ಇಂಗ್ಲೆಂಡ್: ಇಲ್ಲೊಬ್ಬ ವಿಚಿತ್ರ ಅಪ್ಪನನ್ನು ಪರಿಚಯಿಸಿಕೊಡುತ್ತೇವೆ. ಈತ ಸಾಮಾನ್ಯನಾದ ಅಪ್ಪನಲ್ಲ. ಬರೋಬ್ಬರಿ 26 ಮಕ್ಕಳ ಅಪ್ಪ. ಈತನ 26ನೇ ಮಗುವಿಗೆ ಕೇವಲ 9 ತಿಂಗಳು. ಮೊದಲ ಮಗಳಿಗೆ 38 ವರ್ಷಗಳು. ಈಗಲೂ ಮಕ್ಕಳನ್ನೂ ಹುಟ್ಟಿಸುತ್ತಲೇ ಇರುವ ಈತನ ಹೆಸರು ಮೈಕಲ್ ರೀಡ್ ಮ್ಯಾನ್(59).
ಈತನಿಗೆ ಈಗಾಗಲೇ 12 ಪುತ್ರರು ಹಾಗೂ 13 ಪುತ್ರಿಯರಿದ್ದಾರೆ. ಈತನಿಗೆ ಮೊದಲ ಮುಗುವಾಗಿದ್ದು 1976ರಲ್ಲಿ. ಆಕೆಗೆ ಈಗ 38 ವರ್ಷಗಳಾಗಿವೆ. ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಹುಡುಗಿಯರನ್ನು ಇಟ್ಟುಕೊಂಡು ಅವರಿಗೆಲ್ಲಾ ಮಕ್ಕಳು ಕರುಣಿಸುವುದು ಈತನ ಹವ್ಯಾಸ. ಈತನಿಂದ ಮಕ್ಕಳನ್ನು ಪಡೆದ ಎಲ್ಲರೂ ಸಂತಸದಿಂದಿದ್ದಾರೆ.
ಬಸ್ ಡ್ರೈವರ್ ಆಗಿರುವ ಈತ ತನ್ನ ಕೆಲಸದಿಂದಾಗಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾನೆ. ತನ್ನ ಐರಿಷ್ ಪತ್ನಿಯೊಂದಿಗೆ ಇರುವ ಈತ ಆಕೆಯ ಆರು ಮಕ್ಕಳಿಗೆ ತಂದೆಯಾಗಿದ್ದಾನೆ.





