ಬಜ್ಪೆ: ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಜ್ಪೆ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಬಂಧಿಸಿದ ಘಟನೆ ಶನಿವಾರ 11.30ರ ಸುಮಾರಿಗೆ ನಡೆದಿದೆ. ಬಂಧಿತ ಆರೋಪಿಯನ್ನು ಕೇರಳ-ಉಪ್ಪಳ ಮುಟ್ಟಂಗೇಟ್ ನಿವಾಸಿ ಎನ್ ಕೆ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ಖಾದರ್ (26) ಎಂದು ಗುರುತಿಸಲಾಗಿದೆ. ಆದರೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ತಪಾಸಣೆಯ ಬಳಿಕ ಅದು ಸ್ಫೋಟಕ ಸಾಮಗ್ರಿ ಅಲ್ಲ ಸ್ಪಷ್ಟಪಡಿಸಿದ್ದಾರೆ.
ಘಟನೆಯ ವಿವರ: ಮಂಗಳೂರಿನಿಂದ ದುಬೈಗೆ ರಾತ್ರಿ 11.30ರ ಸುಮಾರಿಗೆ ತೆರಳುವ ಜೆಟ್ ಏರ್ವೇಸ್ ವಿಮಾನ ಹೊರಡುವ ಹಂತದಲ್ಲಿತ್ತು. ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಕೊನೆಯ ಕ್ಷಣದ ತಪಾಸಣೆಯಲ್ಲಿ ತೊಡಗಿದ್ದರು. ಅಷ್ಟರಲ್ಲಿ ಉಪ್ಪಳದ ಅಬ್ಬುಲ್ ಖಾದರ್ನ ಬ್ಯಾಗ್ನಲ್ಲಿ ಯಾವುದೋ ಒಂದು ವಸ್ತು ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ತಪಾಸಣೆ ನಡೆಸಿದಾಗ ಮೊಬೈಲ್ ಟ್ಯಾಬ್ ಸೆಟ್, ಮೊಬೈಲ್ ಬ್ಯಾಟರಿ, ಕೆಲವು ವೈರ್(ತಂತಿ)ಗಳು ಹಾಗೂ ರಾಸಾಯನಿಕ ದ್ರಾವಣ ಇರುವ ಬಾಟಲಿ ಎಂದು ತಿಳಿದು ಬಂದಿತು. ಅನುಮಾನಗೊಂಡ ಅಧಿಕಾರಿಗಳು ಆರೋಪಿಯನ್ನು ತಕ್ಷಣ ಬಂಧಿಸಿದ್ದಾರೆ. ರಾಸಾಯನಿಕ ದ್ರಾವಣ ಇರುವ ಬಾಟಲಿ ಹೈಡ್ರೋಜನ್ ಪೆರಾಕ್ಸೈಡ್ ಎಂದು ತಿಳಿದುಬಂದಿದ್ದು ಇದನ್ನು ಗಾಯ ಶುಚಿಗೊಳಿಸಲು ಬಳಸುತ್ತಾರೆನ್ನಲಾಗಿದೆ.

IMG-20140914-WA0020

1air

2air

3air

4air

5air

 

6air

 

 

7air

 

8air

 

 

1

 

2

 

3

4

 

 

5

 

 

6

 

7

 

8

 

