ಕೈಕಂಬ: ಬಿರುವೆರ್ ಕುಡ್ಲ ಬಜಪೆ ಘಟಕದ   ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವು  ಸೆ. 1ರಂದು ಭಾನುವಾರ  ಬಜಪೆ ಬ್ರಹ್ಮಶ್ರೀ  ಗುರುನಾರಾಯಣ ಮಂದಿರದ ಅಬ್ಬಯ್ಯ ವೆಂಕಪ್ಪ ವೇದಿಕೆಯಲ್ಲಿ  ನಡೆಯಿತು.ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ  ಉದಯ ಪೂಜಾರಿ ಬಳ್ಳಾಲ್ ಬಾಗ್ ಅಧ್ಯಕ್ಷತೆ ವಹಿಸಿದ್ದರು.ನೂತನ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರಾಗಿ  ಪ್ರಶಾಂತ್ ಕುಮಾರ್ ಕಾನ ಅವರನ್ನು ಆಯ್ಕೆ ಮಾಡಲಾಯಿತು.d5982227-b30d-448e-ad0b-303ea986df94

 ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವ ಸಲಹೆಗಾರ  ಲೋಕೆಶ್ ಪೂಜಾರಿ ಬಜಪೆ ಇವರು ಬಿರುವೆರ್ ಕುಡ್ಲ ಸಂಘಟನೆಯನ್ನು ಉದ್ದೇಶಿಸಿ ಮಾತನಾಡಿ ಬಿರುವೆರ್ ಕುಡ್ಲ ಸಂಘಟನೆಯು ಹಲಾವಾರು ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಸಮಾಜಮುಖಿ ಕಾರ್ಯಗಳನ್ನು ಮಾಡಿ ಹನಿ ಹನಿ ಸೇರಿ ಈಗ ಮಹಾ ಸಾಗರವಾಗಿ ಬೆಳೆದು ನಿಂತಿದೆ  ಈ ಸಂಘಟನೆಯು ಇನ್ನೂ ಎತ್ತರತ್ತೆರಕ್ಕೆ ಬೆಳೆಯಲಿ ಎಂದು ನೂತನ ಪಧಾದಿಕಾರಿಗಳಿಗೆ ಶುಭ ಹಾರೈಸಿದರು.489b0b30-53db-48de-bdb3-a62fdf8f49fe

03db9c7f-31bf-4587-9f40-1fd2d3e0212d (1)ಘಟಕದ ಉಪಾಧ್ಯಕ್ಷ  ಚಂದ್ರಶೇಖರ್ ಅಮೀನ್ ಇವರು ಬಿರುವೆರ್ ಕುಡ್ಲ ಬಜಪೆ ಘಟಕದ 27 ತಿಂಗಳ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ 31 ಮತ್ತು 32ನೇ ಸ್ಪಂದನ ಸೇವಾ ಯೋಜನೆಯಡಿ ಎರಡು ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಲಾಯಿತು.31ನೇ ಸೇವಾ ಯೋಜನೆ ಪೊರ್ಕೋಡಿ ನಿವಾಸಿ ರಾಕೇಶ್ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ ವೈದ್ಯಕೀಯ ನೆರವಿಗೆ ಸಹಾಯಹಸ್ತವನ್ನುಉದಯ ಪೂಜಾರಿ ಬಳ್ಳಾಲ್ ಬಾಗ್   ಹಸ್ತಾಂತರ ಮಾಡಿದರು 32ನೇ ಸೇವಾ ಯೋಜನೆ ಬಜಪೆ ನಿವಾಸಿ ಸುಂದರ ರವರ ಮಗಳು ಗೆಡ್ಡೆ ಶಸ್ತ್ರಚಿಕಿತ್ಸೆ ಗೆ ವೈದ್ಯಕೀಯ ನೆರವು ನೀಡಲಾಯಿತು. ಬನ್ನಂಜೆ ಬಾಬು ಅಮೀನ್ ಸಹಾಯ ಧನವನ್ನು ಹಸ್ತಾಂತರ ಮಾಡಿದರು. ಅಲ್ಲದೆ 6 ಮಂದಿಗೆ  ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.38a807d7-56c5-430e-b35d-f6747cbb3372

ಪದಗ್ರಹಣ ಕಾರ್ಯಕ್ರಮದಲ್ಲಿ  ಬಿರುವೆರ್ ಕುಡ್ಲ ದ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಖ್ಯಾತ ಜಾನಪದ ವಿದ್ವಾಂಸರು  ಬನ್ನಂಜೆ ಬಾಬು ಅಮೀನ್,  ಲೋಕೆಶ್ ಪೂಜಾರಿ ಬಜಪೆ, ಜಾನಪದ ಲೇಖಕರು ಜೆ. ತಿಮ್ಮಪ್ಪ ಪೂಜಾರಿ ಜಪ್ಪಿನಮೊಗರು, ಬೆನೆಟ್ ಜಿ ಅಮ್ಮನ್ನ ಸದಸ್ಯರು ತುಳು ಸಾಹಿತ್ಯ ಅಕಾಡೆಮಿ, ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವಾಧ್ಯಕ್ಷ ಶರತ್ ಪೂಜಾರಿ ಬಜಪೆ, ನೂತನ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಾನ, ಉಪಾಧ್ಯಕ್ಷ  ಚಂದ್ರಶೇಖರ್ ಅಮೀನ್,  ಬಜ್ಪೆ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಶಿವರಾಮ ಪೂಜಾರಿ  , ಕೃಷ್ಣಪ್ಪ ಪೂಜಾರಿ ಕಾನ,  ಬಿರುವೆರ್ ಕುಡ್ಲ ಬಜಪೆ ಘಟಕದ ಕಂದಾವರ ವಲಯದ ಸಹಸಂಚಾಲಕ ಸಂತೋಷ್ ಪೂಜಾರಿ .ಘಟಕದ ಜೊತೆ ಕಾರ್ಯದರ್ಶಿ ಪ್ರಸಾದ್ ಬೈಧ್ಯ ಮುಂತಾದವರು ಉಪಸ್ಥಿತರಿದ್ದರು.5d66c2ef-9fa0-4fec-b5c4-8ba71301b1d6

