶರತ್ ಕೆ ಚಂದ್ರ ಎಂಬವರು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲೆಂಜಾರು ಗ್ರಾಮದ ಕುಪ್ಪೆಪದವು ಎಂಬಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ನಡೆಸುತ್ತಿದ್ದ ಕಲ್ಲಿನ ಕೋರೆಯಲ್ಲಿ ಇಟ್ಟಿದ್ದ ತನ್ನ ಜೆ.ಸಿ.ಬಿ, ನಂಬ್ರ ಕೆಎ 19 ಝಡ್ 5682 ಮತ್ತು ಟಾಟಾ ಹಿಟಾಚಿ ಮಷಿನ್ ಗಳು ಚಾಲನಾ ಸ್ಥಿತಿಯಲ್ಲಿ ಇಲ್ಲದೇ ಇದ್ದುದರಿಂದ ಸದ್ರಿ ಕೋರೆಯಲ್ಲಿಯೇ ಬಿಟ್ಟಿದ್ದು ಆಗಾಗ್ಯೆ ಹೋಗಿ ಯಂತ್ರಗಳನ್ನು ನೋಡಿ ಬರುತ್ತಿದ್ದು ದಿನಾಂಕ 19-05-19 ರಂದು ಸಂಜೆ ಸುಮಾರು 17-00 ಗಂಟೆಗೆ ಯಂತ್ರಗಳನ್ನು ನೋಡಿದ್ದು ದಿನಾಂಕ 08-07-19 ರಂದು ಬೆಳಿಗ್ಗೆ 09-00 ಗಂಟೆಗೆ ಹೋಗಿ ನೋಡಲಾಗಿ ಅಲ್ಲಿಟ್ಟಿದ್ದ ಜೆ.ಸಿ.ಬಿ ಮತ್ತು ಟಾಟಾ ಹಿಟಾಚಿ ಕಾಣೆಯಾಗಿದ್ದು ಸುಮಾರು 7 ಲಕ್ಷ ಮೌಲ್ಯದ ಸದ್ರಿ ಯಂತ್ರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ 8-07-19 ರಂದು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಅ.ಕ್ರ 133/19 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಈ ದಿನ ದಿನಾಂಕ 09-07-19 ರಂದು ಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಕುಪ್ಪೆಪದವು ಬಸ್ ನಿಲ್ದಾಣದ ಬಳಿ ಅಬ್ದುಲ್ ರಹಿಮಾನ್ ಪ್ರಾಯ 35 ವರ್ಷ ತಂದೆಃ ಅಬ್ದುಲ್ ಹಮೀದ್, ವಾಸಃ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ, ಮುತ್ತೂರು ಸೈಟ್, ಕೊಳವೂರು ಪೋಸ್ಟ್ ಮತ್ತು ಮುತ್ತೂರು ಗ್ರಾಮ,ಮಂಗಳೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿ ಆತನು ಇತರರೊಂದಿಗೆ ಸೇರಿ ಈ ಮೇಲಿನ ಪ್ರಕರಣದಲ್ಲಿ ಭಾಗಿಯಾಗಿಯಾಗಿ ಜೆ.ಸಿ.ಬಿ ಮತ್ತು ಟಾಟಾ ಹಿಟಾಚಿ ಮಷಿನನ್ನು ಕಳವು ಮಾಡಿ ಕತ್ತರಿಸಿ ತುಂಡರಿಸಿಕೊಂಡು ಗುಜರಿಗೆ ಮಾರಾಟ ಮಾಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದು ಆತನಿಂದ ಪ್ರಕರಣದಲ್ಲಿ ಕಳವು ಮಾಡಿದ ಜೆ.ಸಿ.ಬಿ ಮತ್ತು ಹಿಟಾಚಿ ಯಂತ್ರದ ತುಂಡರಿಸಿದ ಭಾಗಗಳನ್ನು ಮತ್ತು ಸದ್ರಿ ಭಾಗಗಳನ್ನು ಸಾಗಿಸಲು ಉಪಯೋಗಿಸಿದ ಕೆಎ 20 ಸಿ 4981 ನೇ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನವನ್ನು ಕೂಡ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ವಿವರ ಈ ಕೆಳಗಿನಂತಿದೆ.
1. ಕೆಎ 19 ಝಡ್ 5682 ಮತ್ತು ಟಾಟಾ ಹಿಟಾಚಿ ಯಂತ್ರದ ತುಂಡರಿಸಿದ ಭಾಗಗಳು ಸುಮಾರು 9 ಟನ್
ಮೌಲ್ಯ ಸುಮಾರು 7,00,000/- ರೂಪಾಯಿ.
2) ಕೆಎ 20 ಸಿ 4981 ನೇ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಮೌಲ್ಯ ಸುಮಾರು 2,00,000/-
ಒಟ್ಟು ಸುಮಾರು ರೂ 9,00,000/- ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬಜಪೆ ಪೊಲೀಸ್ ಠಾಣೆಯ ಸೂರಲ್ಪಾಡಿಯಲ್ಲಿ ಯಾವುದೇ ದಾಖಲಾತಿ ಇಲ್ಲದೆ ಕಳವು ಮಾಡಿ ತಂದಿರಿಸಿದ 18 ಆಟೋರಿಕ್ಷಾಗಳನ್ನು ಮತ್ತು ಆರೋಪಿಯನ್ನು ಬಂಧಿಸಿ ಸ್ವತ್ತು ಸ್ವಾಧೀನಪಡಿಸಿಕೊಂಡ ಬಗ್ಗೆ
ದಿನಾಂಕ 08-07-2019 ರಂದು ಬಜಪೆ ಪೊಲೀಸ್ ಠಾಣಾ ಸರಹದ್ದಿನ ಬಡಗುಳಿಪ್ಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ ಸಲ್ವಾ ಕಾಂಪ್ಲೆಕ್ಸ್ ಬಳಿ ಇರುವ ಗುಜರಿ ಅಂಗಡಿಯ ಕಂಪೌಂಡ್ ಒಳಗಡೆ ಮತ್ತು ಅದಕ್ಕೆ ತಾಗಿದ ಜಾಗದಲ್ಲಿ ಯಾವುದೇ ದಾಖಲಾತಿಗಳಿಲ್ಲದ ಹಲವಾರು ಆಟೋರಿಕ್ಷಾಗಳನ್ನು ಎಲ್ಲಿಂದಲೋ ಕಳವು ಮಾಡಿ ತಂದಿರಿಸಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿಯವರು ಅವರ ಸಿಬ್ಬಂದಿಯವರೊಂದಿಗೆ 13-15 ಗಂಟೆಗೆ ಗುಜರಿ ಅಂಗಡಿಗೆ ತಲಪಿ ಅಲ್ಲಿ ಪರಿಶೀಲಿಸಿದಾಗ ಹಲವಾರು ಆಟೋರಿಕ್ಷಾಗಳನ್ನು ಇರಿಸಿರುವುದು ಕಂಡು ಬಂದಿದ್ದು ಅಲ್ಲಿ ಹಾಜರಿದ್ದ ಇರ್ಫಾನ್ ಪ್ರಾಯ 28 ವರ್ಷ ತಂದೆಃ ಮಯ್ಯದಿ, ಆಚಾರಿಬೆಟ್ಟು ಹೌಸ್, ಉಳಾಯಿಬೆಟ್ಟು, ಮಂಗಳೂರು ತಾಲೂಕು ಎಂಬಾತನಲ್ಲಿ ವಿಚಾರಿಸಿದಾಗ ಸಮಂಜಸವಾದ ಉತ್ತರ ನೀಡದೆ, ದಾಖಲಾತಿಯ ಬಗ್ಗೆ ವಿಚಾರಿಸಿದಾಗ ಅದ್ಯಾವುದು ಇಲ್ಲವಾಗಿಯೂ ಸದ್ರಿ ಆಟೋರಿಕ್ಷಾಗಳನ್ನು ಇನ್ನೋರ್ವ ಆರೋಪಿ ತಂದಿರಿಸಿದ್ದು ನಾವಿಬ್ಬರು ಸೇರಿ ಮಾರಾಟ ಹಾಗೂ ಅದರ ಬಿಡಿ ಭಾಗಗಳನ್ನು ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಇರಿಸಿರುವುದಾಗಿ ತಿಳಿಸಿದ್ದರಿಂದ ಅಲ್ಲಿದ್ದ ಒಟ್ಟು 18 ಆಟೋರಿಕ್ಷಾಗಳನ್ನು ಮುಂದಿನ ನಡವಳಿಕೆಯ ಬಗ್ಗೆ ಸ್ವಾಧೀನ ಪಡಿಸಿಕೊಂಡು ಠಾಣೆಗೆ ತಂದು ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 134/19 ಕಲಂ 41 (1)(ಡಿ) 102 ಸಿ.ಆರ್.ಪಿ.ಸಿ ಮತ್ತು 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ವಶಪಡಿಸಿಕೊಂಡ ಆಟೋ ರಿಕ್ಷಾಗಳ ಒಟ್ಟು ಮೌಲ್ಯ ರೂ 3,70,000/- ಆಗಬಹುದು.
ಈ ಎರಡೂ ಪ್ರಕರಣದಲ್ಲಿ ಒಟ್ಟು 9 ಟನ್ ಬಿಡಿಭಾಗಗಳು, 1 ಅಶೋಕ್ ಲೈಲ್ಯಾಂಡ್ ವಾಹನ, 18 ಆಟೋರಿಕ್ಷಾಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಒಟ್ಟು ಸುಮಾರು 12,70,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸಂದೀಪ್ ಪಾಟೀಲ್ ರವರ ಆದೇಶದಂತೆ ಹಾಗೂ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಹನುಮಂತರಾಯ(ಕಾಮತ್ತುಸು) ಮತ್ತು ಶ್ರೀ ಲಕ್ಷ್ಮೀ ಗಣೇಶ್ (ಅ ಮತ್ತು ಸ) ರವರ ಹಾಗೂ ಉತ್ತರ ಉಪವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶ್ರೀನಿವಾಸ ಗೌಡರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್. ಪರಶಿವ ಮೂರ್ತಿ. ಸಹಾಯಕ ಉಪನಿರೀಕ್ಷಕರಾದ ಶ್ರೀ ರಾಮಚಂದ್ರ, ಶ್ರೀ ರಾಮ ಪೂಜಾರಿ, ಶ್ರೀ ಜನಾರ್ಧನ ಗೌಡ, ಹೆಚ್.ಸಿ. ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್, ಸಂತೋಷ್, ಹೊನ್ನಪ್ಪ ಗೌಡ, ಪಿಸಿಗಳಾದ ಕುಮಾರಸ್ವಾಮಿ, ಮಂಜುನಾಥ ನಾಯ್ಕ್ ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