9

a15
ಪೊಲೀಸರು ರಾಸಾಯನಿಕ ದ್ರಾವಣವನ್ನು ಕಂಡು ಅಮೋನಿಯಂ ನೈಟ್ರೇಟ್ ಇರಬಹುದೆಂದು ಶಂಕಿಸಿದ್ದು ಇದನ್ನು ಸ್ಫೋಟಕವಾಗಿ ಬಳಸಲು ಸಾಧ್ಯವಿರುವ ಕಾರಣ ಆರೋಪಿ ವಿಮಾನವನ್ನು ಸ್ಫೋಟಿಸಬಹುದು ಎಂಬ ಭಯದಲ್ಲಿ ಬಂಧಿಸಿದ್ದರು. ಬಳಿಕ ಬಜ್ಪೆ ವಿಮಾನ ನಿಲ್ದಾಣದ ಸುತ್ತಮುತ್ತ ಹೈ ಅಲೆಟರ್್ ಘೋಷಿಸಲಾಗಿತ್ತು. ಅಲ್ಲದೆ ಶ್ವಾನದಳ, ಬಜ್ಪೆ ಪೊಲೀಸರು, ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವನ್ನು ಕರೆಸಿ ಭಾರೀ ತಪಾಸಣೆ ನಡೆಸಿ ಸ್ಫೂಟಕ ಸಾಮಗ್ರಿಯನ್ನು ವಿಮಾನ ನಿಲ್ದಾಣದ ಸ್ವಲ್ಪ ದೂರದಲ್ಲಿ ಇಟ್ಟು ಅದರ ಸುತ್ತ ಮರಳಿನ ಗೋಣಿಯನ್ನು ತುಂಬಿಸಿಡಲಾಗಿತ್ತು. ಅಲ್ಲದೆ ಅದರ ಹತ್ತಿರ ಪ್ರಯಾಣಿಕರು ಯಾರೂ ಸುಳಿಯದಂತೆ ಭದ್ರತಾ ಸಿಬ್ಬಂದಿ ಗನ್ ಹಿಡಿದು ಕಾಯುತ್ತಿದ್ದರು.
ನೆರೆಮನೆಯ ಹುಡುಗಿ ಕೊಟ್ಟ ಬ್ಯಾಗ್:
ದುಬೈಯ ಕ್ಯಾಲಿಬರ್ ಕಂಪೆನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುವ ಅಬ್ದುಲ್ ಖಾದರ್ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಒಂದು ತಿಂಗಳ ಅಂತರದ ರಜೆಯ ಬಳಿಕ ಮತ್ತೆ ದುಬೈಗೆ ವಾಪಸಾಗುವ ತರಾತುರಿಯಲ್ಲಿದ್ದ.
ಈ ವೇಳೆ ನೆರೆಮನೆಯ ಹುಡುಗಿಯೋರ್ವಳ ಅಣ್ಣ ಕೂಡಾ ದುಬೈಯಲ್ಲಿ ಕೆಲಸ ಮಾಡುತ್ತಿದ್ದು ಅದನ್ನು ಅಣ್ಣನಿಗೆ ತಲುಪಿಸುವ ಸಲುವಾಗಿ ಆ ಪ್ಯಾಕನ್ನು ಖಾದರ್ಗೆ ನೀಡಿದ್ದಳು. ಇದಕ್ಕೆ ಒಪ್ಪಿದ್ದ ಖಾದರ್ ಅದನ್ನು ಹಿಡಿದುಕೊಂಡು ಬಂದಿದ್ದ. ಈ ಬ್ಯಾಗ್ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಸಿಕ್ಕಿತ್ತು.
ಅಧಿಕಾರಿಗಳು ವಿಚಾರಣೆ ನಡೆಸಿದಾಗ ಖಾದರ್ ವಿಷಯವನ್ನು ಪೊಲೀಸರ ಮನದಟ್ಟು ಮಾಡಲು ಪ್ರಯತ್ನಿಸಿದ. ಆದರೆ ಅಧಿಕಾರಿಗಳು ತಕ್ಷಣ ಆಕೆಯನ್ನು ಸ್ಥಳಕ್ಕೆ ಕರೆಸಬೇಕು ಎಂದು ಒತ್ತಾಯಪಡಿಸಿದ್ದರು. ಅದರಂತೆ ಪೊಲೀಸರು ಇಲ್ಲಿಂದಲೇ ಉಪ್ಪಳ ಪೊಲೀಸರಿಗೆ ಮಾಹಿತಿ ನೀಡಿ ಆಕೆಯನ್ನು ಬಂಧಿಸಲು ಹೇಳಿ, ಆಕೆಯನ್ನು ಬಜ್ಪೆ ಪೊಲೀಸರ ವಶಕ್ಕೆ ಕಳಿಸುವಂತೆ ಮಾಹಿತಿ ನೀಡಿ ಆರೋಪಿ ಅಬ್ದುಲ್ ಖಾದರ್ ನನ್ನು ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಅದರಂತೆ ಯುವತಿಯನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಕರೆಸಿ ಮಾಹಿತಿ ಕೇಳಿದಾಗ ತಾನು ಆ ಪಾಸರ್ೆಲ್ ಕಟ್ಟನ್ನು ನೀಡಿದ್ದು ಹೌದು ಎಂದು ಒಪ್ಪಿದ್ದಾಳೆ.
ಹಾಳಾದ ಟ್ಯಾಬ್ ರಿಪೇರಿಗಾಗಿ ಕೊಂಡೊಯುತ್ತಿದ್ದೆ:
ವಿಚಾರನೆಯ ವೇಳೆ ಅಬ್ದುಲ್ ಖಾದರ್ ತನಗೆ ಪಾಸರ್ೆಲ್ ನೀಡಿದ ಯುವತಿ ಟ್ಯಾಬ್ಲೆಟ್ ಮೊಬೈಲ್ ಹಾಳಾಗಿದ್ದು ಅದನ್ನು ದುಬೈಯಲ್ಲಿ ರಿಪೇರಿ ಮಾಡಲು ಕೊಟ್ಟಿದ್ದಳು. ಅದನ್ನು ರಿಪೇರಿ ಮಾಡಿ ಮತ್ತೆ ಭಾರತಕ್ಕೆ ಕಳಿಸುವ ಆಲೋಚನೆ ಇದ್ದಿತ್ತು. ಅಲ್ಲದೆ ರಾಸಾಯನಿಕ ದ್ರಾವಣವಾದ ಸೋಡಿಯಂ ಪೆರಾಕ್ಸೈಡ್ ದುಬೈಯಲ್ಲಿ ನಿಷೇಧಗಂಡಿರುವುದರಿಂದ ತನ್ನ ಗಾಯವನ್ನು ಶುಚಿಗೊಳಿಸುವ ಸಲುವಾಗಿ ಸಾಗಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ತಡವಾಗಿ ಬಂದ ಬಾಂಬ್ ನಿಷ್ಕ್ರಿಯ ದಳ:
ಸ್ಫೋಟಕ ಸಾಮಗ್ರಿಗಳ ತಪಾಸಣೆ ನಡೆಸಲು ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಅವರು ಮಂಗಳೂರಿಗೆ ಬರುವಾಗ ಬರೋಬ್ಬರಿ ಮಧ್ಯಾಹ್ನ ಒಂದು ಗಂಟೆ ಕಳೆದಿತ್ತು.
ಸುದ್ದಿ ತಿಳಿದ ಪತ್ರಕತ್ರರು ಬೆಳಗ್ಗಿನಿಂದಲೇ ಬೀಡುಬಿಟ್ಟಿದ್ದು, ಅಧಿಕಾರಿಗಳಿಗೆ ಕಾದು ಕಾದು ಸುಸ್ತಾಗಿದ ದರು. ಸ್ಫೋಟಕ ಸಾಮಗ್ರಿಗಳು ಪತ್ತೆಯಾದಾಗಲೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತಡವಾಗಿ ಬಂದಿರುವುದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯಾಕೆಂದರೆ ಒಂದು ವೇಳೆ ಅದು ನಿಜವಾದ ಸ್ಫೋಟಕ ಸಾಮಗ್ರಿಯೇ ಆಗಿರುತ್ತಿದ್ದರೆ , ಅದು ಸ್ಫೋಟಗೊಳ್ಳುವ ಅವಕಾಶ ತುಂಬಾ ಹೆಚ್ಚಿತ್ತು.
ಮುನ್ನೆಚ್ಚೆರಿಕೆಯ ಸಲುವಾಗಿ ಬಂಧಿಸಲಾಗಿದೆ ಸ್ಫೋಟಕ ದೊರೆಯಲಿಲ್ಲ: : ಡಿಸಿಪಿ ಕೆವಿ ಜಗದೀಶ್:
ವಿಮಾನದಲ್ಲಿ ಸ್ಫೋಟಕ ಸಾಮಗ್ರಿ ಹಾಗೂ ಎಲೆಕ್ಟ್ರಾನಿಕ್ ಸೊತ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯ್ತು. ಬೆಂಗಳೂರಿನಿಂದ ಬಂದ ಬಾಂಬ್ ಪತ್ತೆದಳ ಹಾಗೂ ವಿಲೇವಾರಿ ತಂಡಕ್ಕೆ ಇದರ ತಪಾಸಣೆಗೆ ಒಪ್ಪಿಸಲಾಗಿದೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ದೊರೆಯಲಿಲ್ಲ. ಬ್ಯಾಟರಿಗೆ ಹಾನಿಯಾಗಿದ್ದು, ಉಳಿದಂತೆ ಯಾವ ತೊಂದರೆಯೂ ಇಲ್ಲ. ಇದನ್ನು ವಿಧಿವಿಜ್ಞಾನದ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಕಣ್ಣೀರಿಟ್ಟ ಆರೋಪಿಯ ತಂದೆ:
ಅಬ್ದುಲ್ ಖಾದರ್ ತಂದೆ ಎನ್ ಕೆ ಮುಹಮ್ಮದ್ ಅವರು ತನ್ನ ಮಗನಿಗೆ ಯಾವುದೇ ಭಯೋತ್ಪಾದಕರ ನಂಟಿಲ್ಲ. ಅಲ್ಲದೆ ನನ್ನ ಮಗ ಯಾವುದೇ ತಪ್ಪು ಮಾಡಿರಲಾರ ಎಂಬ ನಂಬಿಕೆ ಇದೆ. ವಿಚಾರಣೆಯ ದೃಷ್ಟಿಯಿಂದಷ್ಟೇ ಬಂಧಿಸಲಾಗಿದೆ. ಆತ ಹತ್ತು ವರ್ಷಗಳಿಂದ ದುಬೈಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ವೇಳೆ ಆತ ಅಪರಾಧಿ ಎಂದು ಸಾಬೀತಾದರೆ ಆತನನ್ನು ಬಂಧಿಸಿ ಸೂಕ್ತ ಕಾನೂನಿನ ಶಿಕ್ಷೆಗೊಳಪಡಿಸಲಿ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಬಂಧಿತ ಅಬ್ದುಲ್ ಖಾದರ್ ತಂದೆ ಎನ್ ಕೆ ಮುಹಮ್ಮದ್ ಪತ್ರಕರ್ತರಲ್ಲಿ ಮಾತಾಡುತ್ತಾ ಕಣ್ಣೀರಿಟ್ಟರು.
ಅದರಂತೆ ಅಧಿಕಾರಿಗಳು ಅದು ಯಾವುದೇ ಸ್ಫೋಟಕ ಸಾಮಗ್ರಿ ಅಲ್ಲವೆಂದು ಹೇಳಿಕೆ ನೀಡಿರುವುದರಿಂದ ಖಾದರ್ ಮನೆಯವರು ನಿರಾಳರಾಗಿದ್ದಾರೆ.
ಆತಂಕ ಯಾಕೆ?
ಭದ್ರತಾ ಅಧಿಕಾರಿಗಳ ಅನುಮಾನಕ್ಕೆ ಕಾರಣವೂ ಇದೆ. ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕವಾಗಿ ಬಳಸಲು ಸಾಧ್ಯವಿದೆ. ಇದನ್ನು ಜಿಲೆಟಿನ್ ಕಡ್ಡಿಗಳೊಂದಿಗೆ ಸೇರಿಸಿ ಮೊಬೈಲ್ ಬ್ಯಾಟರಿ ಮೂಲಕ ಗೀರಿದರೆ ಅದು ಸ್ಫೋಟಗೊಂಡು ಇಡೀ ವಿಮಾನವೇ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅಧಿಕಾರಿಗಳು ಭಾರೀ ಆತಂಕಕ್ಕೆ ಒಳಗಾಗಿದ್ದರು. ಭಯೋತ್ಪಾದಕರೂ ಅನೇಕ ಬಾರಿ ಇದೇ ರೀತಿ ಬಾಂಬ್ ಸ್ಪೋಟಿಸುವ ಹಂತದಲ್ಲಿ ಸಿಕ್ಕಿಬಿದ್ದಿದ್ದು ಈಗಾಗಲೇ ಕಂಬಿ ಎಣಿಸುತ್ತಿದ್ದಾರೆ.
ಎಚ್ಚರ: ಭದ್ರತಾ ಅಧಿಕಾರಿಗಳು ವಿಮಾನದಲ್ಲಿ ತೆರಳುವ ವೇಳೆ ಯಾವುದಾದರೂ ವಸ್ತುಕೊಟ್ಟು ಅದನ್ನು ತಲುಪಿಸಲು ಹೇಳಿದರೆ ಭಾರೀ ಎಚ್ಚರ ಅಗತ್ಯ ಎಂದು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಡಿಸಿಪಿ ಡಾ. ಕೆವಿ ಜಗದೀಶ್, ಪಣಂಬೂರು ಎಸಿಪಿ ರವಿ ಕುಮಾರ್, ಅಪರಾಧ ವಿಭಾಗದ ಡಿಸಿಪಿ ವಿಷ್ಣುವರ್ಧನ್, ಬಜ್ಪೆ ಇನ್ಸ್ಪೆಕ್ಟರ್ ನರಸಿಂಹ ಮೂತರ್ಿ, ಕೆಸ್ಪಿ ಮಂಜಯ್ಯ ಭಂಡಾರಿ, ಗುಪ್ತಚರ ಇಲಾಖೆಯ ವಿನೋದ್ ಮುಂತಾದವರು ಆಗಮಿಸಿದ್ದರು.

By suddi9

Leave a Reply

Your email address will not be published. Required fields are marked *