ಖ್ಯಾತ ಜಾನಪದ ಲೇಖಕರು ಜೆ.ತಿಮ್ಮಪ್ಪ ಪೂಜಾರಿಯವರು ಬರೆದ ತುಳು ಲೇಖನ ತುಳುವೆರೆ ರೀತಿ ರಿವಾಜಿಲು ಬೊಕ್ಕ ಪದ್ನಾಜಿ ಸಂಸ್ಕಾರೋಲು ಎಂಬ ಪುಸ್ತಕವನ್ನು  ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್   ವೇದಿಕೆಯಲ್ಲಿ ಬಿಡುಗಡೆ ಗೊಳಿಸಿ ಲೋಕಾರ್ಪಣೆ ಮಾಡಿದರು.78b15909-fb77-465e-a26d-1715cf0335b0

ಕಾರ್ಗೀಲ್ ಯುದ್ಧದಲ್ಲಿ ದೇಶಗೊಸ್ಕರ ಸೇವೆಯನ್ನು ಸಲ್ಲಿಸಿದ ನಿವೃತ್ತ ವೀರಯೋಧ ಶ್ರೀ ಚೆನ್ನಬಸಪ್ಪ ಸೆಕ್ಯುರಿಟಿ ಹೆಡ್ಡ್ JBF petrochemicals, Mangalore ಇವರಿಗೆ ಗೌರವಾರ್ಪಣೆ ಘಟಕದ ವತಿಯಿಂದ ಮಾಡಲಾಯಿತು 2ವರ್ಷದ ಯಶಸ್ವಿ ಅಧ್ಯಕ್ಷರು ಶ್ರೀ ಶರತ್ ಪೂಜಾರಿ ಬಜಪೆ ಯವರಿಗೆ ಘಟಕದ ಸದಸ್ಯರ ವತಿಯಿಂದ ಸನ್ಮಾನಿಸಲಾಯಿತು. ದೇವಿ ಕಿರಣ್ ರವರ ಚಿತ್ರ ಕಲೆಯಲ್ಲಿ ಮೂಡಿಬಂದ ಬಿರುವೆರ್ ಕುಡ್ಲ ದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಭಾವಚಿತ್ರವನ್ನು ಕೇವಲ ಎರಡು ನಿಮಿಷದಲ್ಲಿ ಬಿಡಿಸಿ ಉದಯ್ ಪೂಜಾರಿ ಯವರಿಗೆ ಹಸ್ತಾಂತರ ಮಾಡಲಾಯಿತು ಇದೆ ಸಮಯದಲ್ಲಿ ನಿರ್ಮಾಪಕ  ಲಕ್ಷ್ಮೀಶ್ ಸುವರ್ಣ ಇವರು ರಚಿಸಿದ ಬಿರುವೆರ್ ಕುಡ್ಲ ಹಾಡನ್ನು ಉದಯ್ ಪೂಜಾರಿ ಯವರು ಬಿಡುಗಡೆ ಮಾಡಿದರು.ಬಂದ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಸಸಿಯನ್ನು ನೀಡಲಾಯಿತು.55e7e667-42f2-4e66-ac08-b146e1b90783

0d7b98df-5b34-4008-b170-0c94d9af5463

ಸಾಂಸ್ಕೃತಿಕ ಕಾರ್ಯಕ್ರಮಗಳು
ಸುವರ್ಣ ಮೆಲೋಡಿಸ್ ಮಂಗಳೂರು ವಿಶ್ವಾಸ್ ಗುರುಪುರ ಮತ್ತು ದೇವಿ ಕಿರಣ್ ಗಣೇಶ್ ಪುರ ಇವರ ಗಾಯನದಲ್ಲಿ ಸಂಗೀತ ಕಾರ್ಯಕ್ರಮ ಮೂಡಿಬಂತು. ನೃತ್ಯ ಕಾರ್ಯಕ್ರಮ Mangalore Amazing Dance Group Bajpe ಹಾಗೂ ತೀರ್ಥ ಪೂಜಾರಿ ಪೊಳಲಿ, ರಿದಮಿಕ್ ಯೋಗ ಕಾರ್ಯಕ್ರಮ ಸುಚೇತ ಪೂಜಾರಿ ಅರ್ಲ ನಡೆಸಿಕೊಟ್ಟರು.

 ಸಂತೋಷ್ ಪೂಜಾರಿ ಸ್ವಾಗತಿಸಿ  ಪ್ರಸಾದ್ ಬೈಧ್ಯ ವಂದಿಸಿ  ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *